Advertisement

Shirva: ಬಂಟಕಲ್‌ ತಾಂತ್ರಿಕ ಕಾಲೇಜು ಪದವಿ ಪ್ರದಾನ ಕಾರ್ಯಕ್ರಮ

05:55 PM Sep 22, 2024 | Team Udayavani |

ಶಿರ್ವ:  ಜೀವನದಲ್ಲಿ ಉತ್ತಮ ಯೋಜನೆ ಇದ್ದರೆ ಸಾಲದು ಅದರ ಜತೆಗೆ ಯೋಜನೆಯನ್ನು ಕಾರ್ಯಗತಗೊಳಿಸಲು ಬೇಕಾದ ಕಾರ್ಯಕ್ಷಮತೆ ಹೊಂದಿರಬೇಕು. ಪದವೀಧರರು ತಮ್ಮ ಜೀವನದಲ್ಲಿ ಭಕ್ತಿ, ಪ್ರಾಮಾಣಿಕತೆ, ಹೊಂದಾಣಿಕೆ, ಸ್ಥಿತಿಸ್ಥಾಪಕತ್ವ ಮತ್ತು ಪಾಂಡಿತ್ಯ ಮುಂತಾದ ತತ್ವಗಳೊಂದಿಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಿ ಎಂದು ರೋಬೋಸಾಫ್ಟ್‌ ಟೆಕ್ನಾಲಜೀಸ್‌ನ ಗ್ಲೋಬಲ್‌ ಮಾರ್ಕೆಟಿಂಗ್‌ ಮತ್ತು ಕಮ್ಯುನಿಕೇಷನ್ಸ್‌ ನ ಉಪಾಧ್ಯಕ್ಷ ಲಕ್ಷ್ಮೀ ಪತಿ ಭಟ್‌ ಹೇಳಿದರು.

Advertisement

ಅವರು ಸೆ. 22 ರಂದು ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ 11ನೇ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಪದವಿ ಪ್ರದಾನ ಮಾಡಿ ಮಾತನಾಡಿದರು.

ವಿಶ್ವೇಶ್ವರ ತಾಂತ್ರಿಕ ವಿ.ವಿ.ಯಿಂದ ಚಿನ್ನದ ಪದಕ ಪಡೆದ ರಕ್ಷಾ ಮತ್ತು ವಿ.ವಿ.ಯ ಬಿ.ಇ ಹಾನರ್ ಪಡೆದ ಶೇಖ್‌ ಮೊಹಮ್ಮದ್‌ ಶುಹೂದ್‌ ಅವರನ್ನು ಸಮ್ಮಾನಿಸಲಾಯಿತು. ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಜಿ. ಅಕ್ಷತಾ, ಗಣಕಯಂತ್ರ ವಿಭಾಗದ ಶೇಖ್‌ ಮೊಹಮ್ಮದ್‌ ಶುಹೂದ್‌, ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ನಿಖಿತಾ ಶೆಟ್ಟಿ ಮತ್ತು ಮೆಕ್ಯಾನಿಕಲ್‌ ವಿಭಾಗದ ಅಂಕಿತ್‌ ಸುವರ್ಣ ಅವರ ಶೈಕ್ಷಣಿಕ ಸಾಧನೆಗಾಗಿ ಮಂಗಳೂರಿನ ಎಸ್‌. ಎಲ್‌. ಶೇಟ್‌ ಜ್ಯುವೆಲರ್‌ ಪ್ರಾಯೋಜಿತ ಚಿನ್ನದ ಪದಕಗಳನ್ನು ನೀಡಿ ಗೌರವಿಸಲಾಯಿತು. ಅಕಾಡೆಮಿಕ್‌ ಡೀನ್‌ ಡಾ| ನಾಗರಾಜ ಭಟ್‌ಚಿನ್ನದ ಪದಕ ಗಳಿಸಿದವರ ಹೆಸರು ಮತ್ತು ವಿಭಾಗ ಮುಖ್ಯಸ್ಥರು ಪದವೀಧರರ ಪಟ್ಟಿ ವಾಚಿಸಿದರು.

