Advertisement

ರಸ್ತೆ ಬ್ಲಾಕ್‌ : ಗಂಟೆಗಟ್ಟಲೆ ವಾಹನ ಸಂಚಾರಕ್ಕೆ ತೊಡಕು

07:10 AM Aug 31, 2017 | Team Udayavani |

ಕುಂಬಳೆ: ಒಂದಲ್ಲ ಒಂದು ಕಾರಣಕ್ಕಾಗಿ ರಸ್ತೆ ಬ್ಲಾಕ್‌ ಆಗಿ ಗಂಟೆಗಟ್ಟಲೆ ವಾಹನ ಸಂಚಾರಕ್ಕೆ ತೊಡಕಾಗುತ್ತಿದೆ.
ಕಾಸರಗೋಡು, ಕುಂಬಳೆ, ಉಪ್ಪಳ, ಮಂಜೇಶ್ವರ ಮೊದಲಾದೆಡೆಗಳಲ್ಲಿ ಇದು ನಿತ್ಯ ವಿದ್ಯಾಮಾನವಾಗಿದೆ.

Advertisement

ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಮಗಾತ್ರದ ಹೊಂಡ ಸೃಷ್ಟಿಯಾಗಿ ವಾಹನಗಳು ಹರಸಾಹಸದ ಮೂಲಕ ಸಂಚರಿಸಬೇಕಾಗಿದೆ. ರಸ್ತೆ ಪಕ್ಕ ದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ ತಮ್ಮ ನಿತ್ಯ ವ್ಯವಹಾರಕ್ಕೆ ತೆರಳಿ ಸಂಜೆ ಬರುತ್ತಾರೆ. ಶಾಪಿಂಗ್‌ ನಡೆಸಲು ವಾಹನದಲ್ಲಿ ಬಂದು ರಸ್ತೆ ಪಕ್ಕದಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದರಿಂದ, ರಸ್ತೆ ಪಕ್ಕದಲ್ಲಿರುವ ವಿವಾಹ ಮಂದಿರಗಳಿಗೆ ಆಗಮಿಸಿದವರು ತಮ್ಮ ವಾಹನಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸುವುದರಿಂದ, ಉತ್ಸವ ಮೆರವಣಿಗೆ, ರಾಜಕೀಯ ಪಕ್ಷಗಳ ಪ್ರತಿಭಟನೆಗಳಿಂದ ರಸ್ತೆಯಲ್ಲಿ ವಾಹನಗಳನ್ನು ಗಂಟೆಗಟ್ಟಲೆ ತಡೆದು ನಿಲ್ಲಿಸಿದರೂ ಕೇಳುವವರಿಲ್ಲದಂತಾಗಿದೆ.

ದೊಡ್ಡ ಪೇಟೆ ಪಟ್ಟಣಗಳಲ್ಲಿ ನಿರ್ದಿಷ್ಟ ಸ್ಥಳವನ್ನು ಬಿಟ್ಟು ವಾಹನಗಳನ್ನು ಪಾರ್ಕ್‌ ಮಾಡಿದಲ್ಲಿ ವಾಹನಗಳಿಗೆ ಲಾಕ್‌ ಅಳವಡಿಸುವ ಅಥವಾ ನಗರಸಭೆಯ ವತಿಯಿಂದ ಈ ವಾಹನಗಳನ್ನು ಒಯ್ದು ದಂಡ ವಿಧಿಸುವ ಸಂವಿಧಾನವಿದೆ.ಆದರೆ ಕಾಸರಗೋಡು ಜಿಲ್ಲೆಯಲ್ಲಿ ಇದ್ಯಾವ ಕಾನೂನು ಪಾಲನೆಯಲ್ಲಿಲ್ಲ. ಇದರಿಂದ ಲಾಗಿ ಲಂಗುಲಗಾಮಿಲ್ಲದೆ ರಸ್ತೆ ತಡೆ ಉಂಟಾಗುವುದು.

