Advertisement

Kerala; ಉಪನ್ಯಾಸಕನ ಕೈ ಕತ್ತರಿಸಿದವನಿಗೆ ಹೈಕೋರ್ಟ್‌ ಜಾಮೀನು

01:07 AM Dec 14, 2024 | Team Udayavani |

ಕೊಚ್ಚಿ: 2010ರಲ್ಲಿ ಕಾಲೇಜು ಉಪನ್ಯಾಸಕರೊಬ್ಬರ ಕೈ ಕತ್ತರಿಸಿದ ಪ್ರಕರಣದಲ್ಲಿ ಎನ್‌ಐಎ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಪ್ರಕರಣದ ಪ್ರಮುಖ ಸಂಚುಕೋರ, ಪಿಎಫ್ಐ ಸದಸ್ಯ ಎಂ.ಕೆ.ನಾಸರ್‌ಗೆ ಕೇರಳ ಹೈಕೋರ್ಟ್‌ ಜಾಮೀನು ನೀಡಿದೆ. ಅಪರಾಧಿ ಈಗಾಗಲೇ ಶಿಕ್ಷೆಗೂ ಮುನ್ನ ಮತ್ತು ಶಿಕ್ಷೆಯ ಅನಂತರ ಒಟ್ಟು 9 ವರ್ಷ ಜೈಲುವಾಸ ಅನುಭವಿಸಿದ್ದಾನೆ ಎಂದು ಕೋರ್ಟ್‌ ಹೇಳಿದೆ. 2010ರಲ್ಲಿ ಧರ್ಮ ನಿಂದನೆ ಆರೋಪದಲ್ಲಿ ಇಡುಕ್ಕಿಯ ಟಿ.ಜೆ.­ಜೋಸೆಫ್ ಎಂಬ ಉಪನ್ಯಾಸಕನ ಕೈ ಕತ್ತರಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next