Advertisement

ಫೆಬ್ರವರಿಯಲ್ಲಿ ಕೆಸಿಸಿ ಸೀಸನ್‌ 3: ಮಾಹಿತಿ ನೀಡಿದ ಕಿಚ್ಚ

10:46 AM Jan 24, 2023 | Team Udayavani |

ಸಿನಿಮಾ ಕೆಲಸಗಳಿಂದ ಕೊಂಚ ಬ್ರೇಕ್‌ ಪಡೆದುಕೊಂಡು ಚಿತ್ರರಂಗದ ಕಲಾವಿದರು, ತಂತ್ರಜ್ಞರು ಪ್ರತಿವರ್ಷ ಒಂದೆಡೆ ಸೇರಿ ನಡೆಸಿಕೊಂಡು ಬರುತ್ತಿರುವ “ಕರ್ನಾಟಕ ಚಲನಚಿತ್ರ ಕಪ್‌’ (ಕೆಸಿಸಿ) ಕ್ರಿಕೆಟ್‌ ಲೀಗ್‌ನ ಮೂರನೇ ಆವೃತ್ತಿಗೆ ದಿನಗಣನೆ ಶುರುವಾಗಿದೆ. ಅಂದಹಾಗೆ, ಈ ವರ್ಷ “ಕರ್ನಾಟಕ ಚಲನಚಿತ್ರ ಕಪ್‌’ (ಕೆಸಿಸಿ) ಕ್ರಿಕೆಟ್‌ ಲೀಗ್‌ನ ಮೂರನೇ ಆವೃತ್ತಿ ಇದೇ ಫೆ. 11 ಮತ್ತು 12ರಂದು ಮೈಸೂರಿನಲ್ಲಿ ನಡೆಯಲಿದೆ.

Advertisement

ಇನ್ನು ಕೆಸಿಸಿ ಕ್ರಿಕೆಟ್‌ ಲೀಗ್‌ನ ಮೂರನೇ ಆವೃತ್ತಿಯ ಪೂರ್ವಭಾವಿ ತಯಾರಿ ಬಗ್ಗೆ ಸುದ್ದಿಗೋಷ್ಟಿ ನಡೆಸಿರುವ ನಟ ಸುದೀಪ್‌, ಈ ವರ್ಷ ನಡೆಯಲಿರುವ ಕೆಸಿಸಿ 3ನೇ ಆವೃತ್ತಿಯ ಏನೆಲ್ಲ ಇರಲಿದೆ ಎನ್ನುವ ಬಗ್ಗೆ ಮಾಹಿತಿ ನೀಡಿದ್ದಾರೆ.

“ಕ್ರಿಕೆಟ್‌ ಆಡೋಕೆ ಅವಕಾಶ ಸಿಕ್ಕಿದ್ದು “ಕರ್ನಾಟಕ ಚಲನಚಿತ್ರ ಕಪ್‌’ನಿಂದ. ಈಗಾಗಲೇ ಎರಡೂ ಸೀಸನ್‌ ಯಶಸ್ವಿ ಆಗಿದ್ದು, ಈಗ ಮೂರನೇ ಸೀಸನ್‌ಗೆ ಚಾಲನೆ ನೀಡಲಾಗುತ್ತಿದೆ. ಹಿಂದಿನ ಬಾರಿಯಂತೆ ಈ ಬಾರಿಯೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿದ ಕ್ರಿಕೆಟ್‌ ಆಟಗಾರರು ಕೆಸಿಸಿ 3ನೇ ಆವೃತ್ತಿಯಲ್ಲಿ ಇರಲಿ¨ªಾರೆ. ಈ ಸೀಸನ್‌ನಲ್ಲಿಯೂ ಆರು ಅಂತಾರಾಷ್ಟ್ರೀಯ ಆಟಗಾರರು ಇರುತ್ತಾರೆ. ನಮ್ಮ ಸಿನಿಮಾ ರಂಗದವರು ಇರುತ್ತಾರೆ. ಜೊತೆಗೆ ಬೇರೆ ಚಿತ್ರರಂಗದವರೂ ಆಡೋಕೆ ಬರಬಹುದು. ರಾಜಕೀಯ ಹಾಗೂ ಮಾಧ್ಯಮದವರು ಕೂಡ ಇದರಲ್ಲಿ ಭಾಗಿ ಆಗಬಹುದು’ ಎಂದು ಸುದೀಪ್‌ ಮಾಹಿತಿ ನೀಡಿದ್ದಾರೆ.

