Advertisement
ನ. 1 ರಂದು ಕರ್ನಾಟಕ ಸಮಾಜ ಸೂರತ್ ವತಿಯಿಂದ ಸೂರತ್ ನಾನ್‌ಪುರದ ಜೀವನ ಭಾರತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯೋತ್ಸವ ಸಂಭ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಿಮ್ಮೆಲ್ಲರ ಕನ್ನಡಾಭಿಮಾನಕ್ಕೆ ಋಣಿಯಾಗಿದ್ದೇನೆ. ಭಾಷೆಯ ಬಗ್ಗೆ ಗೌರವ, ಅಭಿಮಾನವನ್ನು ಮಕ್ಕಳು ಹೊಂದುವಂತೆ ಮಾಡಲು ಇಂತಹ ಕಾರ್ಯಕ್ರಮಗಳು ಪ್ರೇರಣೆಯಾಗಿವೆ ಎಂದರು.
Related Articles
Advertisement
ವೇದಿಕೆಯಲ್ಲಿ ಸಮಾಜ ಸೇವಕರಾದ ಅಜಿತ್ ಎಸ್. ಶೆಟ್ಟಿ ಅಕ್ಲೇಶ್ವರ, ವಸಂತ ಶೆಟ್ಟಿ, ಪ್ರಭಾಕರ್ ಶೆಟ್ಟಿ, ಗೋಪಾಲ ಪೂಜಾರಿ, ಇಂದುದಾಸ್ ಶೆಟ್ಟಿ, ವಾಸು ಪಿ. ಪೂಜಾರಿ ಬರೋಡಾ, ಶಿವರಾಮ ಶೆಟ್ಟಿ, ಸಂಘದ ಗೌರವಾಧ್ಯಕ್ಷ ರಾಮಚಂದ್ರ ವಿ. ಶೆಟ್ಟಿ, ಉಪಾಧ್ಯಕ್ಷರುಗಳಾದ ದಿನೇಶ್ ಶೆಟ್ಟಿ, ರಮೇಶ್ ಭಂಡಾರಿ ಬರ್ಡೊಲಿ, ಉಮೇಶ್ ಸಫಲಿಗ, ಅಜಿತ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ವನಿತಾ ಜೆ. ಶೆಟ್ಟಿ, ಜೊತೆ ಕಾರ್ಯದರ್ಶಿ ಶಾಂತಿ ಡಿ. ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಸಂತೋಷ್ ವಿ. ಶೆಟ್ಟಿ, ಆರ್ಥಿಕ ಸಮಿತಿಯ ಕಾರ್ಯಾಧ್ಯಕ್ಷೆ ಸುನೀತಾ ಆರ್. ಶೆಟ್ಟಿ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ದಾಂಪತ್ಯ ಜೀವನದ ಸುವರ್ಣ ಮಹೋತ್ಸವ ಆಚರಿಸಿದ ಹಿರಿಯರಾದ ರಾಮಣ್ಣ ಶೆಟ್ಟಿ ಮತ್ತು ಯಶೋಧಾ ಆರ್. ಶೆಟ್ಟಿ ದಂಪತಿಯನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು. ದಾನಿಗಳು ಹಾಗೂ ಪ್ರಾಯೋಜಕರನ್ನು ಗೌರವಿಸಲಾಯಿತು. ಪ್ರತಿಭಾವಂತ ಮಕ್ಕಳನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಅಭಿನಂದಿಸಲಾಯಿತು. ಸಂಸ್ಥೆಯ ವಾರ್ಷಿಕ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಿ ಗಣ್ಯರು ಶುಭಹಾರೈಸಿದರು. ನಾಡಗೀತೆಯೊಂದಿಗೆ ರಾಜ್ಯೋತ್ಸವ ಸಂಭ್ರಮ ಪ್ರಾರಂಭಗೊಂಡಿತು.
