Advertisement

ಕಾವೂರು: ಕಾಂಗ್ರೆಸ್ ವಿರುದ್ದ ಬಿಜೆಪಿ ಪ್ರತಿಭಟನೆ

06:05 PM Feb 26, 2022 | Team Udayavani |

ಕಾವೂರು: ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷ ಕಲಾಪಕ್ಕೆ ಅಡ್ಡಿಪಡಿಸಿರುವು ಹಾಗೂ ರಾಜ್ಯದಲ್ಲಿ ಅಶಾಂತಿ ಸೃಷ್ಟಿಗೆ ಕಾರಣವಾಗಿವುದನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ ಉತ್ತರ ಮಂಡಲದ ವತಿಯಿಂದ ಕಾವೂರಿನಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಲಾಯಿತು.

Advertisement

ಕಾವೂರಿನ ಬಿಜೆಪಿ ಕಚೇರಿಯಿಂದ ಕಾವೂರು ಜಂಕ್ಷನ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗಿ, ಕಾಂಗ್ರೆಸ್ ಪಕ್ಷದ ಸಂವಿಧಾನ ವಿರೋಧಿ ನಡೆಯನ್ನು ಖಂಡಿಸಲಾಯಿತು.

ಈ ವೇಳೆ ಶಾಸಕರಾದ ಡಾ ಭರತ್ ಶೆಟ್ಟಿ ವೈ ಮಾತನಾಡಿ, ನೂರಾರು ಅಭಿವೃದ್ಧಿ ಪರ ಕಾಯ್ದೆಗಳನ್ನು, ಅನುಮೋದನೆಗಳನ್ನು ಪಡೆಯುವುದು, ರಾಜ್ಯದ ಅಭಿವೃದ್ಧಿಯ ನಿಟ್ಟಿನಲ್ಲಿ ಕೈಜೋಡಿಸುವ ಕೆಲಸ ಮಾಡಬೇಕಾದ ಕಾಂಗ್ರೆಸ್, ವಿಧಾನಸಭೆಯ ಒಳಗೆ ರಾಷ್ಟ್ರಧ್ವಜವನ್ನು ಹಿಡಿದುಕೊಂಡು ಪ್ರವೇಶಿಸಿ ಕಾನೂನಿಗೆ ವಿರುದ್ಧವಾಗಿ ವರ್ತಿಸಿ ದೇಶದ್ರೋಹಿ ಕೆಲಸವನ್ನು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ತನ್ನ ನಿರ್ಧಾರವನ್ನು ಧೈರ್ಯದಿಂದ ಪ್ರಕಟಿಸಲು ಮುಂದಾಗದೆ, ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಎಸ್ಡಿಪಿಐ ಪಕ್ಷದೊಂದಿಗೆ ಸೇರಿಕೊಂಡು ಶಿಕ್ಷಣಕ್ಕಾಗಿ ಬರುತ್ತಿದ್ದ ವಿದ್ಯಾರ್ಥಿನಿಯರ ಮನಸ್ಸಿನಲ್ಲಿ ಧರ್ಮದ ಆಫೀಮನ್ನು ತುಂಬಿ ಅವರ ಮನಸ್ಸಿನಲ್ಲಿ ಮಾನಸಿಕವಾಗಿ ಕ್ಷೋಭೆಯನ್ನು ತುಂಬಿದ್ದಾರೆ ಎಂದರು.

Advertisement

ಶಿಕ್ಷಣ ರಂಗ ಎಂಬುದು ಅಲ್ಲಿ ಯಾವುದೇ ರೀತಿಯಲ್ಲಿ ಜಾತಿಭೇದವಿಲ್ಲದೆ ಸಮಾನವಾಗಿ ವಿದ್ಯೆಯನ್ನು ಕಲಿತು ಅವರು ಕೂಡ ಮುಖ್ಯವಾಹಿನಿಯಲ್ಲಿ ಬರಬೇಕು ಎಂಬ ಒಲವು ಎಲ್ಲರಿಗೂ ಇದೆ. ಆದರೆ ಶಿಕ್ಷಣಕ್ಕಿಂತ ಧರ್ಮವೇ ಮುಖ್ಯ ಎಂಬುದನ್ನು ಆ ಪುಟ್ಟ ಮಕ್ಕಳ ಮನದಲ್ಲಿ ತುಂಬಿಸಿ ಮುಸಲ್ಮಾನ ಮಕ್ಕಳನ್ನು ಆಧುನಿಕ ಯುಗದಿಂದ ಮತ್ತೆ ಶಿಲಾಯುಗಕ್ಕೆ ಕರೆದೊಯ್ಯುವ ಸಣ್ಣ ಮನಸ್ಸಿನ ಬುದ್ಧಿಯನ್ನು ತೋರ್ಪಡಿಸಿದ್ದಾರೆ ಎಂದು ಆರೋಪಿಸಿದರು.

