Advertisement

ಕನ್ನಡದ ಅಸ್ಮಿತೆಗಾಗಿ ಕಸಾಪ ಸೇವೆ ಅನನ್ಯ: ಅಖಂಡೇಶ್ವರ

05:50 PM May 09, 2022 | Team Udayavani |

ಗುರುಮಠಕಲ್‌: ಕನ್ನಡ ನಾಡು- ನುಡಿಯ ಉಳಿಯಲು ಕನ್ನಡ ಸಾಹಿತ್ಯ ಪರಿಷತ್‌ ಸೇವೆ ಅನನ್ಯವಾಗಿದೆ ಎಂದು ನಿವೃತ್ತ ಉಪನ್ಯಾಸಕ ಅಖಂಡೇಶ್ವರ ಹಿರೇಮಠ ಅಭಿಪ್ರಾಯ ಪಟ್ಟರು.

Advertisement

ಪಟ್ಟಣದ ಸರಕಾರಿ ನೌಕರರ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ನ 108ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಉಪನ್ಯಾಸ ಅವರು ನೀಡಿದರು.

ಯಾದಗಿರಿ ಜಿಲ್ಲೆಯು ವಚನಗಳಿಗೆ ಮತ್ತು ಕಲಬುರ್ಗಿ ಸಾಹಿತ್ಯಕ್ಕೆ ಆದಿಯಾಗಿದೆ. ಸರ್‌.ಎಂ. ವಿಶ್ವಶ್ವೇರಯ್ಯನವರ ಕನಸಿನ ಕೂಸು ಆಗಿರುವ ಕಸಾಪ ಇಂದು ಸಾಹಿತ್ಯ ಕ್ಷೇತ್ರಕ್ಕೆ ಮೀಸಲು ಆಗದೆ ನಾಡು, ಗಡಿನಾಡು, ಜಲ, ನೆಲ, ಸಂಪನ್ಮೂಲಗಳನ್ನು, ಸ್ವಾಭಿಮಾನ ಮತ್ತು ಉದ್ಯೋಗ ಕನ್ನಡಿಗರಿಗೆ ಕಲ್ಪಿಸಲು ಕಸಾಪ ಹೋರಾಟ ನಿಜಕ್ಕೂ ಅವಿಸ್ಮರಣೀಯವಾಗಿದೆ ಎಂದರು.

ಕನ್ನಡಪರ ಚಟುವಟಿಕೆಗಳಲ್ಲಿ ಸಕ್ರೀಯವಾಗಿದೆ. ಇಲ್ಲಿನ ಕಸಾಪವು ಸಾಹಿತ್ಯದ ಹಲವು ಪುಸ್ತಕಗಳನ್ನು ಮುದ್ರಿಸಲು ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು.

ತಾಲೂಕು ಕಸಾಪ ಅಧ್ಯಕ್ಷ ಬಸರೆಡ್ಡಿ ಎಂಟಿಪಲ್ಲಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಂತೋಷ ಕುಮಾರ ನೀರಟಿ, ನಾರಾಯಣರೆಡ್ಡಿ ಚಪೆಟ್ಟಾ, ಪದಾಧಿಕಾರಿಗಳಾದ ಲಿಂಗನಂದ ಗೋಗಿ, ಹಣಮಂತು, ಶರಣು ಪಸಾರ, ಹಣಮಂತು ಜಿ., ಮಲ್ಲಯ್ಯ, ಯಲ್ಲಪ್ಪ ಯಾದವ, ಕಲಸಪ್ಪ, ಆಶೋಕ ಜಿ, ಬಾಲರಾಜ, ನರಸಪ್ಪ ಕೊಟ್ರೀಕೆ, ವಿನೋದ ಪಂಚಾಲ್‌ ಸೇರಿದಂತೆ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next