Advertisement

ಪ್ರಕೃತಿಗೆ ಅನುಸಾರವಾಗಿರಲಿ ನಮ್ಮ ದಿನಚರ್ಯೆ

02:31 PM Mar 31, 2022 | Team Udayavani |

ಬೇಸಗೆಯಲ್ಲಿ ಮಾನವರನ್ನು ವಿವಿಧ ಕಾಯಿಲೆಗಳು ಕಾಡುತ್ತವೆ. ಒಂದಿಷ್ಟು ರೋಗಗಳು ಸಾಮಾನ್ಯವಾಗಿದ್ದರೆ ಮತ್ತೆ ಕೆಲವೊಂದು ರೋಗಗಳನ್ನು ನಿರ್ಲಕ್ಷಿಸಿದರೆ ಅವು ಪ್ರಾಣಕ್ಕೇ ಕುತ್ತು ತರಬಹುದು. ಬಾಹ್ಯ ವಾತಾವರಣ ಮತ್ತು ಪ್ರತಿಯೊಬ್ಬನ ದೇಹ ಪ್ರಕೃತಿಗನುಸಾರವಾಗಿ ಕೆಲವೊಂದು ಮುಂಜಾಗ್ರತ ಕ್ರಮಗಳನ್ನು ಪಾಲಿಸಿದಲ್ಲಿ ಇವೆಲ್ಲ ಕಾಯಿಲೆಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದಾಗಿದೆ. ಇನ್ನು ಆಹಾರ ಸೇವನೆ ಸಂದರ್ಭದಲ್ಲಿ ಹೆಚ್ಚು ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ. ಶುದ್ಧ ನೀರು ಸೇವನೆ ಕೇವಲ ಬಿಸಿಲಿನ ಝಳದಿಂದ ನಮ್ಮನ್ನು ರಕ್ಷಿಸುವುದು ಮಾತ್ರವಲ್ಲದೆ ಹಲವಾರು ಸಾಂಕ್ರಾಮಿಕ ಕಾಯಿಲೆಗಳಿಂದ ನಮ್ಮನ್ನು ಪಾರು ಮಾಡುತ್ತದೆ. ಬೇಸಗೆಯಲ್ಲಿ ಬಾಧಿಸುವ ಕಾಯಿಲೆಗಳು, ಆಹಾರ ಸೇವನೆಯ ಸಂದರ್ಭದಲ್ಲಿ ವಹಿಸಬೇಕಾದ ಎಚ್ಚರಿಕೆ ಮತ್ತಿತರ ವಿಚಾರಗಳ ಬಗೆಗೆ ಆಯುಷ್‌ ತಜ್ಞರು ನೀಡಿರುವ ಸಲಹೆಗಳು ಇಲ್ಲಿವೆ.

Advertisement

ಬೇಸಗೆ ಕಾಲದಲ್ಲಿ ಹಗಲಿನ ವೇಳೆ ಮನೆಯ ಹೊರಗಡೆ ಕಾಲಿ ಡಲು ಮನಸ್ಸಾಗುವುದಿಲ್ಲ. ಮಾನವ ದೇಹವು ತಾನಾ ಗಿಯೇ ಹೊರಗಿನ ದುಷ್ಟರಿಣಾಮಗಳಿಂದ ರಕ್ಷಿಸಲು ಬಯ ಸು ತ್ತದೆ. ಇದು ಸ್ವಯಂ ರಕ್ಷಣ ವ್ಯವಸ್ಥೆಗಳಲ್ಲಿ ಒಂದಾಗಿದೆ.

ಬೇಸಗೆಯಲ್ಲಿ ವಾತಾವರಣದಲ್ಲಿ ಉಷ್ಣತೆ ಹೆಚ್ಚಾಗುವುದರಿಂದ ನಮ್ಮ ಶರೀರದಲ್ಲಿ ಕೆಲವೊಂದು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಸ್ವಲ್ಪ ಮುಂಜಾಗ್ರತೆ ವಹಿಸಿದರೆ ಇವುಗಳಿಂದ ಪಾರಾಗಬಹುದು.ಅತೀ ಹೆಚ್ಚಿನ ಉಷ್ಣತೆ ಹಾಗೂ ತೇವಾಂಶ ದೇಹದ ರೋಗ ನಿರೋಧಕ ಶಕ್ತಿಯನ್ನು ಬಾಧಿಸುತ್ತದೆ. ಕಾಲದಲ್ಲಿ ಸಾಧಾರಣ ವಾಗಿ ಜೀರ್ಣಶಕ್ತಿ ಕಡಿಮೆ ಇರುತ್ತದೆ. ಅತಿಯಾದ ಶಾಖದಿಂದ ಪಾರಾಗಲು ದೇಹವು ತನ್ನ ಜಠ ರಾಗ್ನಿ ಯನ್ನು ಕಡಿಮೆ ಮಾಡುತ್ತದೆ. ಇದರಿಂದ ಸಾಮಾನ್ಯವಾಗಿ ಜೀರ್ಣಶಕ್ತಿ ಕಡಿಮೆಯಾಗಿರುತ್ತದೆ.

