Advertisement

ಸುದೀಪ್‌ ಅವರ 46ನೇ ಚಿತ್ರದ ಟೀಸರ್‌ ಬಿಡುಗಡೆ ಯಾವಾಗ ಎಂಬ ಕುತೂಹಲ ಹಲವು ದಿನಗಳಿಂದ ಅವರ ಅಭಿಮಾನಿಗಳಲ್ಲಿತ್ತು. ಕೆಲವು ದಿನಗಳ ಹಿಂದಷ್ಟೇ ನಿರ್ಮಾಣ ಸಂಸ್ಥೆ ವಿಡಿಯೋವೊಂದನ್ನು ಬಿಟ್ಟು ಶೀಘ್ರದಲ್ಲಿಯೇ ಟೀಸರ್‌ ಎಂದು ಹೇಳಿತ್ತು. ಆದರೆ, ಯಾವಾಗ ಎಂಬ ಸ್ಪಷ್ಟತೆ ಇರಲಿಲ್ಲ. ಈಗ ಉತ್ತರ ಸಿಕ್ಕಿದೆ. ಜುಲೈ 2ರಂದು ಬೆಳಗ್ಗೆ 11.46ಕ್ಕೆ ಕಿಚ್ಚ ಸುದೀಪ್‌ ಅವರ 46ನೇ ಸಿನಿಮಾದ ಟೀಸರ್‌ ಬಿಡುಗಡೆಯಾಗಲಿದೆ. ಈ ಮೂಲಕ ಸಿನಿಮಾದ ಬಗೆಗಿನ ಆರಂಭದ ಕುತೂಹಲಕ್ಕೆ ತೆರೆಬೀಳಲಿದೆ. ಈ ವಿಚಾರವನ್ನು ನಿರ್ಮಾಪಕ ಕಲೈಪುಲಿ ಎಸ್‌ ತನು ಅವರೇ ಸ್ಪಷ್ಟಪಡಿಸಿದ್ದಾರೆ.

Advertisement

ಕಳೆದ ಕೆಲ ದಿನಗಳಿಂದ ಸುದೀಪ್‌ ಹೊಸ ಸಿನಿಮಾದ ಟೀಸರ್‌ ಮೇಕಿಂಗ್‌ ಹಾಗೂ ಅದರ ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ಕೂಡ ತೆರೆಮರೆಯಲ್ಲಿ ಭರದಿಂದ ನಡೆದಿದೆ. ಅದರಂತೆ, ಸುದೀಪ್‌ ಅಭಿಮಾನಿಗಳ ಚಿತ್ತ ಈಗ ಟೀಸರ್‌ನತ್ತ ನೆಟ್ಟಿದೆ. ತಮ್ಮ ನೆಚ್ಚಿನ ಕಿಚ್ಚನ ಮುಂದಿನ ಸಿನಿಮಾ ಯಾವುದು ಎಂದು ತುದಿಗಾಲಿನಲ್ಲಿ ಕಾಯುತ್ತಿದ್ದರು.

ಎಲ್ಲವೂ ಅಂದುಕೊಂಡಂತೆ ಆದರೆ, ಇಷ್ಟೊತ್ತಿಗಾಗಲೇ ಈ ಚಿತ್ರದ ಟೀಸರ್‌ ಬಿಡುಗಡೆಯಾಗಬೇಕಿತ್ತು. ಆದರೆ, ಸುದೀಪ್‌ ಅವರ ಅಕ್ಕನ ಮಗ ಸಂಚಿತ್‌ ನಟಿಸಿ, ನಿರ್ದೇಶಿಸುತ್ತಿರುವ ಹೊಸ ಸಿನಿಮಾದ ಫ‌ಸ್ಟ್‌ ಲುಕ್‌ ಹಾಗೂ ಟೈಟಲ್‌ ರಿಲೀಸ್‌ ಕಾರ್ಯಕ್ರಮ ಇದ್ದಿದ್ದರಿಂದ ಸುದೀಪ್‌ ಅವರ ಚಿತ್ರದ ಟೀಸರ್‌ ಬಿಡುಗಡೆಯನ್ನು ಮುಂದಕ್ಕೆ ಹಾಕಿದ್ದರು ಎನ್ನಲಾಗಿದೆ.

ಹೊಸ ಚಿತ್ರವನ್ನು ತಮಿಳಿನ ಖ್ಯಾತ ನಿರ್ಮಾಪಕ ಕಲೈಪುಲಿ ಎಸ್‌ ತನು ನಿರ್ಮಿಸುತ್ತಿದ್ದಾರೆ. “ಕಬಾಲಿ’., “ತೇರಿ’, “ತುಪಾಕಿ’, “ಅಸುರನ್‌’ ಸೇರಿದಂತೆ ಅನೇಕ ಸಿನಿಮಾಗಳನ್ನು ನಿರ್ಮಿಸಿರುವ ಇವರು ಈಗ ಕಿಚ್ಚ ಸುದೀಪ್‌ ಅವರ 46ನೇ ಚಿತ್ರ ನಿರ್ಮಿಸುತ್ತಿದ್ದಾರೆ.

ರವಿಪ್ರಕಾಶ್‌ ರೈ

Advertisement
Advertisement

Udayavani is now on Telegram. Click here to join our channel and stay updated with the latest news.

Next