Advertisement

ಸಾಲು ಸಾಲು ರಜೆ: ಹೆಚ್ಚಿದ ವಿಮಾನ ಪ್ರಯಾಣಿಕರ ಸಂಖ್ಯೆ

03:09 PM Dec 25, 2022 | Team Udayavani |

ದೇವನಹಳ್ಳಿ: ವರ್ಷಾಂತ್ಯದಲ್ಲಿ ಕ್ರಿಸ್‌ಮಸ್‌ ಸೇರಿ ಸಾಲು ಸಾಲು ರಜೆ ಇರುವ ಕಾರಣ ತವರಿಗೆ ಹೋಗುತ್ತಿರುವ ವಿಮಾನ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದು, ತಾಲೂಕಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶನಿವಾರ ಪ್ರಯಾಣಿಕರ ಸಂದಣಿಯಿಂದ ಕೂಡಿತ್ತು. ಬೆಳಗ್ಗಿನಿಂದಲೂ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ತುಂಬಿದ್ದು, ಸಿಬ್ಬಂದಿ ಅವರನ್ನು ನಿಯಂತ್ರಣ ಮಾಡುವಲ್ಲಿ ಹೈರಾಣಾದರು.

Advertisement

ವಿದೇಶಿ ಪ್ರಯಾಣಿಕರಿಗೆ ಕೋವಿಡ್‌ ವರದಿ ಸೇರಿ ಮಾಸ್ಕ್ ಕಡ್ಡಾಯ ಮಾಡಿದ್ದು, ಮಾಸ್ಕ್ ಇಲ್ಲದ ಪ್ರಯಾಣಿಕರಿಗೆ ನಿಲ್ದಾಣದಿಂದಲೇ ಮಾಸ್ಕ್ ವಿತರಣೆ ಮಾಡಲಾಗುತ್ತಿತ್ತು. ಇನ್ನೂ ಹೆಚ್ಚುವರಿ ಲೆಗೇಜ್‌ ಹೊತ್ತುಕೊಂಡು ಬಂದಿದ್ದ ಪ್ರಯಾಣಿಕರು, ಅದನ್ನು ಪರಿಶೀಲನೆಗೆ ನೀಡುವ ವೇಳೆಯಲ್ಲಿ, ಶುಲ್ಕ ಪಾವತಿಯಲ್ಲಿ ಸರತಿ ಸಾಲು ಕಂಡರೆ, ಟ್ಯಾಗ್‌ ಅಳವಡಿಕೆ ಯಲ್ಲಿಯೂ ನಿಧಾನಗತಿಯ ಕಾರ್ಯ ಚಟುವಟಿಕೆ ಇತ್ತು. ಹೊರರಾಷ್ಟ್ರ ಸೇರಿ ನಾನಾ ರಾಜ್ಯಗಳಿಂದ ಬೆಂಗಳೂರಿಗೆ ಆಗಮಿಸುತ್ತಿರುವ ವರು, ಇಲ್ಲಿಂದ ನಿರ್ಗಮಿಸುತ್ತಿರುವವರು ಸಂಖ್ಯೆ ಹೆಚ್ಚಾಗಿದ್ದು, ಶನಿವಾರ ಒಂದೇ ದಿನ 80 ಸಾವಿರಕ್ಕೂ ಹೆಚ್ಚು ಜನ ವಿಮಾನ ಟಿಕೆಟ್‌ ಕಾಯ್ದಿರಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಪ್ರಿಇಮಿಗ್ರೇಷನ್‌ನಲ್ಲಿ ಕೋವಿಡ್‌ ಪರೀಕ್ಷೆ: ಇನ್ನೂ ಶನಿವಾರ ಕೇಂದ್ರ ಸರ್ಕಾರ ನೀಡಿರುವ ಮಾರ್ಗಸೂಚಿಯಂತೆ, ಕೆಂಪೇಗೌಡ ಅಂತಾರಾ ಷ್ಟ್ರೀಯ ವಿಮಾನ ನಿಲ್ದಾಣದ ಪ್ರಿಇಮಿಗ್ರೇಷನ್‌ ಸ್ಥಳದಲ್ಲಿ ರ್‍ಯಾಂಡಮ್‌ ಕೋವಿಡ್‌ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಿದ್ದು, ಅದರ ಸದುಪಯೋಗ ಪಡಿಸಿಕೊಳ್ಳುವಂತೆ ಪ್ರಯಾಣಿಕರಿಗೆ ನಿಲ್ದಾಣದ ಅಧಿಕಾರಿಗಳು ತಿಳಿಸಿದರು.

ಕಾಗದ ರಹಿತ ಭೇಟಿಗೆ ಡಿಜಿ ಯಾತ್ರಾ: ಸುರಕ್ಷಿತ ಹಾಗೂ ಕಾಗದ ರಹಿತವಾಗಿ ವಿಮಾನ ನಿಲ್ದಾಣಕ್ಕೆ ಒಳಗೆ ಹೋಗಲು ಹಾಗೂ ಸರತಿ ಸಾಲನ್ನು ತಪ್ಪಿಸಲು ನಿರ್ಗಮನ ದ್ವಾರ 3, 4, 9ಅನ್ನು ಡಿಜಿ ಯಾತ್ರಾ ಬಳಕೆದಾರರಿಗೆ ಮೀಸಲಿಡಲಾಗಿದೆ. ಅದಕ್ಕಾಗಿ ವಾಟ್ಸ್‌ ಆ್ಯಪ್‌ ಸಹಾಯವಾಣಿ 8884998888 ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ. ಪೂರ್ಣ ಪ್ರಮಾಣದಲ್ಲಿ ವಾಕ್ಸ್‌ಇನ್‌ ಪಡೆದ ಪ್ರಯಾಣಿಕರಿಗೆ ಯಾವುದೇ ನೆಗಟಿವ್‌, ಆರ್‌ಟಿ ಪಿಸಿಆರ್‌ ವರದಿಯ ಅವಶ್ಯಕತೆ ಇರುವುದಿಲ್ಲ. ಪ್ರಯಾಣಿಕರ ಸಾಂದ್ರತೆ ನಿರ್ವಹಣೆಗೆ ಎಲ್ಲಾ ಏರ್‌ಲೈನ್ಸ್‌ ಸೇರಿದಂತೆ ವಿಮಾನ ನಿಲ್ದಾಣ ಸಿಬ್ಬಂದಿಯೂ ಸನ್ನದ್ಧವಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಮಾನ ನಿಲ್ದಾಣದ ಆಡಳಿತ ಮಂಡಳಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next