Advertisement

ಕಾಲೇಜಿನ ಸಂಶೋಧನಾ ಕೇಂದ್ರದಿಂದ ಡಾಕ್ಟರೇಟ್‌ ಪದವಿ ಪಡೆದ ಪ್ರಾಧ್ಯಾಪಕರನ್ನು ಸಮ್ಮಾನಿಸಲಾಯಿತು. ಅಂತಿಮ ವರ್ಷದ ಪ್ರತಿ ವಿಭಾಗದಲ್ಲಿ ಅತ್ಯಧಿಕ ಅಂಕ ಪಡೆದ ನಾಲ್ಕು ವಿದ್ಯಾರ್ಥಿಗಳಿಗೆ ನಂದನ್‌ ಕುಮಾರ್‌ ಇನ್ನಂಜೆ ಪ್ರಾಯೋಜಿತ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.

ಬೆಂಗಳೂರು ಸರಕಾರಿ ಪ್ರಥಮ ದರ್ಜೆಕಾಲೇಜಿನ ಇಂಗ್ಲೀಷ್‌ ಪ್ರಾಧ್ಯಾಪಕ ಡಾ|ಎಲ್‌.ಎನ್‌. ಶೇಷಗಿರಿ ಮಾತನಾಡಿ ವ್ಯಕ್ತಿಯ ಹುಟ್ಟಿನಿಂದ ಪದವಿಯವರೆಗಿನ ಕಲಿಕೆಯು, ಜೀವನದ ಉದ್ದೇಶವನ್ನು ತಿಳಿದುಕೊಳ್ಳಲು ಮತ್ತು ಸಾಧಿಸಲು ಸಾಧ್ಯವಾಗುತ್ತದೆ. ಪದವೀಧರರು ಸಮಾಜದ ಮಾನವೀಯ ಮೌಲ್ಯಗಳ ಅಗತ್ಯತೆಯನ್ನು ಅರಿತು ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಸೋದೆ ವಾದಿರಾಜ ಮಠದ ಶ್ರೀಶ್ವವಲ್ಲಭತೀರ್ಥ ಶ್ರೀಪಾದರು ಆಶೀರ್ವಚನ ನೀಡಿ ಜೀವನದಲ್ಲಿ ಏನಾದರೂ ಸಾಧಿಸುವ ಗುರಿಯೊಂದಿಗೆ ಆಸಕ್ತಿಯ ವಿಷಯಗಳಲ್ಲಿ ಏಕಾಗ್ರತೆಯಿರಿಸಿಕೊಂಡು ಮಾಡುವ ಕೆಲಸದಲ್ಲಿ ನಂಬಿಕೆ, ಶ್ರದ್ಧೆ , ವಿಶ್ವಾಸವಿರಿಸಿಕೊಂಡಲ್ಲಿ ಬದುಕು ಉಜ್ವಲವಾಗುತ್ತದೆ ಎಂದು ಹೇಳಿದರು.

ಸಂಸ್ಥೆಯ ಕಾರ್ಯದರ್ಶಿ ರತ್ನಕುಮಾರ್‌ ಶುಭ ಹಾರೈಸಿದರು. ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಉಪಾಧ್ಯಕ್ಷ ಶ್ರೀನಿವಾಸ ತಂತ್ರಿ, ಡೀನ್‌ ಡಾ| ಸುದರ್ಶನ್‌ ರಾವ್‌ ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು ವೇದಿಕೆಯಲ್ಲಿದ್ದರು.

ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ|ಲೊಲಿಟಾ ಪ್ರಿಯಾ ಕ್ಯಾಸ್ತಲಿನೊ ಮತ್ತು ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥೆ   ಡಾ| ಸುಬ್ಬು ಲಕ್ಷ್ಮೀ  ಎನ್‌. ಕಾರಂತ್‌ ಅತಿಥಿ ಪರಿಚಯ ಮಾಡಿದರು. ಉಪಪ್ರಾಂಶುಪಾಲ ಡಾ|ಗಣೇಶ್‌ ಐತಾಳ್‌ ಪದವೀಧರರಿಗೆ ಪ್ರಮಾಣ ವಚನ ಬೋಧಿಸಿದರು.

ಪ್ರಾಂಶುಪಾಲ ಡಾ| ತಿರುಮಲೇಶ್ವರ ಭಟ್‌ ಸ್ವಾಗತಿಸಿದರು. ಅಕ್ಷತಾ ರಾವ್‌ ಮತ್ತು ಅನಂತ್‌ ಮೋಹನ್‌ ಮಲ್ಯ ಕಾರ್ಯಕ್ರಮ ನಿರೂಪಿಸಿ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ|ರವೀಂದ್ರ ಹೆಚ್‌. ಜೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next