Advertisement
ಕರಾವಳಿ ಭಾಗದಲ್ಲಿ ಬೇಸಗೆಯ ಧಗೆ ಆರಂಭವಾಗಿ ಕೆಲವು ದಿನಗಳಾಗಿವೆ. ಈ ಬಾರಿಯ ತಾಪಮಾನ ಕಂಡ ಊರ ಹಿರಿಯರು, ಈ ಬೇಸಗೆ ಇನ್ನಷ್ಟು ಕಷ್ಟ ಎನ್ನುತ್ತಿದ್ದಾರೆ. ಅದೂ ಕರಾವಳಿಯ ಅಂಚಿನಲ್ಲೇ ಇರುವ ಕೇರಳದಲ್ಲಂತೂ ಈ ತಾಪಮಾನ ತುಸು ಇನ್ನೂ ಹೆಚ್ಚು. ಯಾಕೆಂದರೆ ಮೊನ್ನೆವರೆಗೂ ತಣ್ಣಗೆ ಬೀಸುತ್ತಿದ್ದ ಗಾಳಿಯೂ ದಿನೇದಿನೆ ಬಿಸಿಯಾಗತೊಡಗಿದೆ. ಅದೂ ಚಿನ್ನದ ಬಿರುಗಾಳಿ.
Related Articles
Advertisement
ಅದಕ್ಕೆ ಪಿಣರಾಯ್ ವಿಜಯನ್, “ಸುಂಕ ಇಲಾಖೆಯ ಅಧಿಕಾರಿಗಳು ಕೇಂದ್ರದ ತಾಳಕ್ಕೆ ಕುಣಿಯುತ್ತಿ ದ್ದಾರೆ. ಅವರೆಲ್ಲ ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿ ದ್ದಾರೆ. ಅದಕ್ಕೆ ಪ್ರತಿಯಾಗಿ ಇಂದು ತಿರುವನಂತಪುರದಲ್ಲಿ ಬಿಜೆಪಿ ಪರ ಚುನಾವಣ ಪ್ರಚಾರವನ್ನು ಕೈಗೊಂಡ ಕೇಂದ್ರ ಗೃಹ ಸಚಿವ ಅಮಿತ್ ಶಾ, ಚಿನ್ನದ ಹಗರಣ ಕುರಿತೇ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಎ. 6 ರಂದು ನಡೆಯುವ ಚುನಾವಣೆಯಲ್ಲಿ ಸದ್ಯಕ್ಕೆ ಜೋರಾದ ಪ್ರದರ್ಶನ ಆರಂಭ ವಾಗಿರುವುದು ಇವರಿಬ್ಬರದ್ದೇ. ಕಾಂಗ್ರೆಸ್‌ನ ವರಿಷ್ಠ ರಾಹುಲ್ ಗಾಂಧಿ ಚುನಾವಣ ಪ್ರಚಾರವನ್ನು ಕೈಗೊಂಡಿದ್ದಾರೆ. ಆದರೆ ಬಿಸಿಗಾಳಿಯ ತೀವ್ರತೆಯನ್ನು ಹೆಚ್ಚಿ ಸುವತ್ತ ಗಮನಕೊಟ್ಟಿದ್ದು ಕಡಿಮೆ.
ಸದ್ಯದ ವಾತಾವರಣದಲ್ಲಿ ಹಣಾ ಹಣಿಯ ವರಸೆ ಎಲ್‌ಡಿಎಫ್ ಮತ್ತು ಯುಡಿಎಫ್ ನಿಂದ ಎಲ್‌ಡಿಎಫ್ ಮತ್ತು ಬಿಜೆಪಿಯ ಕಡೆಗೆ ತಿರುಗಿದಂತಿದೆ. ಬಿಜೆಪಿ ಕಳೆದ ಬಾರಿ ಗೆದ್ದದ್ದು ಒಂದು ಕ್ಷೇತ್ರ. ಈ ಬಾರಿ ಕಣ್ಣಿಟ್ಟಿರುವುದು 15-16 ಕ್ಷೇತ್ರಗಳತ್ತ.
ಕಳೆದ ಎರಡು ವಿಧಾನಸಭಾ ಚುನಾವಣೆಗಳನ್ನು ಅವಲೋಕಿಸಿದರೆ ಕೇರಳದಲ್ಲಿ ಎರಡೂ ಹಳೇ ತಂಡಗಳ ನಿದ್ದೆ ಕೊಂಚ ಹಾಳಾಗಿದೆ. ಮತ ಗಳಿಕೆಯನ್ನೇ ಲೆಕ್ಕ ಹಾಕೋಣ. ಎಲ್‌ಡಿಎಫ್ 2016 ರ ಚುನಾವಣೆಯಲ್ಲಿ ಶೇ. 43.48ರಷ್ಟು (ಚಲಾವಣೆಯಾದ ಒಟ್ಟು ಮತಗಳಲ್ಲಿ) ಮತ ಪಡೆದು 91 ಸ್ಥಾನ ಗಳಿಸಿ ಅಧಿಕಾರ ಪಡೆಯಿತು. ಮತ ಗಳಿಕೆ ಪ್ರಮಾಣ 2011 ರಲ್ಲಿ ಶೇ. 44. 94ರಷ್ಟಿತ್ತು. ಯುಡಿಎಫ್ 2016ರಲ್ಲಿ ಶೇ. 38.81ರಷ್ಟು ಮತ ಗಳಿಸಿತು. ಪಡೆದ ಸ್ಥಾನಗಳು 47. ಈ ಪ್ರಮಾಣ 2011ರಲ್ಲಿ ಶೇ. 45. 83ರಷ್ಟಿತ್ತು. 2011ರಲ್ಲಿ ಲೆಕ್ಕಕ್ಕೇ ಇಲ್ಲದ ಎನ್‌ಡಿಎ 2016ರ ಚುನಾವಣೆಯಲ್ಲಿ ಶೇ. 14.96ರಷ್ಟು ಮತ ಗಳಿಸಿ ಒಂದು ಸ್ಥಾನವನ್ನು ತನ್ನದಾಗಿಸಿಕೊಂಡಿತ್ತು.
ಈ ಬಿಸಿಗಾಳಿ ಯಾರ ಪಾಲಿಗೆ ಬಿರುಗಾಳಿಯಾಗಿ ಪರಿಣಮಿಸುತ್ತದೋ ಕಾದು ನೋಡಬೇಕು.
– ಅಶ್ವಘೋಷ