Advertisement

“ಬದುಕಿನ ನಿವೃತ್ತಿಯ ವರೆಗೆ ಆಸಕ್ತಿಯನ್ನು ಕಾಪಾಡಿ’

12:34 PM Feb 24, 2017 | |

ಕುಂದಾಪುರ:  ಸೇವಾ ನಿವೃತ್ತಿಯು ವಯೋ ಸಹಜ, ಆದರೆ ಬದುಕಿನಿಂದ ನಿವೃತ್ತಿಯನ್ನು ಹೊಂದುವವರೆಗೆ ತಮ್ಮ ತಮ್ಮ ಆಸಕ್ತಿಯ ಪ್ರವೃತ್ತಿಯಲ್ಲಿ ತೊಡಗಿಸಿಕೊಳ್ಳುವುದು ಜೀವನೋತ್ಸಾಹದ ರಹಸ್ಯ. ನಿವೃತ್ತರಾಗಿ ಸಂಸ್ಥೆಯನ್ನು ಬಿಟ್ಟು ದೂರ ಹೋದಾಗ ಅವರ ಸಹವರ್ತಿಗಳೊಂದಿಗೆ ಅಂಟಿದ ನಂಟು ಒಂದಷ್ಟು ಶಿಥಿಲಗೊಂಡರೂ ಮತ್ತೂಮ್ಮೆ ಸೇರಿದಾಗ ಆವರಿಸಿದ ಮಬ್ಬು ಜಾರಿ ಮತ್ತೆ ಮೊದಲಿನ ಭಾವ ಮತ್ತಷ್ಟು ಪ್ರಖರವಾಗುತ್ತದೆ ಎಂದು ಕುಂದಾಪುರದ ಭಂಡಾರ್‌ಕಾರ್ ಕಾಲೇಜಿನ ನಿವೃತ್ತ ಇಂಗ್ಲಿಷ್‌ ಪ್ರಾಧ್ಯಾಪಕ ಪ್ರೊ| ರಘುರಾಮ ರಾವ್‌ ಬೈಕಂಪಾಡಿ ಹೇಳಿದರು.

Advertisement

ಅವರು ಕುಂದಾಪುರದ  ಹಂಗಳೂರಿನ ವೆಂಕಟಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ನಡೆದ ಭಂಡಾರ್‌ಕಾರ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರ ಸಮಾವೇಶದಲ್ಲಿ ನೆನಪುಗಳನ್ನು ಮೆಲುಕು ಹಾಕುತ್ತಾ ಮಾತನಾಡಿದರು.

ಈ ಸಂದರ್ಭದಲ್ಲಿ ಪ್ರೊ| ಕೇಶವ ಮಯ್ಯ, ಪ್ರೊ| ಬಾಲಕೃಷ್ಣ ಭಟ್ಟ, ಪ್ರೊ| ಟಿ.ಆರ್‌.ಮಂಜುನಾಥ,  ಪ್ರೊ| ವಿ.ಎಲ್‌ ಉಪಾಧ್ಯ, ಪ್ರೊ| ಕೆ.ಸಿ ಶರ್ಮ, ಪ್ರೊ| ಚಿತ್ರಪಾಡಿ, ಪ್ರೊ| ಉಪೇಂದ್ರ ಸೋಮಯಾಜಿ, ಡಾ| ಎಚ್‌. ವಿ. ನರಸಿಂಹ ಮೂರ್ತಿ, ಪ್ರೊ| ಪಿ.ಆರ್‌. ಭಟ್ಟ್, ಪ್ರೊ| ನಾರಾಯಣ ರಾವ್‌ ಮೊದಲಾದವರು ತಮ್ಮ ತಮ್ಮ ಸೇವಾ ದಿನಗಳಲ್ಲಿಯ ಮಧುರ ಕ್ಷಣಗಳನ್ನು ನೆನಪಿಸಿಕೊಂಡರು. ಸಂಯೋಜಕ   ಎ.ಪಿ. ಮಿತ್ತಂತಾಯ  ಸ್ವಾಗತಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next