Advertisement

ಸಂಗೀತ ಲೋಕಕ್ಕೆ ಕರ್ನಾಟಕ ಸಂಗೀತವೇ ತಾಯಿ ಇದ್ದಂತೆ 

12:05 PM May 28, 2017 | Team Udayavani |

ಬೆಂಗಳೂರು: ಇಡೀ ಸಂಗೀತ ಲೋಕಕ್ಕೆ ಕರ್ನಾಟಕ ಸಂಗೀತ ತಾಯಿ ಇದ್ದಂತೆ ಎಂದು ಖ್ಯಾತ ಹಿನ್ನೆಲೆ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಹೇಳಿದ್ದಾರೆ. ಶನಿವಾರ ಹಂಸಲೇಖ ಮ್ಯೂಸಿಕ್‌ ಟ್ರಸ್ಟ್‌ “ಐದನಿ’ ಕುರಿತು ಮಾಹಿತಿ ನೀಡಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾರತೀಯ ಸಂಗೀತಕ್ಕೆ ಕರ್ನಾಟಕ ಸಂಗೀತ ಮಾತೃಭೂಮಿ ಇದ್ದಂತೆ. ಅದನ್ನು ಇನ್ನಷ್ಟು ಮೇಲೆ ಕೊಂಡೊಯ್ಯುವ ಕೆಲಸ ಆಗಬೇಕಿದ್ದು, ಆ ನಿಟ್ಟಿನಲ್ಲಿ ಹಂಸಲೇಖ ಶ್ರಮಿಸುತ್ತಿದ್ದಾರೆ ಎಂದರು.

Advertisement

“ಹಂಸಲೇಖ ಅವರು ಒಳ್ಳೆಯ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆಸಿದ್ದಾರೆ. ನಮಿºಬ್ಬರ ಸಮ್ಮಿಲನದಲ್ಲಿ ಇದುವರೆಗೆ ಒಳ್ಳೆಯ ಹಾಡುಗಳೇ ಮೂಡಿ ಬಂದಿವೆ. ಸಂಗೀತ ಕ್ಷೇತ್ರದಲ್ಲಿ ಹಂಸಲೇಖ ಅವರಿಗೇ ಆದ ಒಂದು ಸ್ಥಾನಮಾನವಿದೆ. ದೇಸಿ ಸೊಗಡಿನ ಜಾನಪದ ಕಾರ್ಯಕ್ರಮ ಕೊಡುವ ಮೂಲಕ ನಮ್ಮ ಸಂಗೀತ ಮತ್ತು ಸಂಸ್ಕೃತಿಯ ಉಳಿವಿಗೆ ಹೋರಾಡಿದ್ದಾರೆ ಎಂಬುದು ಹೆಮ್ಮೆಯ ವಿಷಯ ಎಂದರು.

ದೇಸೀ ಸಂಗೀತಕ್ಕೆ ಅಡಿಪಾಯ ಹಾಕಿಕೊಟ್ಟಿರುವುದು ಹಂಸಲೇಖ ಅವರ ಮತ್ತೂಂದು ವಿಶೇಷ. ಎಲ್ಲಾ ಕ್ಷೇತ್ರದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಅವರು ಈಗ “ಐದನಿ’ ಮೂಲಕ ಹೊಸತನ್ನು ಹೇಳಲು ಹೊರಟಿದ್ದಾರೆ. ಐದು ಸ್ವರಗಳ ರಾಗವೇ “ಐದನಿ’. ಇದರ ವೈವಿದ್ಯವನ್ನು ತಿಳಿಸುವ ಪ್ರಯತ್ನಕ್ಕೆ ಹಂಸಲೇಖ ಮುಂದಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

“ಐದನಿ’ ಎಂಬುದು ಜನಪದ ಸಂಗೀತದ ಶಾಸ್ತ್ರೋಕ್ತ ಶಿರೋನಾಮೆ ಇದ್ದಂತೆ. ಮುಂದಿನ ದಿನಗಳಲ್ಲಿ ದೇಸೀ ಶಾಸ್ತ್ರೀಯ ಸಂಗೀತಕ್ಕೆ ಐದನಿಯೇ ಅಡಿಪಾಯ ಆಗಲಿದೆ.  ಇನ್ನು ಹಂಸಲೇಖ ಸಂಗೀತದಲ್ಲಿ ನಾನು ಹಾಡಿರುವ ಅನೇಕ ಹಾಡುಗಳು ಯಶಸ್ವಿಯಾಗಿವೆ ಎಂದು ಹೇಳಿದ ಅವರು, ಹಂಸಲೇಖ ಅವರ ಈ ವಿನೂತನದ “ಐದನಿ’ ಕಾರ್ಯಕ್ರಮ ಯಶಸ್ವಿಯಾಗಲಿ’ ಎಂದು ಹಾರೈಸಿದರು.

