Advertisement

ಇಂದಿನಿಂದ ಕೆಜಿಎಫ್-2 ಹವಾ; ಹತ್ತು ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆ

08:42 AM Apr 14, 2022 | Team Udayavani |

ಅಭಿಮಾನಿಗಳ ಕಾತರಕ್ಕೆ ತೆರೆಬಿದ್ದಿದೆ. ಬಹುದಿನಗಳಿಂದ ಕಾಯುತ್ತಿದ್ದ ಸಿನಿಮಾ ಬಿಡುಗಡೆಯಾಗಿದೆ. ಹೌದು, ಯಶ್‌ ನಟನೆಯ “ಕೆಜಿಎಫ್-2′ ಚಿತ್ರದ ಹವಾ ಜೋರಾಗಿಯೇ ಶುರುವಾಗಿದೆ.

Advertisement

ಬುಧವಾರ ರಾತ್ರಿಯಿಂದಲೇ ಆರಂಭವಾಗಿರುವ “ಕೆಜಿಎಫ್-2′ ಶೋ ನೋಡಲು ಚಿತ್ರಮಂದಿರಕ್ಕೆ ಫ್ಯಾನ್ಸ್‌ ಮುಗಿಬೀಳುತ್ತಿದ್ದಾರೆ. ಇನ್ನು, ಅನೇಕ ಚಿತ್ರಮಂದಿರಗಳಲ್ಲಿ ಗುರುವಾರ ಬೆಳಗ್ಗೆ 4 ಗಂಟೆಯಿಂದಲೇ ಸಿನಿಮಾದ ಪ್ರದರ್ಶನ ಆರಂಭವಾಗುತ್ತಿದೆ. ವಿಶೇಷವಾಗಿ ಫ್ಯಾನ್ಸ್‌ ಶೋ ಆಯೋಜಿಸಿದ್ದು, ಇದರ ಟಿಕೆಟ್‌ ದರ ಕೂಡಾ ದುಬಾರಿಯಾಗಿದೆ.

ಚಿತ್ರದ ಶೋ ವಿಚಾರದಲ್ಲೂ ದಾಖಲೆ ಬರೆಯಲಿದ್ದು, 5 ಸಾವಿರಕ್ಕೂ ಹೆಚ್ಚು ಶೋ ಮೂಲಕ ಪ್ರದರ್ಶನ ಕಾಣಲಿದೆ. ಇದರ ಜೊತೆಗೆ ಚಿತ್ರ ಕಲೆಕ್ಷನ್‌ ವಿಚಾರದಲ್ಲೂ ದಾಖಲೆ ಬರೆಯುವ ನಿರೀಕ್ಷೆ ಇದೆ. ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದ್ದು, ಎಲ್ಲಾ ಭಾಷೆಯಲ್ಲೂ ಚಿತ್ರದ ಕ್ರೇಜ್‌ ಹೆಚ್ಚಿದೆ.

ಯಶ್‌ ಸಿನಿಮಾ ನಾಲ್ಕು ವರ್ಷಗಳ ಬಳಿಕ ಬಿಡುಗಡೆಯಾಗುತ್ತಿರುವುದರಿಂದ ಅವರ ಅಭಿಮಾನಿಗಳು “ಕೆಜಿಎಫ್-2′ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಸಂಭ್ರಮಿಸಲು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಚಿತ್ರಮಂದಿರಗಳ ಮುಂದೆ ಬೃಹತ್‌ ಗಾತ್ರದ ಕಟೌಟ್‌ ತಲೆ ಎತ್ತಿವೆ. ಪ್ರತಿ ಚಿತ್ರಮಂದಿರಗಳ ಮುಂದೆಯೂ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸಿನಿಮಾವನ್ನು ಸಂಭ್ರಮಿಸಲಿದ್ದಾರೆ. ಚಿತ್ರಕ್ಕೆ ವಿದೇಶಗಳಲ್ಲೂ ಬೇಡಿಕೆ ಇದ್ದು, ಅಲ್ಲಿನ ಕನ್ನಡ ಸಂಘಗಳು ಈ ಸಿನಿಮಾವನ್ನು ಸಂಭ್ರಮಿಸುತ್ತಿದೆ.

ಕೆಜಿಎಫ್-2 ಚಿತ್ರಕ್ಕೆ ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ಬೇಡಿಕೆ ಸೃಷ್ಟಿಯಾಗಿರುವುದರಿಂದ ಚಿತ್ರ ಕಲೆಕ್ಷನ್‌ ವಿಷಯ ದಲ್ಲೂ ದಾಖಲೆ ಬರೆಯುವ ನಿರೀಕ್ಷೆ ಇದೆ.

Advertisement

“ಆರ್‌ಆರ್‌ಆರ್‌’ ಚಿತ್ರ ಮೊದಲ ದಿನ 223 ಕೋಟಿ ರೂಪಾಯಿ ಕಲೆಕ್ಷನ್‌ ಮಾಡಿತ್ತು. ಈಗ “ಕೆಜಿಎಫ್-2′ ಈ ದಾಖಲೆಯನ್ನು ಮುರಿಯುವ ನಿರೀಕ್ಷೆ ಇದೆ. ಇನ್ನು, “ಕೆಜಿಎಫ್-2′ ಮುಂದೆ ಬಿಡುಗಡೆಗೆ ಸಿದ್ಧವಾಗಿದ್ದ ಸಿನಿಮಾಗಳು ಕೂಡಾ ತಮ್ಮ ಬಿಡುಗಡೆಯನ್ನು ಮುಂದಕ್ಕೆ ಹಾಕಿವೆ. ಇದಲ್ಲದೇ, ಏ.13ರಂದು ತೆರೆಕಂಡಿರುವ “ಬೀಸ್ಟ್‌’ ಸಿನಿಮಾ ಬಗ್ಗೆಯೂ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇವೆಲ್ಲವೂ “ಕೆಜಿಎಫ್-2’ಗೆ ಮತ್ತಷ್ಟು ಪ್ಲಸ್‌ ಆಗಲಿದೆ.

ಹೊಂಬಾಳೆ ಫಿಲಂಸ್‌ ನಡಿ ಈ ಚಿತ್ರವನ್ನು ವಿಜಯ್‌ ಕಿರಗಂದೂರು ನಿರ್ಮಿಸಿದ್ದು, ಪ್ರಶಾಂತ್‌ ನೀಲ್‌ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಯಶ್‌, ಶ್ರೀನಿಧಿ ಶೆಟ್ಟಿ, ಸಂಜಯ್‌ ದತ್‌, ರವೀನಾ ಟಂಡನ್‌ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next