Advertisement
ಲಾಲ್‌ಬಾಗ್‌ನಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಕಡೆಗೆ ಹೋಗುವಲ್ಲಿ ಫುಟ್‌ಪಾತ್‌ನಲ್ಲಿಯೇ ವಾಹನಗಳನ್ನು ಪಾರ್ಕಿಂಗ್ ಮಾಡಲಾಗುತ್ತಿದೆ. ಇದರಿಂದಾಗಿ ಪಾದಚಾರಿ ಗಳು ರಸ್ತೆಯಲ್ಲಿ ನಡೆಯುವಂತಾಗಿದೆ. ವಾಹನಗಳು ಅತೀ ವೇಗದಿಂದ ಧಾವಿಸುತ್ತಿರುವುದರಿಂದ ಅಪಾಯ ಉಂಟಾಗುತ್ತಿದೆ. ಅಲ್ಲದೆ ಫುಟ್‌ಪಾತ್‌ನ ಮೇಲೆ ಪಾರ್ಕ್ ಮಾಡಲು ಬರುವಾಗ ಮತ್ತು ಫುಟ್‌ಪಾತ್‌ನಿಂದ ರಸ್ತೆಗೆ ಇಳಿಯುವ ವೇಳೆ ವಾಹನ ಚಾಲಕರು ಪಾದಚಾರಿಗಳನ್ನು ಗಮನಿಸದೇ ನಿರ್ಲಕ್ಷ್ಯ ವಹಿಸುತ್ತಿರುವುದು ಕೂಡ ಕಂಡುಬರುತ್ತಿದೆ.
ಪಾಲಿಕೆ ಕಚೇರಿಯ ಎದುರಿನಲ್ಲಿರುವ ಬಸ್ ತಂಗುದಾಣದಿಂದ ಬಲ್ಲಾಳ್‌ಬಾಗ್ ಕಡೆಗೆ ಹೋಗುವಲ್ಲಿ ಖಾಸಗಿ ಯವರು ಅಲಂಕಾರಿಕ ಗಿಡಗಳನ್ನು ಫುಟ್‌ಪಾತ್‌ಗೆ ಅಡ್ಡವಾಗಿ ಬೆಳೆಸಿ ರುವುದರಿಂದ ಇದು ಫುಟ್‌ಪಾತ್ ಎಂಬುದಾಗಿ ಗೊತ್ತಾಗದಷ್ಟು ಮರೆಮಾಚಿದೆ. ಇದು ಪಾದಚಾರಿಗಳ ಸಂಚಾರಕ್ಕೆ ತೀರಾ ಅಡ್ಡಿಯನ್ನುಂಟು ಮಾಡುತ್ತಿದೆ. ರಾತ್ರಿ ವೇಳೆ ಇಲ್ಲಿ ಫುಟ್‌ಪಾತ್ ಬಳಸಲು ಭಯಪಡುವಂತಾಗಿದೆ. ಇಲ್ಲಿ ಬೀದಿ ದೀಪ ಕೂಡ ಉರಿಯುತ್ತಿಲ್ಲ. ಇಲ್ಲಿಗೆ ಬರುವ ಗ್ರಾಹಕರು, ಮದ್ಯಪಾನ, ಧೂಮಪಾನ ಮಾಡುವವರು ಕತ್ತಲಿನಲ್ಲಿ ಫುಟ್‌ಪಾತ್ ಮೇಲೆ ಗಿಡಗಳ ನಡುವೆ ನಿಲ್ಲುವುದರಿಂದ ರಾತ್ರಿ ವೇಳೆ ಪಾದಚಾರಿಗಳಿಗೆ, ಅದರಲ್ಲಿಯೂ ಮಹಿಳೆಯರಿಗೆ ಭಾರೀ ತೊಂದರೆಯಾಗುತ್ತಿದೆ ಎಂಬ ದೂರುಗಳು ಕೇಳಿ ಬಂದಿವೆ. ಈ ಹಿಂದೆ ಪೊಲೀಸರಿಗೆ ದೂರು ನೀಡಿದ್ದ ಬಳಿಕ ಸ್ವಲ್ಪ ಸಮಯ ತೆರವು ಮಾಡಲಾಗಿತ್ತು. ಇದೀಗ ಮತ್ತೆ ಫುಟ್‌ಪಾತ್ ಕಾಣದಂತಿದೆ.
Related Articles
ಸ್ಮಾರ್ಟ್‌ಸಿಟಿಯಿಂದ ಫುಟ್‌ಪಾತ್‌ಗಳು ನಿರ್ಮಾಣಗೊಂಡರೂ ಅದು ಪಾದಚಾರಿಗಳ ಬಳಕೆಗೆ ಸಮರ್ಪಕವಾಗಿ ದೊರೆಯುತ್ತಿಲ್ಲ. ಈ ಬಗ್ಗೆ ಪಾಲಿಕೆ ಅಧಿಕಾರಿಗಳು, ಪೊಲೀಸರು ಕೂಡ ನಿರ್ಲಕ್ಷ್ಯ ವಹಿಸಿದ್ದಾರೆ. ಪರಿಣಾಮವಾಗಿ ಪಾದಚಾರಿಗಳು ರಸ್ತೆಯಲ್ಲೇ ಅಪಾಯಕಾರಿಯಾಗಿ ನಡೆದಾಡು ವಂತಾಗಿದೆ.
Advertisement