“ಐದನಿ’ ಕಾರ್ಯಕ್ರಮ ಕುರಿತು ಮಾತನಾಡಿದ ಹಂಸಲೇಖ, “ಆಗಸ್ಟ್‌ 21ರ ಜಾನಪದ ದಿನದಂದು “ಐದನಿ’ಗೆ ಚಾಲನೆ ಸಿಗಲಿದೆ. ಅಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು “ಐದನಿ 2017′ ಉದ್ಘಾಟಿಸಲಿದ್ದಾರೆ. ಕಲೆಯ ಮೂಲಕ ಅಣ್ವಸ್ತ್ರದ ಬೆದರಿಕೆಯನ್ನು ಹೋಗಲಾಡಿಸುವ ಸಣ್ಣ ಪ್ರಯತ್ನವನ್ನು ಐದನಿ ಮೂಲಕ ಮಾಡುವುದು ಡಲಾಗುವುದು. ನಮ್ಮ ಮ್ಯೂಸಿಕ್‌ ಟ್ರಸ್ಟ್‌ನಿಂದ ಐದನಿ ಮೂಲ ಕಂಡು ಹಿಡಿಯಲು ಕಳೆದ 12 ವರ್ಷಗಳಿಂದಲೂ ಸಂಶೋಧನೆ ನಡೆಸಲಾಗಿದೆ ಎಂದು ವಿವರಿಸಿದರು.

Advertisement

2018, ಆಗಸ್ಟ್‌ 21 ರಿಂದ ಒಂದು ವಾರ “ಜಗತ್‌ ಜನಪದ ಜಾತ್ರೆ’ ನಡೆಸಲು ಉದ್ದೇಶಿಸಲಾಗಿದೆ. ಇದೊಂದು ಅಂತಾರಾಷ್ಟ್ರೀಯ ಮಟ್ಟದ ದೇಸಿ ಹಬ್ಬವಾಗಿ ಆಚರಣೆಯಾಗಲಿದೆ. ಈ ಜಾತ್ರೆಯಲ್ಲಿ ಐದನಿಯ ವಿಶೇಷ ಹಾಗೂ ಟ್ರಸ್ಟ್‌ನ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ವಿವರಿಸಲಾಗುವುದು. ಭಾರತದ 30 ರಾಜ್ಯಗಳ, ವಿಶ್ವದ 15 ರಾಷ್ಟ್ರಗಳ ಜನಪದ ಕಲಾವಿದರು, ತಜ್ಞರು, ಪ್ರತಿನಿಧಿಗಳು ಈ ಜಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದರು. 

ಐದನಿ ಕಾರ್ಯಕ್ರಮ ಮೂಲಕ ಹನ್ನೊಂದು ತಿಂಗಳ 45 ಪರಿಷ್ಕೃತ ಪ್ರಯೋಗ ಪ್ರದರ್ಶನಗಳನ್ನು ನಡೆಸಲಾಗುವುದು. ಹಂಸಲೇಖ ಮ್ಯೂಸಿಕ್‌ ಟ್ರಸ್ಟ್‌ ಮಾಡಿರುವ ಇದುವರೆಗಿನ ಸಾಧನೆ ಕುರಿತು ಆ ಜಗತ್‌ ಜನಪದ ಜಾತ್ರೆಯಲ್ಲಿ ತಿಳಿಸಿಕೊಡಲಾಗುವುದು. ಇದರೊಂದಿಗೆ ಟ್ರಸ್ಟ್‌ ವತಿಯಿಂದ 11 ತಿಂಗಳ ಕಾಲ ನಡೆದ ಪ್ರಯೋಗಗಳನ್ನೂ ಪ್ರದರ್ಶನ ಮಾಡಲಾಗುವುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕರ್ನಾಟಕದ ಜಾನಪದ ಕೋಗಿಲೆ ಪದ್ಮಶ್ರೀ ಸುಕ್ರಿ ಬೊಮ್ಮನಗೌಡ ಅವರನ್ನು ಹಂಸಲೇಖ ಮ್ಯೂಸಿಕ್‌ ಟ್ರಸ್ಟ್‌ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಸುಕ್ರಿ ಬೊಮ್ಮನಗೌಡ ಅವರು, ಹಂಸಲೇಖ ಅವರ ಈ “ಐದನಿ’ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next