ಆದೇ ರಸ್ತೆ ವಾಹನಗಳ ಸಂಖ್ಯೆ ಹೆಚ್ಚಳ ರಾಷ್ಟ್ರೀಯ ಹೆದ್ದಾರಿ ಸಹಿತ ಗ್ರಾಮೀಣ ಪ್ರದೇಶಗಳ ಹಿಂದಿನ ಕಾಲದ ಓಬಿರಾಯನ ಕಾಲದ ಅದೇ ರಸ್ತೆಯಲ್ಲಿ ಇಂದು ವಾಹನ ದಟ್ಟಣೆ ಅಧಿಕವಾಗುತ್ತಿದೆ. ನಿತ್ಯ ಸಹಸ್ರ ಸಂಖ್ಯೆಯಲ್ಲಿ ವಾಹನಗಳ ಸಂಖ್ಯೆ ಏರುತ್ತಿದೆ.

ಕರ್ನಾಟಕದ ತಲಪಾಡಿ ತನಕ ಹೆದ್ದಾರಿ 60 ಮೀಟರ್‌ ಕಾಮಗಾರಿ ನಡೆದಿದೆ. ಆದರೆ ಇದು ಕೇರಳದತ್ತ ಮುಂದೆ ಸಾಗಲೇ ಇಲ್ಲ. ಕೇರಳ ಸಣ್ಣ ರಾಜ್ಯವೆಂದು  40 ಮೀಟರ್‌ ಹೆದ್ದಾರಿ ಅಗಲಗೊಳಿಸುವುದನ್ನು 30 ಮೀಟರ್‌ಗೆ ಸೀಮಿತಗೊಳಿಸಬೇಕೆಂಬುದಾಗಿ ಹಿಂದಿನ ಸರಕಾರದ ಪರೋಕ್ಷ ನಿಲುವಾಗಿತ್ತು.ಆದರೆ ಇದಕ್ಕೆ ಒಪ್ಪಿಗೆ ಸಿಕ್ಕಿಲ್ಲ. ಆದರೆ 40 ಮೀಟರ್‌ ರಸ್ತೆ ಅಗಲ ಗೊಳಿಸಲು ಮೀನಮೇಷ ಎಣಿಸುವ ಇಂದಿನ ಸರಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಇದೇ ರೀತಿ ಮುಂದುವರಿದಲ್ಲಿ ಸಮಸ್ಯೆ ಇನ್ನಷ್ಟು ಬಿಗಡಾಯಿಸಲಿದೆ. ತಲಪಾಡಿಯಿಂದ ಕಾಸರಗೋಡು ತನಕ ರಸ್ತೆ ಆಗಲಗೊಳಿಸಲು ಹೆಚ್ಚಿನ ಕಡೆಗಳಲ್ಲಿ ರಸ್ತೆ ಇಕ್ಕೆಲಗಳಲ್ಲಿ ಸರಕಾರಿ ಸ್ಥಳ ಮೀಸಲಿರಿಸಿದೆ  ಎಂಬುದಾಗಿ ಅಧಿಕಾರಿಗಳ ಹೇಳಿಕೆಯಾಗಿದೆ. 

Advertisement

ಆದರೆ ಸರಕಾರದಿಂದ ಈ ತನಕ ಸ್ಥಳ ಸ್ವಾಧೀನ ಪಡಿಸುವ ಕ್ರಿಯೆ ನಿಧಾನಗತಿಯಲ್ಲಿ ಸಾಗುತ್ತಿದೆ.ಇದರಿಂದಲಾಗಿ ವಾಹಗಳಲ್ಲಿ ತೆರಳುವ ಪ್ರಯಾಣಿಕರ ಅಮೂಲ್ಯ ಸಮಯ ವ್ಯಯವಾಗುತ್ತಿದೆ. ಚುನಾಯಿತರ ಇಚ್ಛಾ ಶಕ್ತಿಯ ಕೊರತೆಯೇ ಇದಕ್ಕೆ ಕಾರಣವೆಂಬುದಾಗಿ ಸಾರ್ವಜನಿಕರ ಆರೋಪವಾಗಿದೆ. ರಸ್ತೆ ತಡೆ ಸಮಸ್ಯೆಗೆ ಶೀಘ್ರ ಪರಿಹಾರವಾಗಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next