Advertisement

ಕನ್ನಡಕ್ಕಾಗಿ ಕೇರಳ ಗಡಿ ಬಂದ್‌: ವಾಟಾಳ್‌ ಸೇರಿ ಹಲವರು ವಶಕ್ಕೆ

02:59 PM Jun 08, 2017 | Team Udayavani |

ಕಾಸರಗೋಡು: ಕೇರಳ ಸರಕಾರವು ಗಡಿನಾಡು ಕಾಸರಗೋಡಿನ ಕನ್ನಡಿಗರ ಮೇಲೆ ಮಲಯಾಳ ಭಾಷೆ ಹೇರುವುದನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳಿಂದ ಇಂದು ಗುರುವಾರ ಗಡಿ ಬಂದ್‌ ನಡೆಸಿ ಪ್ರತಿಭಟಿಸಲಾಯಿತು.

Advertisement

ಉಡುಪಿಯಿಂದ ಕಾಸರಗೋಡು ಚಲೋ ನಡೆಸಿ ಕಾಸರಗೋಡು ಗಡಿ ಭಾಗವಾದ ತಲಪಾಡಿಯಲ್ಲಿ ಬಂದ್‌ ನಡೆಸುತ್ತಿದ್ದ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದ್, ಕರವೇ ಪ್ರವೀಣ್ ಶೆಟ್ಟಿ ಸೇರಿ ಹಲವು ಮುಖಂಡರನನ್ನು ಪೊಲೀಸರು ವಶಕ್ಕೆ ಪಡೆದರು. 

ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಕನ್ನಡ ಸಂಘಟನೆಗಳ ಕಾರ್ಯಕರ್ತರು  ಕೇರಳ ಕರ್ನಾಟಕ ಮಧ್ಯೆ ಸಾಗುವ ವಾಹನ ಸಂಚಾರ ಬಂದ್ ಮಾಡಿ ಆಕ್ರೋಶ ವ್ಯಕ್ತ ಪಡಿಸಿದರು. ಕೇರಳ ಸರ್ಕಾರದ ಧೋರಣೆಗೆ ಧಿಕ್ಕಾರ ಕೂಗಿದರು.  

Advertisement

Udayavani is now on Telegram. Click here to join our channel and stay updated with the latest news.

Next