ಅಮಿತಾ ಉಮೇಶ್ ಪ್ರಾರ್ಥನೆಗೈದರು. ಕೋಶಾಧಿಕಾರಿ ರಾಧಾಕೃಷ್ಣ ಮೂಲ್ಯ ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು. ರಂಜನಿ ಪ್ರವೀಣ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸೂರತ್‌ನ ಕಲಾವಿದರಿಂದ, ಮಕ್ಕಳಿಂದ ನೃತ್ಯ ವೈವಿಧ್ಯ ನಡೆಯಿತು. ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರಿಂದ ಪಟ್ಲ ಸತೀಶ್ ಶೆಟ್ಟಿ ಅವರ ಭಾಗವತಿಕೆಯಲ್ಲಿ “ಮಾನಿಷಾದ’ ಯಕ್ಷಗಾನ ಪ್ರದರ್ಶನಗೊಂಡಿತು. ತುಳು-ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಸೌಮ್ಯಾ ಪಿ. ಪೂಜಾರಿ, ಕಾರ್ಯದರ್ಶಿ ಕಸ್ತೂರಿ ಎಲ್. ಶೆಟ್ಟಿ, ಜೊತೆ ಕಾರ್ಯದರ್ಶಿ ಉಮಾ ಆರ್. ಮೂಲ್ಯ, ಬರೋಡದ ಹರೀಶ್ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಕೃಷ್ಣ ಶೆಟ್ಟಿ, ಸೂರತ್‌ನ ದಿನೇಶ್ ಶೆಟ್ಟಿ ಹಾವಂಜೆ, ಶೋಭಾ ಪ್ರಕಾಶ್ ಶೆಟ್ಟಿ, ರಮೇಶ್ ಭಂಡಾರಿ, ಪುಷ್ಪಾ ವಿ. ಶೆಟ್ಟಿ, ರತ್ನಾಕರ ಕೋಟ್ಯಾನ್, ನರೇಶ್ ಕುಲಾಲ್, ಮೋಹನ್ ಬಂಜನ್, ಶಾರದಾ ದೇವಾಡಿಗ, ಜಗನ್ನಾಥ್ ರೈ ಸೇರಿದಂತೆ ಸದಸ್ಯರು, ಕರ್ನಾಟಕ, ಗುಜರಾತ್ ಮತ್ತು ಮಹಾರಾಷ್ಟ್ರ ವಿವಿಧೆಡೆಗಳಿಂದ ಆಗಮಿಸಿದ ನೂರಾರು ಕನ್ನಡಾಭಿಮಾನಿಗಳು ಪಾಲ್ಗೊಂಡಿದ್ದರು.
ಹೊರನಾಡ ಕನ್ನಡಿಗರು ಅಪ್ಪಟ ಕನ್ನಡ ಪ್ರೇಮಿಗಳಾಗಿದ್ದಾರೆ. ಇವರಲ್ಲಿನ ಭಾಷಾಪ್ರೇಮ, ಸಾಹಿತ್ಯ ಸಂಸ್ಕೃತಿಯ ನೈಜ ಸೇವೆ ಒಳನಾಡ ಕನ್ನಡಿಗರಿಗೆ ಮಾದರಿಯಾಗಿದೆ. ಭವಿಷ್ಯತ್ತಿನಲ್ಲೂ ಕನ್ನಡಾಂಭೆಯ ಅನುಪಮ ಸೇವೆಯಲ್ಲಿ ತೊಡಗಿಸಿ ನಮ್ಮತನ ಉಳಿಸಿಕೊಳ್ಳೋಣ– ಶಶಿಧರ್ ಶೆಟ್ಟಿ ಬರೋಡ
(ಅಧ್ಯಕ್ಷರು, ತುಳು ಸಂಘ ಬರೋಡ). ಹೊರನಾಡಿನಲ್ಲಿ ಭವನೇಶ್ವರಿಯ ಸೇವೆಯನ್ನು ಕರುನಾಡ ದೀಪ ಹಚ್ಚಿ ಬಾಂಧವ್ಯತೆ ಮೈಗೂಡಿಸಿಕೊಂಡು ನಡೆಸುತ್ತಿದ್ದೇವೆ. ಕನ್ನಡಕ್ಕಾಗಿ ಸಂಘಟನೆಯ ಅವಶ್ಯಕತೆಯಿದೆ. ಕನ್ನಡ ಉಳಿದರೆ ನಮ್ಮ ಸಂಸ್ಕೃತಿ ತನ್ನಿಂದ ತಾನೇ ಬೆಳೆಯುತ್ತದೆ. ಮಕ್ಕಳಿಗೆ ನಾಡು-ನುಡಿ, ಸಂಸ್ಕೃತಿ, ಸಂಸ್ಕಾರಗಳ ಅರಿವು ಮೂಡಿಸುವ ಕಾರ್ಯದಲ್ಲಿ ಸಂಸ್ಥೆಯು ತೊಡಗಿದೆ. ನಮ್ಮ ನಾಡು-ನುಡಿ ಸೇವೆಗೆ ಎಲ್ಲರ ಪ್ರೋತ್ಸಾಹ, ಸಹಕಾರ ಸದಾಯಿರಲಿ
– ಮನೋಜ್ ಸಿ. ಪೂಜಾರಿ
(ಅಧ್ಯಕ್ಷರು, ಕರ್ನಾಟಕ ಸಮಾಜ ಸೂರತ್). ಚಿತ್ರ-ವರದಿ : ರೋನ್ಸ್ ಬಂಟ್ವಾಳ್