Advertisement

ಕಸ್ತೂರಿ ವರದಿ ಜಾರಿಗೆ ಮುಂದಾದರೆ ತೀವ್ರ  ಹೋರಾಟ: ರೈ

09:08 AM Aug 17, 2018 | |

ಮಂಗಳೂರು: ರಾಜ್ಯದ ವಿರೋಧದ ನಡುವೆಯೂ ಕೇಂದ್ರ ಸರಕಾರ ಕಸ್ತೂರಿರಂಗನ್‌ ವರದಿಯನ್ನು ಜಾರಿಗೊಳಿಸಿದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಮಾಜಿ ಅರಣ್ಯ ಸಚಿವ ಬಿ. ರಮಾನಾಥ ರೈ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
 
ವರದಿ ತಿರಸ್ಕರಿಸುವಂತೆ ನಾನು ಅರಣ್ಯ ಸಚಿವನಾಗಿದ್ದ ಸಂದರ್ಭ ಕೇಂದ್ರ ಸರಕಾರಕ್ಕೆ 2017ರ ಎ. 22ರಂದು ಪತ್ರ ಬರೆಯಲಾಗಿತ್ತು. 2018ರ ಎ.11ರಂದು ಕೇಂದ್ರ ಸರಕಾರ ನಡೆಸಿದ ಸಭೆಯಲ್ಲಿ ವರದಿಯನ್ನು ತಿರಸ್ಕರಿಸಬೇಕು ಎಂಬುದಾಗಿ ರಾಜ್ಯ ಸರಕಾರ ಸಕಾರಣಗಳೊಂದಿಗೆ ಪುನರುಚ್ಚರಿಸಿತ್ತು ಎಂದರು. 

Advertisement

ಹಿಂದಿನ ಸರಕಾರದ ಅವಧಿಯಲ್ಲಿ ಕರ್ನಾಟಕ ಸಚಿವ ಸಂಪುಟದ ಉಪಸಮಿತಿ ಪ. ಘಟ್ಟದ ಎಲ್ಲ ಜಿಲ್ಲೆ, ತಾಲೂಕು, ಗ್ರಾಮ ಹಾಗೂ ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಅಭಿಪ್ರಾಯ ಪಡೆದಿತ್ತು. ಕಸ್ತೂರಿ ರಂಗನ್‌ ವರದಿ ನೀಡಿದ ಪರಿಸರ ಸೂಕ್ಷ್ಮ ವಲಯ (ಇಎಸ್‌ಎ) ಪುನರ್‌ ಪರಿಶೀಲನೆ ನಡೆಸಬೇಕು ಎಂದು 2015ರ ಜು.7ರಂದು ಹೊಸದಿಲ್ಲಿಯಲ್ಲಿ ಜರಗಿದ ಮಂತ್ರಿಗಳ ಎಂಪವರ್ಡ್‌ ಕಮಿಟಿ ಸಭೆಯಲ್ಲಿ ಕೋರಲಾಗಿತ್ತು. ಆದರೆ 2015ರ ಸೆ. 4ರಲ್ಲಿ ಕರಡು ಪ್ರತಿ ಜಾರಿಗೊಳಿಸಿದ ಕೇಂದ್ರ ಸರಕಾರ ಈ ಬಗ್ಗೆ ಯಾವುದೇ ಭರವಸೆ ನೀಡಿಲ್ಲ. ಅದು ಹೊರಡಿಸಿದ ಕರಡು ಪ್ರತಿಯಲ್ಲಿ ಬರುವ ಎಲ್ಲ ಗ್ರಾ. ಪಂ.ಗಳು ಗೊತ್ತುವಳಿಯ ಮೂಲಕ ಈ ವರದಿಗೆ ಆಕ್ಷೇಪ ವ್ಯಕ್ತಪಡಿಸಿದ್ದನ್ನು ರಾಜ್ಯ ಸರಕಾರವು ಕೇಂದ್ರದ ಗಮನಕ್ಕೆ ತಂದಿದೆ ಎಂದರು.

