ಕಾಸರಗೋಡು: ಎರ್ನಾಕುಳಂನಲ್ಲಿ ಡಿ. 17ರಂದು ಬೈಕ್ ಢಿಕ್ಕಿ ಹೊಡೆದು ಗಾಯಗೊಂಡು ಗಂಭೀರ ಸ್ಥಿತಿಯಲ್ಲಿ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚೆಂಗಳ ತೈವಳಪ್ಪಿನ ಸಿ.ವಿ.ಅಬೂಬಕರ್ ಅವರ ಪುತ್ರ ಸಿ.ವಿ.ಶಫೀಕ್ (22) ಸಾವಿಗೀಡಾದರು. 2023ರ ಡಿ. 17ರಂದು ಇವರು ಸಂಚರಿಸುತ್ತಿದ್ದ ಬೈಕ್‌ಗೆ ಇನ್ನೊಂದು ಬೈಕ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದರು.
Advertisement
ನಾಪತ್ತೆಯಾದ ಬಾಲಕಿ ಮುಂಬಯಿಯಲ್ಲಿ ಪತ್ತೆಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಎ. 19 ರಂದು ನಾಪತ್ತೆಯಾಗಿದ್ದ 17ರ ಹರೆಯದ ಬಾಲಕಿಯನ್ನು ಮುಂಬಯಿಯಿಂದ ಪತ್ತೆ ಹಚ್ಚಲಾಗಿದೆ.
ಕಾಸರಗೋಡು: ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಕಲ್ಲಿಕೋಟೆ ನಾದಾಪುರಂ ನಿವಾಸಿ ಎನ್.ಯಾಹಿಯಾ (28)ನನ್ನು ಚಂದೇರ ಪೊಲೀಸರು ಬಂಧಿಸಿದ್ದಾರೆ.
Related Articles
Advertisement