Advertisement

Mangaluru: ರಾಷ್ಟ್ರೀಯ ಸ್ಟಾಂಡಪ್‌ ಪ್ಯಾಡ್ಲಿಂಗ್‌: ರಾಜ್ಯಕ್ಕೆ 7 ಪದಕ

01:25 AM Oct 06, 2024 | Team Udayavani |

ಮಂಗಳೂರು: ರಾಮೇಶ್ವರಂ ಬೀಚ್‌ನಲ್ಲಿ ಜರಗಿದ ರಾಷ್ಟ್ರೀಯ ಸ್ಟಾಂಡಪ್‌ ಪ್ಯಾಡ್ಲಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ 7 ಪದಕಗಳನ್ನು ಪಡೆದುಕೊಂಡಿದೆ.
16ರ ಕೆಳಹರೆಯದವರ ವಿಭಾಗದಲ್ಲಿ ಆಕಾಶ್‌ ಪೂಜಾರ್‌ ಮೊದಲ ಸ್ಥಾನ ಹಾಗೂ ಅವರ ತಮ್ಮ ಪ್ರವೀಣ್‌ ಪೂಜಾರ್‌ 3ನೇ ಸ್ಥಾನ ಪಡೆದುಕೊಂಡರು. ಇವರಿಬ್ಬರೂ ಮೂಲ್ಕಿಯ ಸರ್ಫಿಂಗ್‌ ಸ್ವಾಮಿ ಪ್ರತಿಷ್ಠಾನದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

Advertisement

ಆಕಾಶ್‌ ಪೂಜಾರ್‌ ಪುರುಷರ 12 ಕಿ.ಮೀ. ರೇಸ್‌ ವಿಭಾಗದಲ್ಲೂ ಮೂರನೇ ಸ್ಥಾನ ಪಡೆದುಕೊಂಡರು. ಇದೇ ವಿಭಾಗದ 200 ಮೀ. ಸ್ಪ್ರಿಂಟ್‌ ರೇಸ್‌ನಲ್ಲಿ ಪ್ರವೀಣ್‌ ದ್ವಿತೀಯ ಸ್ಥಾನ, ಆಕಾಶ್‌ ಮೂರನೇ ಸ್ಥಾನ ಪಡೆದರು.

ಮಹಿಳಾ ವಿಭಾಗದಲ್ಲಿ ಕಡಲ್‌ ಸರ್ಫ್‌ನ ತನ್ವಿ ಜಗದೀಶ್‌ ಅವರು ಲಾಂಗ್‌ ಡಿಸ್ಟೆನ್ಸ್‌, ಟೆಕ್ನಿಕಲ್‌ ರೇಸ್‌ ಹಾಗೂ ಸ್ಪ್ರಿಂಟ್‌ ರೇಸ್‌ನಲ್ಲಿ ಕ್ರಮವಾಗಿ ಎರಡು ಚಿನ್ನ ಹಾಗೂ ಒಂದು ರಜತ ಪದಕ ಗಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next