Advertisement

ಕರಿಯಪ್ಪ ಕಾಮಿಡಿ ಕೆಮಿಸ್ಟ್ರಿ

12:30 AM Jan 25, 2019 | Team Udayavani |

ಕಾಮಿಡಿ ಕಥಾಹಂದರ ಹೊಂದಿರುವ “ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದ ಆಡಿಯೋ ಮತ್ತು ಟ್ರೇಲರ್‌ ಇತ್ತೀಚೆಗೆ ಹೊರಬಂದಿದೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಹಾಸ್ಯನಟ ಮಿತ್ರ, ಗಾಯಕಿ ವಾಣಿ ಹರಿಕೃಷ್ಣ, ಪ್ರಣವ ಮೂರ್ತಿ ಸೇರಿದಂತೆ ಚಿತ್ರರಂಗದ ಹಲವರು ಉಪಸ್ಥಿತರಿದ್ದು, ಚಿತ್ರದ ಆಡಿಯೋ ಮತ್ತು ಟ್ರೇಲರ್‌ನ್ನು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. 

Advertisement

ಸಾಮಾನ್ಯವಾಗಿ ಚಿತ್ರಗಳ ಟೈಟಲ್‌ಗೆ ಹೀರೋ ಹೆಸರಿಡುವುದು ವಾಡಿಕೆ. ಆದರೆ ಈ ಚಿತ್ರದಲ್ಲಿ ಮಾತ್ರ ಟೈಟಲ್‌ಗೆ ಹೀರೋ ಅಪ್ಪನ ಹೆಸರಿಡಲಾಗಿದೆ. ತನ್ನ ಮಗನ ಸಂಸಾರ ಬೀದಿಗೆ ಬೀಳುವ ಹೊತ್ತಲ್ಲಿ ಅಪ್ಪ ಹೇಗೆ ಜಾಣ್ಮೆಯಿಂದ ಅದನ್ನು ಕಾಪಾಡುತ್ತಾನೆ ಎನ್ನುವುದು ಚಿತ್ರದ ಕಥಾಹಂದರ ಹಾಗಾಗಿ ಚಿತ್ರಕ್ಕೆ ಚಿತ್ರದ ಹೀರೋನ ತಂದೆಯ ಹೆಸರು ಇಡಲಾಗಿದೆಯಂತೆ. ತುಂಬಾ ಗಂಭೀರ ವಿಷಯವನ್ನು ಹ್ಯೂಮರಸ್‌ ಆಗಿ ಈ ಚಿತ್ರದಲ್ಲಿ ಹೇಳಲಾಗಿದೆ ಎನ್ನುತ್ತದೆ ಚಿತ್ರತಂಡ. 

ಚಿತ್ರದಲ್ಲಿ ಹೀರೋ ಆಗಿ”ಕಿರಿಕ್‌ ಪಾರ್ಟಿ’ ಖ್ಯಾತಿಯ ಚಂದನ್‌ ಆಚಾರ್‌, ಹೀರೋ ಅಪ್ಪನ ಪಾತ್ರದಲ್ಲಿ ತಬಲಾ ನಾಣಿ ನಟಿಸಿ¨ªಾರೆ. ಉಳಿದಂತೆ ಸಂಜನಾ ಆನಂದ್‌, ಮೈಕೋ ನಾಗರಾಜ್‌, ಸುಚೇಂದ್ರ ಪ್ರಸಾದ್‌, ಹನುಮಂತೇಗೌಡ, ರಾಕ್‌ಲೈನ್‌ ಸುಧಾಕರ್‌ ಮತ್ತಿತರರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. 

“ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಚಿತ್ರದ ಹಾಡುಗಳಿಗೆ ಅರವ್‌ ರಿಶಿಕ್‌ ಸಂಗೀತ ಸಂಯೋಜನೆಯಿದೆ. ಕರಿಯಪ್ಪನ ಕೆಮಿಸ್ಟ್ರಿಯ ದೃಶ್ಯಗಳನ್ನು ಶಿವಸೀನ ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಸುಜಯ್‌ ಕುಮಾರ್‌ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ವೆಂಕಿ ಯುಡಿವಿ ಸಂಕಲನ, ಪುರುಷೋತ್ತಮ್‌ ಕಲಾ ನಿರ್ದೇಶನವಿದೆ. “ಎಂ.ಸಿರಿ ಪೊ›ಡಕ್ಷನ್ಸ್‌’ ಬ್ಯಾನರ್‌ನಲ್ಲಿ ಡಾ.ಮಂಜುನಾಥ್‌ ಡಿ. ಎಸ್‌ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಕುಮಾರ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. 

ಇನ್ನು ಬಿಡುಗಡೆಯಾಗಿರುವ “ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದ ಟ್ರೇಲರ್‌ನಲ್ಲಿರುವ ಕ್ಯಾಚಿ ಡೈಲಾಗ್‌ಗಳು, ಕಚಗುಳಿ ಇಡುವ ಕಾಮಿಡಿ ದೃಶ್ಯಗಳ ಝಲಕ್‌ ಸಿನಿಪ್ರಿಯರನ್ನು ಸೆಳೆಯುತ್ತಿದೆ. ನವೀನ್‌ ಸಜ್ಜು ಹಾಡಿರುವ “ಊರ್ವಶಿ ಅವಳು.., ನನ್ನ ಬೇವರ್ಸಿ ಮಾಡಿ ಬಿಟ್ಲು..’ ಎಂಬ ಹಾಡು ಸೋಷಿಯಲ್‌ ಮೀಡಿಯಾಗಳಲ್ಲಿ ಸಾಕಷ್ಟು ರೆಸ್ಪಾನ್ಸ್‌ ಪಡೆದುಕೊಳ್ಳುತ್ತಿದೆ. ಒಟ್ಟಾರೆ ತನ್ನ ಟೈಟಲ…, ಟ್ರೇಲರ್‌ ಮತ್ತು ಆಡಿಯೋ ಮೂಲಕ ಸ್ಯಾಂಡಲ್‌ವುಡ್‌ನ‌ಲ್ಲಿ ಒಂದಷ್ಟು ನಿರೀಕ್ಷೆ ಮೂಡಿಸಿರುವ ಕರಿಯಪ್ಪನ ಕೆಮಿಸ್ಟ್ರಿ ತೆರೆಮೇಲೆ ಎಷ್ಟರ ಮಟ್ಟಿಗೆ ವಕೌìಟ್‌ ಆಗಲಿದೆ ಅನ್ನೋದು “ಕೆಮಿಸ್ಟ್ರಿ ಆಫ್ ಕರಿಯಪ್ಪ’ ರಿಲೀಸ್‌ ಆದ ಮೇಲಷ್ಟೇ ಗೊತ್ತಾಗಲಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next