Advertisement

ಕೆಜಿಎಫ್-2 ಟ್ರೇಲರ್‌ ಗೆ ತಾರೆಯರ ಸಾಥ್

03:15 PM Mar 28, 2022 | Team Udayavani |

ಸಿನಿಪ್ರಿಯರು ಮತ್ತು ಯಶ್‌ ಅಭಿಮಾನಿಗಳು ಬಹು ದಿನಗಳಿಂದ ಕಾದು ಕುಳಿತಿದ್ದ ಬಹುನಿರೀಕ್ಷಿತ “ಕೆಜಿಎಫ್-2′ ಸಿನಿಮಾದ ಮೊದಲ ಟ್ರೇಲರ್‌ ಭಾನುವಾರ ಸಂಜೆ ಬಿಡುಗಡೆಯಾಯಿತು. ಕನ್ನಡದ ಜೊತೆಗೆ ತಮಿಳು, ತೆಲುಗು, ಮಲೆಯಾಳಂ ಮತ್ತು ಹಿಂದಿ ಸೇರಿದಂತೆ ಐದು ಭಾಷೆಗಳಲ್ಲೂ “ಕೆಜಿಎಫ್-2′ ಟ್ರೇಲರ್‌ ಏಕಕಾಲಕ್ಕೆ ಬಿಡುಗಡೆಯಾಗಿದ್ದು ವಿಶೇಷ.

Advertisement

ಬೆಂಗಳೂರಿನ ಓರಿಯನ್‌ ಮಾಲ್‌ನಲ್ಲಿ ನಡೆದ ಸಮಾರಂಭದಲ್ಲಿ “ಕೆಜಿಎಫ್-2′ ಸಿನಿಮಾದ ಟ್ರೇಲರ್‌ ಬಿಡುಗಡೆ ಸಮಾರಂಭಕ್ಕೆ ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್‌ ವಿಶೇಷ ಅತಿಥಿಯಾಗಿ ಆಗಮಿಸಿ ಟ್ರೇಲರ್‌ ಬಿಡುಗಡೆ ಮಾಡಿದರು. ಬಾಲಿವುಡ್‌ನ‌ ಖ್ಯಾತ ನಿರೂಪಕ ಹಾಗೂ ನಿರ್ಮಾಪಕ ಕರಣ್‌ ಜೋಹರ್‌ “ಕೆಜಿಎಫ್’ ಟ್ರೇಲರ್‌ ರಿಲೀಸ್‌ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಇದನ್ನೂ ಓದಿ:ರಕ್ತಸಿಕ್ತ ‘ಕೆಜಿಎಫ್’ ಸಾಮ್ರಾಜ್ಯದ ಹೊಸ ಅಧ್ಯಾಯ

ಚಿತ್ರದ ನಾಯಕ ನಟ ಯಶ್‌, ಬಾಲಿವುಡ್‌ ನಟ ಸಂಜಯ್‌ ದತ್‌, ನಟಿ ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್‌, ಮಲೆಯಾಳಂ ನಟ ಪೃಥ್ವಿರಾಜ್‌ ಸುಕುಮಾರನ್‌, ವಿತರಕ ಅನೀಲ್‌ ತಡಾನಿ, ರಿತೇಶ್‌, ನಿರ್ದೇಶಕ ಪ್ರಶಾಂತ್‌ ನೀಲ್‌, ನಿರ್ಮಾಪಕ ವಿಜಯ್‌ ಕಿರಗಂದೂರು ಮೊದಲಾದವರು ಕಾರ್ಯಕ್ರಮದಲ್ಲಿ ಹಾಜರಿದ್ದು “ಕೆಜಿಎಫ್-2′ ಚಿತ್ರದ ಬಗ್ಗೆ ತಮ್ಮ ಅನಿಸಿಕೆ, ಅಭಿಪ್ರಾಯ ಹಂಚಿಕೊಂಡರು.

ಇನ್ನು “ಕೆಜಿಎಫ್-2′ ಸಿನಿಮಾದ ಟ್ರೇಲರ್‌ಗೆ ತಮಿಳಿನಲ್ಲಿ ಸೂರ್ಯ, ತೆಲುಗಿನಲ್ಲಿ ರಾಮ್‌ ಚರಣ್‌ತೇಜ ವಿಡಿಯೋ ಮೂಲಕ ಶುಭ ಹಾರೈಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next