Advertisement

ಕರ್ನಾಟಕ ವೈಭವ ಸಂಸ್ಥೆ:ಎಸ್‌.ನಿಜಲಿಂಗಪ್ಪನವರ ಪುಣ್ಯತಿಥಿ ಆಚರಣೆ

12:40 PM Aug 16, 2017 | Team Udayavani |

ಅಂಬರ್‌ನಾಥ್‌: ಕರ್ನಾಟಕದ  ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ  ಪಾತ್ರರಾದ ದಿ| ಎಸ್‌. ನಿಜಲಿಂಗಪ್ಪ ಅವರೋರ್ವ ಧೀಮಂತ ರಾಜಕಾರಣಿಯಾಗಿ ಕರ್ನಾಟಕದ ಅಭಿವೃದ್ಧಿಯ ಹರಿಕಾರರಾಗಿದ್ದರು. ಇಂತಹ ಧೀಮಂತ ವ್ಯಕ್ತಿಗಳ ಆದರ್ಶಗಳನ್ನು ದಾರಿ ದೀಪವನ್ನಾಗಿಟ್ಟುಕೊಂಡು ವಿದ್ಯಾರ್ಥಿಗಳು ಮುನ್ನಡೆದು ಆದರ್ಶ ಪ್ರಜೆಗಳಾಗಿ ಬಾಳಬೇಕು  ಎಂದು ಉದ್ಯಮಿ, ಕರ್ನಾಟಕ ವೈಭವ ಸಂಸ್ಥೆಯ ಅಧ್ಯಕ್ಷ ಆರ್‌. ಬಿ. ಹೆಬ್ಬಳ್ಳಿ  ಹೇಳಿದರು.

Advertisement

ಅಂಬರ್‌ನಾಥ್‌ ಸ್ಥಳೀಯ ಕರ್ನಾಟಕ ವೈಭವ ಸಂಸ್ಥೆ ಸಂಚಾಲಿತ ಎಸ್‌. ನಿಜಲಿಂಗಪ್ಪ ಕನ್ನಡ ಮಾಧ್ಯಮಿಕ ಶಾಲೆಯಲ್ಲಿ ಆ. 8ರಂದು ನಡೆದ ಕರ್ನಾಟಕ ಮಾಜಿ ಮುಖ್ಯಮಂತ್ರಿ ಎಸ್‌. ನಿಜಲಿಂಗಪ್ಪನವರ ಪುಣ್ಯತಿಥಿ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೀನ ದಲಿತರ ಬಗ್ಗೆ ಆಪಾರ ಕಳಕಳಿಯನ್ನು ಹೊಂದಿದ್ದ ನಿಜಲಿಂಗಪ್ಪ ಅವರು ದೀನ-ದಲಿತರು, ದಲಿತರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದರು. ಅಂತಹ ಮೇರು ವ್ಯಕ್ತಿತ್ವದ ವ್ಯಕ್ತಿಯ ಹೆಸರನ್ನು ನಮ್ಮ ಈ ಶಾಲೆಗೆ ನೀಡಿರುವುದು ಹೆಮ್ಮೆಯ ವಿಷಯವಾಗಿದೆ. ಈ ಶಾಲೆಯಲ್ಲಿ ವಿದ್ಯಾರ್ಜನೆಗೈದ ವಿದ್ಯಾರ್ಥಿಗಳು ತಾವು ಕಲಿತ ಶಾಲೆ ಹಾಗೂ ರಾಷ್ಟ್ರದ ಹೆಸರನ್ನು ಮುಂಚೂಣಿಯಲ್ಲಿ ತರಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು. ಎಸ್‌. ನಿಜ ಲಿಂಗಪ್ಪನವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. 

ಸಂಸ್ಥೆಯ ಕಾರ್ಯದರ್ಶಿ ಬಸವಂತ ಪೂಜಾರಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ವಿಜಯಕುಮಾರ್‌ ಖಾದಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಸಿದ್ಧಿ-ಸಾಧನೆಗಳನ್ನು ವಿವರಿಸಿದರು. ಅನಿತಾ ರಾಜೋಳ್ಳಿ ಹಾಗೂ ಎಸ್‌. ಬಿ. ಶಿಂಧೆ ಪ್ರಾರ್ಥನೆಗೈದರು. ಎ. ಕೆ. ಹೊನ್ನಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಎ. ಡಿ. ಹೊರ್ತಿಕರ ವಂದಿಸಿದರು. ಎಸ್‌. ಬಿ. ಮಡಿವಾಳ, ಎಸ್‌. ಆರ್‌. ಯಾಗಂಟಿ ಸಹಕರಿಸಿದರು. 

ಶಾಲಾ ವಿದ್ಯಾರ್ಥಿಗಳು, ಸಂಸ್ಥೆಯ ಸದಸ್ಯ ಬಾಂಧವರು, ಶಿಕ್ಷಕ ವೃಂದದವರು, ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next