Advertisement

ಕರ್ನಾಟಕ ಮಹಾವಿದ್ಯಾಲಯ ಶತಮಾನೋತ್ಸವಕ್ಕೆ ನಾಳೆ ಚಾಲನೆ

01:08 PM Nov 24, 2017 | |

ಧಾರವಾಡ: ಕವಿವಿಯ ಕರ್ನಾಟಕ ಮಹಾವಿದ್ಯಾಲಯದ ಶತಮಾನೋತ್ಸವ ಉದ್ಘಾಟನಾ ಸಮಾರಂಭವನ್ನು ನ. 25ರಂದು ಬೆಳಗ್ಗೆ 11 ಗಂಟೆಗೆ ಕರ್ನಾಟಕ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕವಿವಿ ಕುಲಪತಿ ಪ್ರೊ| ಪ್ರಮೋದ ಗಾಯಿ ಸುದ್ದಿಗೋಷ್ಠಿಯಲ್ಲಿ ಹೇಳಿದರು. 

Advertisement

ಕರ್ನಾಟಕ ಮಹಾವಿದ್ಯಾಲಯ ಸ್ಥಾಪನೆಗೊಂಡು ನೂರು ವರ್ಷಗಳು ಗತಿಸಿದೆ. ಈ ಹಿನ್ನೆಲೆಯಲ್ಲಿ ಶತಮಾನೋತ್ಸವ ಆಚರಿಸಲು ನಿರ್ಧರಿಸಲಾಗಿದ್ದು, ನ. 25ಕ್ಕೆ ಚಾಲನೆ ದೊರೆಯಲಿದೆ. ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಮೋಹನ ಶಾಂತನಗೌಡರ ಸಮಾರಂಭ ಉದ್ಘಾಟಿಸಲಿದ್ದಾರೆ.

ರಾಜ್ಯದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಡಾ| ಎ.ಎಸ್‌. ಕಿರಣಕುಮಾರ, ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ, ಸಚಿವರಾದ ಆರ್‌.ವಿ. ದೇಶಪಾಂಡೆ, ಎಚ್‌.ಕೆ. ಪಾಟೀಲ, ಸಂತೋಷ ಲಾಡ್‌ ಆಗಮಿಸಲಿದ್ದಾರೆ ಎಂದರು. 

ಕೆಸಿಡಿ ಶತಮಾನೋತ್ಸವವನ್ನು ವರ್ಷಪೂರ್ತಿ ಆಚರಿಸಲು ನಿರ್ಧರಿಸಿ, ವಿವಿಧ ಸಮಿತಿ ರಚಿಸಲಾಗಿದೆ. ಪತ್ರಕರ್ತರ ತರಬೇತಿ, ಚಲನಚಿತ್ರಗಳ ಪ್ರದರ್ಶನ, ಅಂತರ್‌ ಮಹಾವಿದ್ಯಾಲಯಗಳ ಸಾಂಸ್ಕೃತಿಕ ಮತ್ತು ಕ್ರೀಡಾ ಮಹೋತ್ಸವ, ಪುಸ್ತಕ ಸಮ್ಮೇಳನ, ತಿಂಗಳ ಅತಿಥಿಗಳಿಗಾಗಿ ನೆನಪಿನ ಬುತ್ತಿ ಕಾರ್ಯಕ್ರಮ, ನೂರು ಪುಸ್ತಕಗಳ ಪ್ರಕಟಣೆ, ನಿನಾದ ವಿಶೇಷ ಸ್ಮರಣ ಸಂಚಿಕೆ ಬಿಡುಗಡೆ

ಹಾಗೂ ವರ್ಷದ ಕೊನೆಗೆ ಅದ್ಧೂರಿ ಸಮಾರೋಪ ಸಮಾರಂಭ ಸಂಘಟಿಸಲಾಗುವುದು ಎಂದು ಹೇಳಿದರು. ಶತಮಾನೋತ್ಸವ ಸವಿನೆನಪಿಗಾಗಿ ಸ್ಮಾರಕ ಸಮುತ್ಛಯ ಕಟ್ಟಡ ನಿರ್ಮಾಣ, ಶ್ರೀರಂಗ ಬಯಲು ರಂಗಮಂದಿರ ಸೇರಿದಂತೆ ಕೆಸಿಡಿ ಕಾಲೇಜಿನ ಎಲ್ಲ ಕಟ್ಟಡಗಳ ಪುನರುಜ್ಜೀವನ ಕಾಮಗಾರಿ ಮತ್ತು ಕಾಲೇಜು ಕ್ಯಾಂಪಸ್‌ ಸುಂದರಗೊಳಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದರು. 

Advertisement

ಸಿಂಡಿಕೇಟ್‌ ಸದಸ್ಯ ದಿಲೀಪ ಗೊತ್ರಾಳೆ, ಕುಲಸಚಿವರಾದ ಡಾ| ಮಲ್ಲಿಕಾರ್ಜುನ ಪಾಟೀಲ, ಡಾ| ಎನ್‌.ವೈ. ಮಟ್ಟಿಹಾಳ, ಪ್ರಾಚಾರ್ಯರಾದ ರಾಜೇಶ್ವರಿ ಮಹೇಶ್ವರಯ್ಯ, ಪ್ರೊ| ಸಿ.ಎಫ್‌. ಮೂಲಿಮನಿ, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಡಾ| ಗಿರಡ್ಡಿ ಗೋವಿಂದರಾಜ ಇತರರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next