Advertisement

ಅಮೆರಿಕಕ್ಕೆ ಸೆಡ್ಡು: ಉ.ಕೊರಿಯ ಸರ್ವಾಧಿಕಾರಿಗೆ ಪಿಣರಾಯಿ ಪ್ರಶಂಸೆ

12:05 PM Jan 04, 2018 | Team Udayavani |

ತಿರುವನಂತಪುರ : ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ  ಕಠಿನ ನಿಲುವು ತಳೆದು ಸೆಡ್ಡು ಹೊಡೆದಿರುವ ಉತ್ತರ ಕೊರಿಯದ ಸರ್ವಾಧಿಕಾರಿ ಕಿಮ್‌ ಜೋಂಗ್‌ ಉನ್‌  ದಿಟ್ಟತನವನ್ನು  ಮುಕ್ತ ಕಂಠದಿಂದ ಪ್ರಶಂಸಿಸುವ ಮೂಲಕ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ವಿವಾದವನ್ನು ಆಹ್ವಾನಿಸಿದ್ದಾರೆ. 

Advertisement

ಕೋಯಿಕ್ಕೋಡ್‌ನ‌ಲ್ಲಿನ ಸಿಪಿಎಂ ಜಿಲ್ಲಾ ಸಮಿತಿಯ ಸಭೆಯಲ್ಲಿ ಮಾತನಾಡುತ್ತಿದ್ದ ಪಿಣರಾಯಿ, ಅಮೆರಿಕ ಹೇರಿರುವ ನಿಷೇಧಗಳ ಒತ್ತಡ ಇದ್ದಾಗ್ಯೂ ಕಿಮ್‌ ಮತ್ತು ಉತ್ತರ ಕೊರಿಯ ಅದನ್ನು ಯಶಸ್ವಿಯಾಗಿ ನಿಭಾಯಿಸಿತು ಎಂದು ಕಿಮ್‌ ದಿಟ್ಟತನ ಮತ್ತು ಧೈರ್ಯವನ್ನು ಪ್ರಶಂಸಿಸಿದರು.

ಅಮೆರಿಕಕ್ಕೆ ಸೆಡ್ಡು ಹೊಡೆಯುವಲ್ಲಿ ಚೀನಕ್ಕಿಂತಲೂ ಉತ್ತರ ಕೊರಿಯ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಸಿಎಂ ಪಿಣರಾಯಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಹೇಳಿರುವುದಾಗಿ ವರದಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next