ಶಿವಮೊಗ್ಗದಲ್ಲಿ ರಾಷ್ಟ್ರೀಯವಾದಿ, ದೇಶಭಕ್ತ ಬಜರಂಗದಳದ ಕಾರ್ಯಕರ್ತ ಹರ್ಷ ಅವರನ್ನು ಹತ್ಯೆ ಮಾಡಿ, ಕೋಮುವಾದಿ ಮುಸ್ಲಿಂ ಗೂಂಡಾಗಳು ಕ್ರೂರತೆಯನ್ನು ಮೆರೆದಿದ್ದಾರೆ. 6 ಗಂಟೆಯಲ್ಲಿ ಕೊಲೆಗಡುಕರನ್ನು ಬಂಧಿಸಿ ಜೈಲಿಗೆ ತಳ್ಳಿದ್ದೇವೆ. ಬಿಜೆಪಿ ಸರಕಾರ ಇದೆಲ್ಲವನ್ನು ದೃಢವಾಗಿ ನಿಯಂತ್ರಿಸಿ ನಮ್ಮ ಆಡಳಿತದ ಅವಧಿಯಲ್ಲಿ ಇಂತಹ ಕೃತ್ಯಗಳನ್ನು ಸಹಿಸುವುದಿಲ್ಲ ಎಂದು ಸ್ಪಷ್ಟವಾದ ಎಚ್ಚರಿಕೆಯನ್ನು ನೀಡಿದೆ ಎಂದರು.

ಬಿಜೆಪಿ ಸರಕಾರದ ಅವಧಿಯಲ್ಲಿ ಕೋಮುಗಲಭೆಯನ್ನು ಸೃಷ್ಟಿಸಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಸಂಚಿನ ಭಾಗವಾಗಿದೆ. ಈ ಹಿಂದೆ ಮಂಗಳೂರಿನಲ್ಲಿ ಸಿಎಎ ಕಾಯಿದೆಯ ವಿರೋಧಿಸುವ ನೆಪದಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವ ವಿಫಲ ಮಾಡಿದರು. ಕೆಜಿ ಹಳ್ಳಿ ಕಾಂಗ್ರೆಸ್ ಪಕ್ಷದ ದಲಿತ ಶಾಸಕನ ಮನೆಗೆ ಬೆಂಕಿ ಹಚ್ಚಿ, ಕೋಮುಗಲಭೆಗೆ ಯತ್ನಿಸಲಾಯಿತು. ಈ ಸಂದರ್ಭ ಸ್ವತ: ಕಾಂಗ್ರೆಸ್ ನಾಯಕರೇ ದಲಿತ ಶಾಸಕನ ನೆರವಿಗೆ ಬಾರದೆ ದೂರ ನಿಂತಿದ್ದಾರೆ. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಎಸ್ಡಿಪಿಐ ಮತ್ತು ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡು ಕೆಲವು ಗ್ರಾಮ ಪಂಚಾಯತ್ ನಲ್ಲಿ ಅಧಿಕಾರ ನಡೆಸುತ್ತಿದೆ. ಒಂದು ವೇಳೆ ಕೋಮು ಶಕ್ತಿಯೊಂದಿಗೆ ದೂರ ಇರುವುದಾದರೆ ತಕ್ಷಣ ರಾಜೀನಾಮೆ ನೀಡಿ ಕಾಂಗ್ರೆಸ್ ಸದಸ್ಯರು ಹೊರಗೆ ಬನ್ನಿಎಂದು ಸವಾಲು ಹಾಕಿದರು.

ಪ್ರತಿಭಟನೆಯಲ್ಲಿ ಉತ್ತರ ಮಂಡಲ ಭಾಜಪಾ ಅಧ್ಯಕ್ಷರಾದ ತಿಲಕರಾಜ್ ಕೃಷ್ಣಾಪುರ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪೂಜಾ ಪೈ, ಉಪಾಧ್ಯಕ್ಷ ಗಣೇಶ್ ಹೊಸಬೆಟ್ಟು, ಜಿಲ್ಲಾ ಮಾದ್ಯಮ ಪ್ರಮುಖ್ ರಣ್ ದೀಪ್ ಕಾಂಚನ್, ಪ್ರಧಾನ ಕಾರ್ಯದರ್ಶಿ ಗಳಾದ ರಾಜೇಶ್ ಕೊಟ್ಟಾರಿ, ಸಂದೀಪ್ ಪಚ್ಚನಾಡಿ, ಮನಪಾ ಸದಸ್ಯರು, ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಪಕ್ಷದ ವಿವಿಧ ಮೋರ್ಚಾಗಳ ಪ್ರಮುಖರು, ಮಂಡಲದ ಪ್ರಮುಖರು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next