ಇನ್ನು ಕಳೆದ ಎರಡು ಸೀಸನ್‌ಗಳಲ್ಲಿ ಚಿತ್ರರಂಗದಲ್ಲಿ ಅನೇಕರು ಕೆಸಿಸಿಯಲ್ಲಿ ಆಡಿದ್ದಾರೆ. ಇನ್ನೂ ಕೆಲವರು ಇದರಲ್ಲಿ ಪಾಲ್ಗೊಂಡಿರಲಿಲ್ಲ. “ಕೆಲವರಿಗೆ ಸುದೀಪ್‌ ಕಡೆಯಿಂದ ಆಹ್ವಾನ ಹೋಗಿಲ್ಲ’ ಎನ್ನುವ ಮಾತುಗಳು ಬಂದಿದ್ದವು. ಇದಕ್ಕೆ ಆರಂಭದಲ್ಲೇ ಉತ್ತರ ನೀಡಿರುವ ಸುದೀಪ್‌, “ನಾವು ಚಿತ್ರರಂಗದ ಎಲ್ಲರಿಗೂ ಆಹ್ವಾನ ನೀಡುತ್ತಿದ್ದೇವೆ. ಕೆಲವರಿಗೆ ಈ ಟೂರ್ನಿಯಲ್ಲಿ ಆಡೋಕೆ ಇಷ್ಟ ಇರಲ್ಲ. ಅಂಥವರು ಬರಲ್ಲ. ಅವರು ಯಾಕೆ ಬಂದಿಲ್ಲ, ಇವರು ಯಾಕೆ ಬಂದಿಲ್ಲ ಅಂತ ಕೇಳಬೇಡಿ. ಚಿತ್ರರಂಗ ನನ್ನ ಸ್ವತ್ತಲ್ಲ. ಹೀಗಾಗಿ, ನಾವು ಎಲ್ಲರಿಗೂ ಆಹ್ವಾನ ನೀಡುತ್ತಿದ್ದೇವೆ. ಅವರವರ ಶೆಡ್ಯೂಲ್‌ ನೋಡಿಕೊಂಡು ಬರುತ್ತಾರೆ’ ಎಂದಿದ್ದಾರೆ.

ಕೆಸಿಸಿಯಲ್ಲಿ ತಂಡಗಳು ಮತ್ತು ಕ್ಯಾಪ್ಟನ್‌ ಆಯ್ಕೆ ಬಗ್ಗೆ ಮಾತನಾಡಿರುವ ಸುದೀಪ್‌, “ಕೆಸಿಸಿಯಲ್ಲಿ ಮೊದಲು ಎಲ್ಲ ತಂಡಗಳ ರಚನೆಯಾಗುತ್ತದೆ. ಆದಾದ ನಂತರದಲ್ಲಿ ಕ್ಯಾಪ್ಟನ್‌ ಆಯ್ಕೆ ಆಗುತ್ತದೆ. ಅವರವರ ತಂಡದ ಕ್ಯಾಪ್ಟನ್‌ ಆಯ್ಕೆ ಅವರೇ ಮಾಡಿಕೊಳ್ಳಬೇಕು. ಒಮ್ಮತದಿಂದ ಕ್ಯಾಪ್ಟನ್‌ ಆಯ್ಕೆ ನಡೆಯುತ್ತದೆ. ಒತ್ತಾಯ ಪೂರ್ವಕವಾಗಿ ಇಲ್ಲಿ ಯಾರೂ ಕ್ಯಾಪ್ಟನ್‌ ಆಗೋಕೆ ಆಗಲ್ಲ’ ಎಂದಿದ್ದಾರೆ.

Advertisement

“ಈ ಬಾರಿಯ ಕೆಸಿಸಿ 3ನೇ ಸೀಸನ್‌’ಗೆ ಅದ್ದೂರಿ ಚಾಲನೆ ನೀಡಲು ನಿರ್ಧರಿಸಲಾಗಿದೆ. ಟೂರ್ನಿಯಲ್ಲಿ ಕ್ರಿಕೆಟ್‌ ಜೊತೆಗೆ ಸಾಕಷ್ಟು ಮನರಂಜನೆ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದ್ದು, ಅನೇಕ ಗಾಯಕರು, ಕಲಾವಿದರು ಇದರಲ್ಲಿ ಭಾಗಿಯಾಗಲಿದ್ದಾರೆ. ಎರಡು ದಿನಗಳ ಕಾಲ ನಡೆಯಲಿರುವ ಕೆಸಿಸಿ ಟೂರ್ನಿ ಈ ಬಾರಿ ಫೆ. 11 ಹಾಗೂ 12ರಂದು ಮೈಸೂರಿನಲ್ಲಿ ನಡೆಯಲಿದೆ. ಕೆಸಿಸಿ ಟಿವಿಯಲ್ಲಿ ಈ ಟೂರ್ನಿಯ ಲೈವ್‌ ಇರುತ್ತದೆ’ ಎಂದು ತಿಳಿಸಿದ್ದಾರೆ ಸುದೀಪ್‌.

Advertisement

Udayavani is now on Telegram. Click here to join our channel and stay updated with the latest news.

Next