ಕಸ್ತೂರಿ ರಂಗನ್‌ ವರದಿಯನ್ನು ಅನುಷ್ಠಾನ ಮಾಡುವ ಜವಾಬ್ದಾರಿ ಇರುವುದು ಕೇಂದ್ರಕ್ಕೆ. ರಾಜ್ಯಗಳು ಕೇವಲ ತಮ್ಮ ಅಭಿಪ್ರಾಯ ತಿಳಿಸುತ್ತವೆ. ಕೇಂದ್ರದ ಬಿಜೆಪಿ ಸರಕಾರ ಈಗ ಇದರ ಅನುಷ್ಠಾನಕ್ಕೆ ಹುನ್ನಾರ ರೂಪಿಸಿದೆ. ಇದನ್ನು ಅರಿತಿರುವ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಜನರ ಮುಂದೆ ಸುಳ್ಳು ಹೇಳುತ್ತಿದ್ದಾರೆ ಎಂದರು.

ಸಚಿವ ಯು.ಟಿ. ಖಾದರ್‌ ಮಾತನಾಡಿ, ಬೆಳ್ತಂಗಡಿ ಶಾಸಕರು ರಾಜಕೀಯ ಪ್ರೇರಿತ ಹೇಳಿಕೆಗಳನ್ನು ನೀಡಿರುವುದು ಸರಿಯಲ್ಲ ಎಂದರು. 

ಮೇಯರ್‌ ಭಾಸ್ಕರ್‌ ಕೆ., ಮುಖಂಡರಾದ ಇಬ್ರಾಹಿಂ ಕೋಡಿಜಾಲ್‌, ಶಶಿಧರ ಹೆಗ್ಡೆ, ಪೃಥ್ವಿರಾಜ್‌, ಸಂತೋಷ್‌ ಶೆಟ್ಟಿ,ನಜೀರ್‌ ಬಾಜಾಲ್‌, ಸಲೀಂ, ಶಬ್ಬೀರ್‌ ಉಪಸ್ಥಿತರಿದ್ದರು.

Advertisement

ವರದಿಗಿಂತ ಜಾಸ್ತಿ ಅರಣ್ಯ ಸಂರಕ್ಷಣೆ 
ವರದಿಯಲ್ಲಿ ತೋರಿಸಿರುವ ವಿಸ್ತೀರ್ಣಕ್ಕಿಂತ ಹೆಚ್ಚಿನ ಪ್ರದೇಶವನ್ನು ರಾಜ್ಯವು ಪಶ್ಚಿಮ ಘಟ್ಟಗಳಲ್ಲಿ ಸಂರಕ್ಷಿಸಲು ಕ್ರಮ ಕೈಗೊಂಡಿದೆ. ಫಾರೆಸ್ಟ್‌ ಸರ್ವೇ ಆಫ್‌ ಇಂಡಿಯಾ ವರದಿಯಂತೆ ರಾಜ್ಯದ ಪಶ್ಚಿಮ ಘಟ್ಟ ಪ್ರದೇಶದಲ್ಲಿ 30,573 ಚ.ಕಿ.ಮೀ. ಅರಣ್ಯ ಇದೆ. ಇದು ಕಸ್ತೂರಿ ರಂಗನ್‌ ವರದಿಯಲ್ಲಿ ರಕ್ಷಿಸಬೇಕು ಎಂದು ಸೂಚಿಸಲಾದ 20,668 ಚದರ ಕಿ.ಮೀ. ಮಿತಿಗಿಂತ ಹೆಚ್ಚು. ಈ ಅರಣ್ಯ ಹೊದಿಕೆಯನ್ನು ಅರಣ್ಯ ಕಾಯ್ದೆಯಡಿ ಮೀಸಲು ಅರಣ್ಯ, ರಕ್ಷಿತ ಅರಣ್ಯವೆಂದು ಅಧಿಸೂಚಿಸಲಾಗಿದೆ. ಪಶಿrಮ ಘಟ್ಟ ಪ್ರದೇಶದಲ್ಲಿ ವನ್ಯ ಜೀವಿಧಾಮ, ರಾಷ್ಟ್ರೀಯ ಉದ್ಯಾನಗಳನ್ನು ಜೀವವೈವಿಧ್ಯ ಅತೀ ಹೆಚ್ಚು ಇರುವ ಪ್ರದೇಶಗಳಲ್ಲಿ ರಚಿಸಲಾಗಿದೆ ಎಂದು ರಮಾನಾಥ ರೈ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next