Advertisement

ಮುಂದೆ ಎರಡು ವರ್ಷ ಇಲ್ಲದ ಶುಭ ಮುಹೂರ್ತ ; ವಿಡಿಯೋ ಕಾಲ್ ಮೂಲಕವೇ ನಡೆದ ವಿವಾಹ!

06:13 PM May 02, 2020 | Hari Prasad |

ತಿರುವನಂತಪುರಂ: ಕೋವಿಡ್ ವೈರಸ್ ಮಣಿಸಲು ದೇಶವ್ಯಾಪಿ ವಿಧಿಸಲಾಗಿರುವ ಲಾಕ್ ಡೌನ್ ಹಲವಾರು ವೈಚಿತ್ರ್ಯಗಳಿಗೆ ಕಾರಣವಾಗುತ್ತಿದೆ. ಲಾಕ್ ‌ಡೌನ್‌ನಿಂದಾಗಿ ವೀಡಿಯೋ ಕಾಲ್‌ ಮೂಲಕ ಮದುವೆ ಕಾರ್ಯಕ್ರಮವೂ ನಡೆದಿದೆ.

Advertisement

ಕೊಟ್ಟಾಯಂನಲ್ಲಿ ವರ ಶ್ರೀಜಿತ್‌ ನಟೇಶನ್‌, ವಧು ಅಂಜನಾ ಲಕ್ನೋದಲ್ಲಿ. ಪ್ರಯಾಣಕ್ಕೆ ಅಡ್ಡಿ ಮತ್ತು ಮುಂದಿನ 2 ವರ್ಷಗಳವರೆಗೆ ಶುಭ ದಿನ ಇಲ್ಲದೇ ಇರುವ ಬಗ್ಗೆ ಅರಿತ 2 ಕುಟುಂಬಗಳು ಇಂಥ ಸಾಹಸಕ್ಕೆ ನಿರ್ಧರಿಸಿದವು.

ವೀಡಿಯೋ ಕರೆ ಮಾಡಿಸಿ, ವರನು ಫೋನ್‌ಗೆ ಮಂಗಳ ಸೂತ್ರ ಕಟ್ಟುವ ಮೂಲಕ ಮದುವೆ ಪೂರ್ಣಗೊಳಿಸಿದ್ದಾನೆ. ಈ ವೇಳೆ ವೀಡಿಯೋ ಕರೆಯಲ್ಲಿ ವಧು ಕೂಡ ಪರದೆ ಮೇಲಿದ್ದಳು.

ಸದ್ಯಕ್ಕೆ ಈ ದಂಪತಿ ಲಾಕ್‌ಡೌನ್‌ ನಿರ್ಬಂಧ ತೆಗೆದುಹಾಕುವುದನ್ನು ಕಾಯುತ್ತಿದ್ದಾರೆ. ನಂತರದ ದಿನಗಳಲ್ಲಿ ವಿವಾಹ ಸಂಬಂಧ ದೊಡ್ಡ ಕಾರ್ಯಕ್ರಮ ಆಯೋಜಿಸುವ ಕುರಿತು ಯೋಚಿಸಿದೆ.

ಸೋಂಕಿನಿಂದ ಕೇರಳದ ಶಿಕ್ಷಕಿ ಸಾವು
ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಕೇರಳ ಮೂಲದ ಶಿಕ್ಷಕಿ ಪ್ರಿನ್ಸಿ ರಾಯ್‌ ಮ್ಯಾಥ್ಯೂ ಕೊನೆಯುಸಿರೆಳೆದಿದ್ದಾರೆ. ಅವರು ಅಬುದಾಭಿಯಲ್ಲಿ ಇರುವ ಅಬುದಾಭಿ ಇಂಡಿಯನ್‌ ಸ್ಕೂಲ್‌ನಲ್ಲಿ ಹಿರಿಯ ಶಿಕ್ಷಕಿಯಾಗಿದ್ದರು.

Advertisement

ಕಳೆದವಾರ ಜ್ವರದಿಂದ ಪ್ರಿನ್ಸಿ ನರಳುತ್ತಿದ್ದರು. ಜ್ವರದ ತಾಪಮಾನ ಹೆಚ್ಚಾಗಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು. ತಕ್ಷಣ ಆಸ್ಪತ್ರೆಗೆ ಸೇರಿಸಿದೆವು. ವೈದರು ಪರೀಕ್ಷೆ ನಡೆಸಿದಾಗ ಕೋವಿಡ್ ಸೋಂಕು ಇರುವುದು ದೃಢಪಟ್ಟಿತ್ತು ಎಂದು ಪತಿ ರಾಯ್‌ ಮ್ಯಾಥ್ಯೂ ಸ್ಯಾಮ್ಯುಲ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next