Advertisement

ಶೌಚಾಲಯ ಕಟ್ಟಿಕೊಂಡು ಆರೋಗ್ಯವಾಗಿರಿ: ಸುವರ್ಣಾ

10:00 AM Aug 25, 2018 | Team Udayavani |

ಕಲಬುರಗಿ: ಪ್ರತಿಯೊಬ್ಬ ನಾಗರಿಕರು ತಮ್ಮ ಮನೆಯಲ್ಲಿ ಶೌಚಾಲಯ ಕಟ್ಟಿಕೊಳ್ಳುವುದರಿಂದ ಆರೋಗ್ಯವಂತರಾಗಿರಲು ಸಾಧ್ಯವೆಂದು ಜಿ.ಪಂ.ಅಧ್ಯಕ್ಷೆ ಸುವರ್ಣಾ ಎಚ್‌. ಮಲಾಜಿ ಹೇಳಿದರು. ಭಾರತ ಸರಕಾರದ ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯ , ಜಿಪಂ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ತಾಪಂ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಸರಕಾರಿ ಪದವಿ ಪೂರ್ವ ಬಾಲಕಿಯರ ಹಾಗೂ ಬಾಲಕರ ಕಾಲೇಜು ಕಮಲಾಪುರ ಏರ್ಪಡಿಸಿದ್ದ ಸ್ವತ್ಛ ಕ್ರಿಯಾ ಯೋಜನೆ (ಸ್ವಚ್ಚ ಭಾರತ ಅಭಿಯಾನ ) ಕುರಿತು ಹಮ್ಮಿಕೊಳ್ಳಲಾಗಿದ್ದ ವಿಶೇಷ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಅತಿಥಿಯಾಗಿದ್ದ ಕಮಲಾಪುರ ಗ್ರಾ.ಪಂ. ಅಧ್ಯಕ್ಷ ಅಬ್ದುಲ್‌ ಸತ್ತಾರ್‌ ಅಬ್ದುಲ್‌ ರೆಹಮಾನ್‌ ಮಾತನಾಡಿ, ಪ್ರತಿಯೊಬ್ಬರು
ತಮ್ಮ ಮನೆ ಅಂಗಳ ಸ್ವತ್ಛವಾಗಿಟ್ಟುಕೊಂಡಲ್ಲಿ ಇಡೀ ಗ್ರಾಮವೇ ಸ್ವತ್ಛವಾಗುತ್ತದೆ. ಇದೆ ರೀತಿ ಪಟ್ಟಣ, ನಗರಗಳು ಸ್ವತ್ಛವಾಗುತ್ತವೆ. ಗಾಂಧೀಜಿ ಕಂಡ ಕನಸು ನನಸಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಸ್ವತ್ಛಭಾರತ ಅಭಿಯಾನದಲ್ಲಿ ಕೈಜೋಡಿಸಬೇಕೆಂದು ಮನವಿ ಮಾಡಿದರು. ಕಮಲಾಪುರ ಗ್ರಾಮವನ್ನು ಇನ್ಮುಂದೆ ಸ್ವತ್ಛ ಹಾಗೂ ಹಸಿರು ಗ್ರಾಮವಾಗಿ ಮಾಡಲು ಅನೇಕ ಮರಗಳನ್ನು ನೆಡುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದರು. 

ಕಲಬುರಗಿ ಗ್ರಾಮಿಣ ಸಹಾಯಕ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳಾದ ಪ್ರವಿಣಕುಮಾರ ಮಾತನಾಡಿ, ಗ್ರಾಮೀಣ
ಪ್ರದೇಶದಲ್ಲಿ ಸಾರ್ವಜನಿಕರಿಗೆ ಸ್ವತ್ಛತೆ ಬಗ್ಗೆ ಹೆಚ್ಚಿನ ಮಾಹಿತಿ ಇರುವದಿಲ್ಲ. ಇದರಿಂದ ಅನೇಕರು ರೋಗಗಳಿಗೆ ತುತ್ತಾಗುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಸರ್ಕಾರ ಶೌಚಾಲಯ ನಿರ್ಮಿಸಿಕೊಳ್ಳಲು ಕಡುಬಡವರಿಗೆ 12,000ರೂ., ಹಿಂದುಳಿದ ವರ್ಗದವರಿಗೆ 15,000 ರೂ. ವಿತರಿಸುತ್ತದೆ. ಇದನ್ನು ಬಳಸಿಕೊಂಡು ಶೌಚಾಲಯಗಳನ್ನು ನಿರ್ಮಿಸಿ ಬಳಸಿ ಎಂದು ತಿಳಿಸಿದರು. 

ಕಮಲಾಪುರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಶಾಂತಾ ಬಿ. ಅಷ್ಟಗಿ ಅಧ್ಯಕ್ಷತೆ ವಹಿಸಿದ್ದರು. ಕಮಲಾಪುರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ ಎಸ್‌ಎಸ್‌ ಅಧಿಕಾರಿಗಳಾದ ರಮೇಶ ಟಿ. ಪೋತೆ, ಸರಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನ ಪ್ರಾಚಾರ್ಯ ಬೂಸಾಳೆ ಗೋಪಾಲ, ಸರಕಾರಿ ಪದವಿ ಪೂರ್ವ ಬಾಲಕರ ಕಾಲೇಜಿನ ಪ್ರಾಚಾರ್ಯ ಮಲೇಶಿ ನಾಟೇಕಾರ ಸ್ವತ್ಛ ಭಾರತದ ಬಗ್ಗೆ ಮಾಹಿತಿ ನೀಡಿದರು. ಕ್ಷೇತ್ರ ಜನ ಸಂಪರ್ಕ ಕಾರ್ಯಲಯದ ನಾಗಪ್ಪ ಅಂಬಾಗೋಳ ಸ್ವಾಗತಿಸಿದರು, ರವಿಂದ್ರ ಕುಂಬಾರ ವಂದಿಸಿದರು.

Advertisement

ರಂಗೋಲಿ ಸ್ಪರ್ಧೆ: ವಿದ್ಯಾರ್ಥಿಗಳಿಗಾಗಿ ಸ್ವತ್ಛ ಭಾರತ ಅಭಿಯಾನ ಕುರಿತು ರಂಗೊಲಿ ನಿಂಬಂಧ ಭಾಷಣ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.  

Advertisement

Udayavani is now on Telegram. Click here to join our channel and stay updated with the latest news.

Next