ಬೇಸಗೆಯಲ್ಲಿ ಕಾಡುವ ರೋಗಗಳು: ಬೇಸಗೆಯಲ್ಲಿ ನಿರ್ಜಲೀಕರಣ, ತಲೆನೋವು, ಹೀಟ್‌ಸ್ಟ್ರೋಕ್‌, ಅತಿಸಾರ, ಭೇದಿ, ವಾಂತಿ, ಜೀರ್ಣಾಂಗ ವ್ಯೂಹದ ತೊಂದರೆಗಳು, ಕಾಮಾಲೆ ರೋಗ, ಟೈಫಾಯಿಡ್‌, ಸನ್‌ಬರ್ನ್, ಶರೀರದಲ್ಲಿ ಉರಿಯೂತ, ಚರ್ಮದ ದದ್ದು, ಕಣ್ಣಿನ ತೊಂದರೆಗಳು ಸಾಮಾನ್ಯ  ವಾಗಿ ಕಾಣಿಸುತ್ತದೆ. ಹೊರಗಿನ ಬಿಸಿಲಿಗೆ ಅತಿ ಯಾಗಿ ದೇಹ ಒಡ್ಡುವುದರಿಂದ ನಿರ್ಜಲೀಕರಣ, ತಲೆ ನೋವು, ತಲೆಸುತ್ತು, ಸನ್‌ಸ್ಟ್ರೋಕ್‌, ಚರ್ಮದ ತೊಂದರೆಗಳು, ಅಲರ್ಜಿ ಮುಂತಾದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ಕಾಲದಲ್ಲಿ ಗಾಳಿ, ಜಲ ದೂಷಿತವಾಗುವು ದರಿಂದ, ದೂಷಿತ ಜಲಸೇವನೆ, ಬೀದಿಬದಿಯ ಆಹಾರಗಳು, ಕೈಗಳನ್ನು ಸ್ವತ್ಛಮಾಡದೆ ಆಹಾರ ಸೇವನೆ ಮಾಡುವುದರಿಂದ ಆಹಾರ ಜನ್ಯ, ಜೀರ್ಣಾಂಗ ವ್ಯೂಹದ ತೊಂದರೆಗಳಾದ ವಾಂತಿ ಭೇದಿ, ಜ್ವರ ಹೊಟ್ಟೆನೋವು ಕಾಮಾಲೆಯಂತಹ ಅನಾರೋಗ್ಯ ಬಾಧಿಸಬಹುದು.

ಮುಂಜಾಗ್ರತ ಕ್ರಮಗಳು: ಬದುಕಿನ ಅನಿವಾರ್ಯತೆ ಯಿಂದಾಗಿ ರಣಬಿಸಿಲಿನಲ್ಲಿಯೂ ಕೂಡ ತಮ್ಮ ನಿತ್ಯದ ಕೆಲಸ ಕಾರ್ಯ  ಗಳನ್ನು ಮಾಡಲೇ ಬೇಕಾಗಿದೆ. ಒಂದಷ್ಟು ಮುಂಜಾ ಗ್ರತೆ ವಹಿಸಿದಲ್ಲಿ ಈ ಎಲ್ಲ ಸಮಸ್ಯೆಗಳಿಂದ ಪಾರಾಗಬಹುದು.

Advertisement

ಬಿಸಿಲಿಗೆ ಹೋಗಲೇಬೇಕಾದ ಅನಿವಾರ್ಯತೆ ಇದ್ದಲ್ಲಿ ತಲೆ ಹಾಗೂ ಮುಖದ ಭಾಗಗಳನ್ನು ಮುಚ್ಚಿಕೊಳ್ಳುವುದು ಒಳಿತು. ಸಡಿಲ ವಾದ ಹತ್ತಿಯ ಬಟ್ಟೆಯನ್ನು ಧರಿಸುವುದು, ಧಾರಾಳ ವಾಗಿ ಸ್ವತ್ಛವಾದ ಶುದ್ಧ ನೀರನ್ನು ಕುಡಿಯುವುದು. ಲಘು ಆಹಾರ ಸೇವನೆ, ತಂಪು ಕನ್ನಡಕ ಧಾರಣೆ, ವ್ಯಾಯಾಮವನ್ನು ಆದಷ್ಟು ನಸುಕಿನ ಸಮಯದಲ್ಲಿ ಮಾಡುವುದು, ಖಾರ ಹಾಗೂ ಕರಿದ ಪದಾರ್ಥಗಳನ್ನು ವರ್ಜಿಸುವುದು, ಆಹಾರ ಸೇವನೆಗೂ ಮುನ್ನ ಕೈಯನ್ನು ಸೋಪಿನಿಂದ ಸರಿಯಾಗಿ ತೊಳೆದು ಸ್ವತ್ಛಮಾಡಿಕೊಳ್ಳುವುದು, ಬಿಳಿಬಣ್ಣದ ಛತ್ರಿಯನ್ನು ಉಪಯೋಗಿಸುವುದು ಹಾಗೂ ಸುಲಭವಾಗಿ ಮತ್ತು ಬೇಗವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸುವುದು ಆರೋಗ್ಯ ಮತ್ತು ದೇಹ ರಕ್ಷಣೆಯ ದೃಷ್ಟಿಯಿಂದ ಸೂಕ್ತ.

ದ್ರವಾಹಾರಗಳಿಗೆ ಆದ್ಯತೆ: ಬೇಸಗೆಯಲ್ಲಿ ದೇಹವನ್ನು ತಂಪಾಗಿಡಲು ನಿರ್ಜಲೀ ಕರಣ ದಿಂದ ರಕ್ಷಿಸಿಕೊಳ್ಳಲು ಹಣ್ಣು, ತರಕಾರಿ ಸೊಪ್ಪುಗಳು ಮತ್ತು ಸೌತೆಕಾಯಿ ಸೇವನೆ ಮಾಡಬಹುದು. ಇದರಿಂದ ಶರೀರದ ದಾಹವು ಕಡಿಮೆಯಾಗುತ್ತದೆ. ಕಲ್ಲಂಗಡಿ ಹಣ್ಣು, ಎಳನೀರು ಸೇವನೆ, ಕಿತ್ತಳೆಹಣ್ಣು, ಸೋರೆಕಾಯಿ, ಮಾವಿನ ಹಣ್ಣು, ನಿಂಬೆರಸ, ಬಾರ್ಲಿನೀರು, ಮೊಸರು ಹಾಗೂ ಬೇಸಗೆ ಕಾಲದಲ್ಲಿ ದೊರೆಯುವ ಇತರ ತಾಜಾ ಹಣ್ಣುಗಳು, ಮಜ್ಜಿಗೆ, ತಂಬುಳಿ, ಪಾನಕ, ರಾಗಿ, ಎಳ್ಳುಜ್ಯೂಸ್‌, ಮಿಲ್ಕ್ಶೇಕ್‌ ಮುಂತಾದ ನೈಸರ್ಗಿಕ ಆಹಾರ ಹಾಗೂ ಹಣ್ಣುಗಳನ್ನು ಸೇವನೆ ಮಾಡುವುದರಿಂದ ಶರೀರಕ್ಕೆ ಅಗತ್ಯ ಪೋಷಕಾಂಶಗಳ ಜತೆಗೆ ವಿಟಮಿನ್‌, ಕ್ಯಾಲ್ಸಿಯಂ, ಮೆಗ್ನೇಶಿಯಂ, ವಿಟಮಿನ್‌ ಎ, ಸಿ ದೊರೆಯುತ್ತದೆ. ಇದರಿಂದ ಹೊಟ್ಟೆಯು ತಂಪಾಗುವುದರ ಜತೆಗೆ ಜೀರ್ಣಾಂಗ ವ್ಯೂಹವು ಸುಸ್ಥಿತಿಯಲ್ಲಿರುತ್ತದೆ. ಇದಲ್ಲದೆ ಹೆಚ್ಚಾಗಿ ನೀರಿನಾಂಶವನ್ನು ಹೊಂದಿರುವ ತರಕಾರಿ, ಹಣ್ಣುಗಳ ಸೇವನೆ ಬಹಳ ಒಳ್ಳೆಯದು. ಋತುಗಳಿಗನುಸಾರವಾಗಿ ದೊರೆಯುವ ಹಣ್ಣುಗಳ ಸೇವನೆ ಮಾಡುವುದನ್ನು ಮರೆಯದಿರಿ. ಇವುಗಳಲ್ಲಿ ವಿಟಮಿನ್‌, ಖನಿಜಗಳು ಮತ್ತು ಇತರ ಪೋಷಕಾಂಶಗಳು ಸಮೃದ್ಧವಾಗಿರುತ್ತವೆ.

ಈ ಎಲ್ಲ ಮುಂಜಾಗ್ರತೆಗಳು, ಸರಿಯಾದ ಆಹಾರ ಹಾಗೂ ಜೀವನ ಶೈಲಿಯನ್ನು ಅನುಸರಿಸುವುದರಿಂದ ಶರೀರವನ್ನು ತಂಪಾಗಿಸುವುದರ ಜತೆಗೆ ಆರೋಗ್ಯವನ್ನು ಕಾಪಾಡಿಕೊಂಡು ಈ ಬೇಸಗೆ ಋತುವನ್ನು ಸಂತೋಷದಿಂದ ಕಳೆಯಬಹುದು.

ಈ ಕಾಲದಲ್ಲಿ ಸಿಹಿ ಪ್ರಧಾನವಾದ ದ್ರವ ಪದಾರ್ಥಗಳನ್ನು ಸೇವಿಸಬೇಕು. ಹುಳಿ, ಉಪ್ಪು ಕಡಿಮೆಯೂ, ಖಾರ, ಕಹಿ ಆಹಾರ ಪದಾರ್ಥಗಳ ಸೇವನೆ ಅತೀ ಕಡಿಮೆಯೂ ಇರಬೇಕು. ಹಾಲು, ಹಾಲಿನಿಂದ ತಯಾರಾದ ಸಿಹಿಗಳು, ಬಾಸುಂದಿ, ಕುಂದ ಮುಂತಾದ ತಿಂಡಿಗಳು ಅದೇ ರೀತಿ ಶ್ರೀ ಖಂಡ ಇತ್ಯಾದಿಗಳಿಂದ ಆರೋಗ್ಯ ವೃದ್ಧಿಯಾಗುತ್ತದೆ.

ಸೊಪ್ಪುಗಳಲ್ಲಿ ಹುಳಿ ಸೊಪ್ಪು, ಚಕ್ರ ಮುನಿ ಇವುಗಳ ತಂಬುಳಿ ಹಿತಕರ. ಸೊಪ್ಪುಗಳು, ತೆಂಗಿನಕಾಯಿ, ಉಪ್ಪು ಹಾಕಿ ರುಬ್ಬಿ ಬೆಣ್ಣೆ ತೆಗೆದ ಮಜ್ಜಿಗೆ ಹಾಕಿದ ತಂಬುಳಿಗೆ ಒಗ್ಗರಣೆ ಹಾಕಿ ಸೇವಿಸುವುದು (ಬೆಳ್ಳುಳ್ಳಿ ಹಾಕಬಾರದು). ನೀರಿನ ಬದಲು ಹಸಿಮೆಣಸು ಹಾಕದ ಸ್ವಲ್ಪ ಉಪ್ಪು, ಶುಂಠಿ, ಕೊತ್ತಂಬರಿ ಸೊಪ್ಪು ಸೇರಿಸಿದ ಬೆಣ್ಣೆ ತೆಗೆದ (ಕೆನೆ ತೆಗೆದ ಅಲ್ಲ)ಜಾಸ್ತಿ ನೀರು ಸೇರಿಸಿದ ಮಜ್ಜಿಗೆ ಸೇವನೆ ಬಹಳ ಹಿತಕರ. ಹಣ್ಣಿನ ರಸಕ್ಕೆ ಶುಂಠಿ ಹಾಗೂ ಮೆಣಸನ್ನು ತೀರಾ ಸ್ವಲ್ಪ ಸೇರಿಸಿ, ಜೇನು, ಸಕ್ಕರೆ ಸೇರಿಸಿ ಕುಡಿಯಬಹುದು. ನಿತ್ಯ ಮಾಂಸಾಹಾರಿಗಳಲ್ಲದವರು ಯಾವುದೇ ಆಹಾರಕ್ಕೆ ಬೆಳ್ಳುಳ್ಳಿ, ಕರಿಮೆಣಸು ಮತ್ತು ಹಸಿ ಮೆಣಸಿನ ಕಾಯಿ ಬಳಸಬಾರದು, ಈರುಳ್ಳಿಯಿಂದ ತೊಂದರೆ ಆಗುವುದಿಲ್ಲ.
ಪಥ್ಯ ಆಹಾರಗಳು: ಹೆಸರುಬೇಳೆ, ನೀರು ಹೆಚ್ಚಾಗಿರುವ ಸೌತೆ, ಕಲ್ಲಂಗಡಿ, ಸಿಹಿ ಕುಂಬಳ, ಸೀಮೆ ಬದನೆ, ದಾಳಿಂಬೆ, ಮೂಸಂಬೆ, ಕಿತ್ತಳೆ, ಬೇಯಿಸಿದ ಬಾಳೆಹಣ್ಣಿನ ತಿಂಡಿಗಳು ಬಿಸಿಲಲ್ಲಿ ತಿರುಗಾಡುವವರಿಗೆ ಒಳ್ಳೆಯದು. ಇಲ್ಲವಾದರೆ ಜೀರ್ಣ ಶಕ್ತಿ ಕಡಿಮೆಯಾಗಿ ತೊಂದರೆ ಆಗುವ ಸಾಧ್ಯತೆ ಇದೆ. ಹುಳಿ ಬಳಕೆಯಾಗುವ ಪಾನಕ ಅಡಿಗೆಗೆ ಕೋಕಮ್‌, ಉಂಡೆಹುಳಿ, ಅಂಬಟೆಕಾಯಿ ಬಳಕೆ ಒಳ್ಳೆಯದು.

ನಿದ್ರೆ: ಈ ಕಾಲದಲ್ಲಿ ಹಗಲು ಹೆಚ್ಚು ರಾತ್ರಿ ಕಡಿಮೆ. ಹಾಗಾಗಿ ಸೂರ್ಯನನ್ನನುಸರಿಸಿ ಏಳುವವರಿಗೆ, ಬಿಸಿಲಲ್ಲಿ ತಿರುಗಾಡುವವರಿಗೆ ಹಗಲು ನಿದ್ರೆ ಹಿತಕರ. ಬಟ್ಟೆ- ಗಾಢವಾದ ದಪ್ಪನೆಯ ಬಟ್ಟೆಗಳನ್ನು ಧರಿಸದೆ ತೆಳುವಾದ, ಬೆವರು ಹೀರುವ ಬಟ್ಟೆಗಳನ್ನು ಧರಿಸಬೇಕು. ಮೈ ತೋರುವ ಬಟ್ಟೆ ಧರಿಸಿದರೆ ಸೂರ್ಯನ ಝಳಕ್ಕೆ ಮೈ ಕಪ್ಪಾಗುತ್ತದೆ ಮತ್ತು ಚರ್ಮದಲ್ಲಿ ಕಜ್ಜಿಗಳಾಗುವ ಸಾಧ್ಯತೆ ಇದೆ.

ಪ್ರತೀ ದಿನ ಷಡ್ರಸಗಳಿಂದ ಕೂಡಿದ ಆಹಾರವನ್ನು ಸೇವಿಸು ವುದು ಯೋಗ್ಯವಾಗಿದೆ. ಆಯಾ ದೇಶ, ಪ್ರದೇಶಗಳ ಜನರು ಅಲ್ಲಿನ ಆಹಾರ ವಿಹಾರಗಳನ್ನೇ ಪಾಲನೆ ಮಾಡ ಬೇಕು. ಪ್ರಕೃತಿಗೆ ಅನುಸಾರವಾಗಿ ದಿನಚರ್ಯೆ ಹಾಗೂ ಋತು ಚರ್ಯೆಗಳನ್ನು ಪಾಲನೆ ಮಾಡುವುದೇ ಸ್ವಾಸ್ಥ್ಯಪೂರ್ಣ ಜೀವನ. ಆಯಾಯ ದೇಶ, ಕಾಲ, ಕುಲವೃತ್ತಿ ಯನ್ನು ಗಮನಿಸಿ ಆಚಾರ-ವಿಹಾರಗಳನ್ನು ಅನುಸರಿಸಿದಾಗ ಮೂಢ ನಂಬಿಕೆ ಆಗುವುದಿಲ್ಲ. ಕೇವಲ ಹಣವನ್ನು ಕೊಟ್ಟು ಔಷಧ ತೆಗೆದು  ಕೊಂಡ ಮಾತ್ರಕ್ಕೆ ಆರೋಗ್ಯ ರಕ್ಷಣೆ ಮತ್ತು ವೃದ್ಧಿ ಸಾಧ್ಯ ವಾಗದು. ಜೀವನಶೈಲಿಯನ್ನು ವಿವೇಚನಾ ಪೂರ್ವಕ ಅಳವಡಿಸಿ  ಕೊಂಡರೆ ಎಲ್ಲರ ಜೀವನವೂ ಆರೋಗ್ಯದಿಂದ ಕೂಡಿರುತ್ತದೆ.

-ಡಾ| ಇಕ್ಬಾಲ್‌ ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next