Advertisement
ಮಲಪ್ಪುರಂ ಜಿಲ್ಲೆಯಲ್ಲಿ ಇತ್ತೀಚೆಗೆ ‘ಮದರಸಾ’ ಕಟ್ಟಡ ಉದ್ಘಾಟನೆ ವೇಳೆ ವಿದ್ಯಾರ್ಥಿಗಳನ್ನು ಅಭಿನಂದಿಸುವ ವೇಳೆ ಈ ಘಟನೆ ನಡೆದಿದೆ. ವಿದ್ಯಾರ್ಥಿನಿಯನ್ನು ವೇದಿಕೆಗೆ ಕರೆದಿದ್ದಕ್ಕೆ ಸಮಸ್ತ ಮುಖಂಡ ಎಂಟಿ ಅಬ್ದುಲ್ಲಾ ಮುಸ್ಲಿಯಾರ್ ತನ್ನ ಅಕ್ಕ ಪಕ್ಕದಲ್ಲಿ ನಿಂತಿದ್ದವರನ್ನು ಗದರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Related Articles
Advertisement
ಸಮರ್ಥನೆ
ಸಮಾರಂಭದಲ್ಲಿ 10 ನೇ ತರಗತಿ ವಿದ್ಯಾರ್ಥಿನಿಯನ್ನು ಅವಮಾನಿಸಲಾಗಿದೆ ಎಂಬ ಆರೋಪವನ್ನು ತಿರಸ್ಕರಿಸಿದ ಸಮಸ್ತದ ಅಧ್ಯಕ್ಷ ಜಿಫ್ರಿ ಮುತ್ತುಕ್ಕೋಯ ತಂಘಲ್, ಘಟನೆಗೆ ಸಂಬಂಧಿಸಿದಂತೆ ಆಕೆ ಅಥವಾ ಅವರ ಕುಟುಂಬ ಯಾವುದೇ ದೂರು ನೀಡಿಲ್ಲ ಎಂದು ಹೇಳಿದ್ದಾರೆ.
ಅಬ್ದುಲ್ಲಾ ಮುಸ್ಲಿಯಾರ್, ಸಂಸ್ಥೆಯು ಕೆಲವು ನಂಬಿಕೆಗಳು ಮತ್ತು ತೀರ್ಪುಗಳನ್ನು ಹೊಂದಿದ್ದು, ಅದನ್ನು ಬದಲಾಯಿಸಲಾಗುವುದಿಲ್ಲ ಎಂದು ಸೂಚಿಸಿದರು. ಈ ಸಂದರ್ಭದಲ್ಲಿ ‘ಅವಮಾನ’ ಎಂಬ ಪದದ ಬಳಕೆಯೂ ತಪ್ಪಾಗಿದೆ, ಆಲ್ ಕೇರಳ ಉಲೇಮಾ ಅಸೋಸಿಯೇಷನ್ ನಲ್ಲಿ ಪುರುಷರು ಮತ್ತು ಮಹಿಳೆಯರು ಒಟ್ಟಿಗೆ ವೇದಿಕೆಯನ್ನು ಹಂಚಿಕೊಳ್ಳುವ ಯಾವುದೇ ಪದ್ಧತಿ ಇಲ್ಲ ಎಂದು ಅವರು ಹೇಳಿದರು.
“ಅವಳ ಮುಖವನ್ನು ನೋಡುತ್ತಿರುವಾಗ , ಉಸ್ತಾದರು ಕುಳಿತಿದ್ದ ವೇದಿಕೆಯ ಮೇಲೆ ಬರಲು ಹುಡುಗಿ ನಾಚಿಕೆಪಡುತ್ತಾಳೆ ಎಂದು ವಿದ್ವಾಂಸರು ಭಾವಿಸಿದರು. ವೇದಿಕೆಗೆ ಆಹ್ವಾನಿಸಿದರೆ ಇತರ ಹುಡುಗಿಯರು ಸಹ ಅದೇ ಭಯವನ್ನು ಹೊಂದಬಹುದು ಎಂದು ಅವರು ಭಾವಿಸಿದರು. ಹೀಗಾಗಿ ಇಂತಹ ಹುಡುಗಿಯರನ್ನು ವೇದಿಕೆಗೆ ಕರೆಯಬೇಡಿ ಎಂದು ಸಂಘಟಕರನ್ನು ಕೋರಿದರು’ ಎಂದು ಹೇಳಿದರು.