ಬೆಂಗಳೂರು: ಕಿಚ್ಚ ಸುದೀಪ್(Kichcha Sudeep) ಅವರ ʼಮ್ಯಾಕ್ಸ್ʼ(Max Movie) ಚಿತ್ರದ ಬಗ್ಗೆ ಕಾಯುತ್ತಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ.
ʼವಿಕ್ರಾಂತ್ ರೋಣʼ ಬಳಿಕ ಒಂದಷ್ಟು ಗ್ಯಾಪ್ ಪಡೆದುಕೊಂಡ ಕಿಚ್ಚ ಮತ್ತೆ ʼಮ್ಯಾಕ್ಸ್ʼ ಮೂಲಕ ಬಿಗ್ ಸ್ಕ್ರೀನ್ ನಲ್ಲಿ ಸಿನಿಮಂದಿಯನ್ನು ರಂಜಿಸಲಿದ್ದಾರೆ. ʼಮ್ಯಾಕ್ಸ್ʼ ಸೆಟ್ಟೇರಿದ ಬಳಿಕ ಅಷ್ಟಾಗಿ ಅಪ್ಡೇಟ್ ಸಿಗದೆ ಇರುವುದರಿಂದ ಫ್ಯಾನ್ಸ್ ಗಳಿಗೆ ಬೇಜಾರ್ ಆಗಿದೆ.
ಶೂಟಿಂಗ್ ಮುಗಿಸಿರುವ ʼಮ್ಯಾಕ್ಸ್ʼ ಶೀಘ್ರದಲ್ಲೇ ಬಿಗ್ ಅಪ್ಡೇಟ್ ನೀಡುವುದಾಗಿ ಇತ್ತೀಚೆಗೆ ಹೇಳಿತ್ತು. ಟೀಸರ್ ಆದರೂ ರಿಲೀಸ್ ಮಾಡಿ ಎಂದೂ ಅಭಿಮಾನಿಗಳು ಕೇಳುತ್ತಿದ್ದಾರೆ.
ಇದೀಗ ಚಿತ್ರತಂಡ ಬಿಗ್ ಅಪ್ಡೇಟ್ ಯಾವಾಗ ಸಿಗಲಿದೆ ಎನ್ನುವುದನ್ನು ರಿವೀಲ್ ಮಾಡಿದೆ. ಜುಲೈ.16 ರಂದು ಮಧ್ಯಾಹ್ನ 12:34ಕ್ಕೆ ʼಮ್ಯಾಕ್ಸ್ʼ ಬಿಗ್ ಅಪ್ಡೇಟ್ ಬರಲಿದೆ ಎಂದು ʼಕೆಆರ್ ಜಿʼ ಹೇಳಿದೆ. ಇದನ್ನು ಕಿಚ್ಚ ಹಂಚಿಕೊಂಡಿದ್ದಾರೆ.
ಜು.16 ರಂದು ʼಮ್ಯಾಕ್ಸ್ʼ ಟೀಸರ್ ಬರುತ್ತೋ ಟ್ರೇಲರ್ ಬರುತ್ತೋ ಅಥವಾ ರಿಲೀಸ್ ಡೇಟ್ ಅನೌನ್ಸ್ ಆಗುತ್ತೋ ಎನ್ನುವುದನ್ನು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ಇದೇ ವರ್ಷ ʼಮ್ಯಾಕ್ಸ್ʼ ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ. ಬರುವ ತಿಂಗಳು ಅಂದರೆ ಆಗಸ್ಟ್ ನಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಆಗಸ್ಟ್ 15ರಂದು, ಸ್ವಾತಂತ್ರ್ಯ ದಿನದಂದು ʼಮ್ಯಾಕ್ಸ್ʼ ಥಿಯೇಟರ್ ಗೆ ಎಂಟ್ರಿ ಕೊಡಲಿದೆ ಎನ್ನಲಾಗುತ್ತಿದೆ. ಸರ್ಕಾರಿ ರಜೆ ಹಾಗೂ ವೀಕೆಂಡ್ ಹಾಲಿಡೇ ಇರುವುದರಿಂದ ಅದೇ ಸಮಯದಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎನ್ನುವ ಮಾತುಗಳು ಸಿನಿವಲಯದಲ್ಲಿ ಹರಿದಾಡಿದೆ.
ಆದರೆ ಈ ಬಗ್ಗೆ ಇನ್ನು ಕೂಡ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ಇನ್ನೊಂದು ಮೂಲಗಳ ಪ್ರಕಾರ ಕಿಚ್ಚನ ಹುಟ್ಟುಹಬ್ಬದ ಸಂದರ್ಭದಲ್ಲಿ(ಸೆಪ್ಪೆಂಬರ್ ತಿಂಗಳಿನಲ್ಲಿ) ತೆರೆ ಕಾಣಬಹುದು ಎನ್ನುವ ಮಾತುಗಳೂ ಕೇಳಿ ಬರುತ್ತಿದೆ.
ಕಾಲಿವುಡ್ ನ ವಿಜಯ್ ಕಾರ್ತಿಕೇಯನ್ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ವಿ ಕ್ರಿಯೇಷನ್ಸ್ ಅಡಿಯಲ್ಲಿ ಖ್ಯಾತ ನಿರ್ಮಾಪಕ ಕಲೈಪುಲಿ ಎಸ್. ಥಾನು ಅವರು ಸಿನಿಮಾಕ್ಕೆ ಬಂಡವಾಳ ಹಾಕಿದ್ದಾರೆ. ಅಜನೀಶ್ ಅವರ ಸಂಗೀತ ಚಿತ್ರಕ್ಕಿದೆ.
ಚಿತ್ರದಲ್ಲಿ ಕಿಚ್ಚ ಅರ್ಜುನ್ ಮಹಾಕ್ಷಯ್ ಎನ್ನುವ ಖಡಕ್ ಪೊಲೀಸ್ ಆಫೀಸರ್ ಆಗಿ ಸುದೀಪ್ ಬಣ್ಣ ಹಚ್ಚಿದ್ದಾರೆ.
ಕಿಚ್ಚನ ಜೊತೆ ಸಂಯುಕ್ತ ಹೊರ್ನಾಡ್, ಸುಕೃತಾ ವಾಗ್ಲೆ ಮತ್ತು ಅನಿರುದ್ಧ ಭಟ್ ಮುಂತಾದ ಕಲಾವಿದರು ನಟಿಸಿದ್ದಾರೆ.
ಅಂದಹಾಗೆ, “ಮ್ಯಾಕ್ಸ್ʼ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ.