Advertisement

Migrants ಪಡಿತರ ಚೀಟಿ: ನಮ್ಮ ತಾಳ್ಮೆ ಕಟ್ಟೆ ಒಡೆದಿದೆ ಎಂದ ಸುಪ್ರೀಂ

01:36 AM Oct 06, 2024 | Team Udayavani |

ಹೊಸದಿಲ್ಲಿ: ವಲಸೆ ಕಾರ್ಮಿಕರಿಗೆ ಪಡಿತರ ಚೀಟಿ ಒದಗಿಸುವಲ್ಲಿ ರಾಜ್ಯ ಸರಕಾರ‌ಗಳು, ಕೇಂದ್ರಾಡಳಿತ ಪ್ರದೇಶಗಳು ಮಾಡುತ್ತಿರುವ ವಿಳಂಬ ನೋಡಿ ನಮ್ಮ ತಾಳ್ಮೆಯೇ ಕೆಟ್ಟುಹೋಗಿದೆ ಎಂದು ಸುಪ್ರೀಂಕೋರ್ಟ್‌ ಬೇಸರ ವ್ಯಕ್ತಪಡಿಸಿದೆ. ಅಲ್ಲದೇ ನ್ಯಾ| ಸುಧಾಂಶು ಧುಲಿಯಾ ನೇತೃತ್ವದ ಪೀಠವು ಪಡಿತರ ಚೀಟಿ ಒದಗಿಸಲು ಕೊನೇ ಅವಕಾಶವಾಗಿ ನ.19ರ ಗಡುವು ನೀಡಿದ್ದು, ಅಷ್ಟರೊಳಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರಕಾರ‌ಗಳಿಗೆ ನಿರ್ದೇಶಿಸಿದೆ.

Advertisement

2020ರ ಕೊರೊನಾ ಸಂದರ್ಭದಲ್ಲಿ ವಲಸೆ ಕಾರ್ಮಿಕ ರು ಅನುಭವಿಸಿದ ಸಂಕಷ್ಟಗಳನ್ನು ಪರಿಗಣಿಸಿ ಸುಪ್ರೀಂ ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಂಡಿತ್ತು. ಅವರಿಗೆ ಪಡಿತರ ಚೀಟಿ ಮತ್ತಿತರ ಅಭಿವೃದ್ಧಿ ಸೌಲಭ್ಯ ಒದಗಿಸಿ ಕೊಡುವಂತೆಯೂ ಸರಕಾರ‌ಗಳಿಗೆ ಸೂಚಿಸಿ, ಈ ಬಗ್ಗೆ ಅಫಿದವಿತ್‌ ಸಲ್ಲಿಸುವಂತೆ ಕೇಂದ್ರಕ್ಕೆ ನಿರ್ದೇಶಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next