Advertisement
ರಾಜ್ಯ ಸರ್ಕಾರದ ಸಾರ್ವಜನಿಕ ಗ್ರಂಥಾಲಯದ ಡಿಜಿಟಲ್ ಗ್ರಂಥಾಲಯ ಕಳೆದ 8 ತಿಂಗಳಲ್ಲಿ ವಿಶ್ವದ 31 ಕೋಟಿ ಜನರಿಂದ ಗೂಗಲ್ ಸರ್ಚ್‌ಗೆ ಒಳಗಾಗಿದೆ. ಜನರ ಡಿಜಿಟಲ್ ಹುಡುಕಾಟದಲ್ಲಿ ವಿಶ್ವದಲ್ಲಿಯೇ ನಂ.1 ಸ್ಥಾನಕ್ಕೇರಿದ ಹೆಗ್ಗಳಿಕೆಗೆ ಪಾತ್ರವಾಗಿದೆ.
Related Articles
Advertisement
ಏನಿದೆ ಇ-ಲೈಬ್ರರಿಯಲ್ಲಿ ?: ರಾಜ್ಯ ಸರಕಾರದ ಡಿಜಿಟಲ್ ಲೈಬ್ರರಿಯಲ್ಲಿ 4.30 ಲಕ್ಷ ವಿವಿಧ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳು ಲಭ್ಯ ಇವೆ. 59900 ವಿಶ್ವದ ದಿನ ಪತ್ರಿಕೆಗಳು ಲಭ್ಯ ವಿದೆ. ಶೈಕ್ಷಣಿಕ ಮತ್ತು ಕಲಿಕೆಗೆ ಅಗತ್ಯವಿರುವ ಎಲ್ಲ ವಿಭಾಗಗಳಿಗೆ ಸಂಬಂಧಿಸಿದ ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ, ತಮಿಳು, ತೆಲುಗು ಭಾಷೆಯಲ್ಲಿ ಪಾಠಗಳನ್ನು ಒದಗಿಸಲಾಗಿದೆ. ರಾಜ್ಯ, ಸಿಬಿಎಸ್‌ಸಿ ಪಠ್ಯಕ್ರಮ ವನ್ನು ವಿದ್ಯಾರ್ಥಿಗಳ ಅನುಕೂಲಕ್ಕೆ ಡಿಜಿಟಲ್ ರೂಪದಲ್ಲಿ ಉಚಿತವಾಗಿ ಒದಗಿಸಲಾಗುತ್ತಿದೆ.ಕಲೆ ಮತ್ತು ಮಾನವಿಕತೆ, ವ್ಯಕ್ತಿತ್ವ, ಕೌಶಲ್ಯ ಮತ್ತು ಸಾಹಿತ್ಯ ಒಳಗೊಂಡಂತೆ ಸುಮಾರು 5 ಸಾವಿರಕ್ಕೂ ಹೆಚ್ಚು ಕನ್ನಡ ವಿಷಯಗಳಿವೆ. ರಾಜ್ಯ ಸರ್ಕಾರ ಹಾಗೂ ಸಿಬಿಎಸ್‌ಸಿ 1 ರಿಂದ 12 ನೇ ತರಗತಿವರೆಗಿನ ಎಲ್ಲ ಪಠ್ಯ ಪುಸ್ತಕಗಳು ಮತ್ತು ವಿಡಿಯೋಗಳು ಲಭ್ಯವಿದೆ. ಕನ್ನಡ ಭಾಷೆಯಲ್ಲಿಯೇ ಸುಮಾರು 600ಕ್ಕೂ ಹೆಚ್ಚು ವಿಡಿಯೋಗಳು ಲಭ್ಯ ಇವೆ. ಈ ಯೋಜನೆಯ ಭಾಗವಾಗಿ ರಾಜ್ಯದ ವಿವಿಧ ಜಿಲ್ಲೆಗಳ 10 ಲಕ್ಷ ಸರ್ಕಾರಿ ಶಾಲೆ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಕಲಿಕಾ ಸಾಮಗ್ರಿ ಒದಗಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗೂ ಮಾಹಿತಿ: ಇ ಲೈಬ್ರರಿಯಲ್ಲಿ ಐಐಟಿ, ಜೆಇಇ, ನೀಟ್, ಐಎಎಸ್, ಐಪಿಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯವಿರುವ ವಿಷಯಗಳನ್ನು ಅಳವಡಿಸಲಾಗಿದ್ದು, ಹೆಚ್ಚಿನ ವಿದ್ಯಾರ್ಥಿಗಳಿಗೆ ಇದು ಅನುಕೂಲಕರವಾಗಿದೆ.
ಇ ಪ್ಲಾಟ್ ಫಾರ್ಮ್ ಬಳಕೆದಾರರಿಗೆ ವೆಬ್ ಆಧಾರಿತ ಮತ್ತು ಆ್ಯಪ್ ಆಧಾರಿತವಾಗಿದೆ. www.karnataka digitalpublic library.org ವೆಬ್‌ನಲ್ಲಿ ಲಭ್ಯವಿರುವ ಎಲ್ಲ ಮಾಹಿತಿಯೂ ಆ್ಯಪ್‌ನಲ್ಲಿಯೂ ಲಭ್ಯವಿದೆ. e-Sarvajanika Granthalaya ಫ್ಲೆ ಸ್ಟೋರ್‌ನಲ್ಲಿ ಲಭ್ಯವಿದೆ. ಡಿಜಿಟಲ್ ಗ್ರಂಥಾಲಯದಲ್ಲಿರುವ ಕೊಂಡಿಗಳು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಣಜದ 800 ಇ ಪುಸ್ತಕಗಳು, ನ್ಯಾಷನಲ್ ಎಮರ್ಜನ್ಸಿ ಲೈಬ್ರರಿ ಇ ಪುಸ್ತಕಗಳು, ತಂತ್ರಜ್ಞಾನ ವರ್ಧಿತ ಕಲಿಕೆಯ ರಾಷ್ಟ್ರೀಯ ಕಾರ್ಯಕ್ರಮ, ಇ-ಜ್ಞಾನಕೋಶ, ಸ್ವಾಮಿ ಆನ್‌ಲೈನ್ ಕೋರ್ಸ್‌ಗಳು, ಯುಜಿ, ಪಿಜಿ ಕೋರ್ಸ್‌ಗಳು, ಸಾಮಾಜಿಕ ವಿಜ್ಞಾನ, ಕಲೆ, ಲಲಿತಕಲೆ ಮತ್ತು ಮಾನವಿಕತೆ, ನೈಸರ್ಗಿಕ ಮತ್ತು ಗಣಿತ ವಿಜ್ಞಾನದ 70 ಸ್ನಾತಕೋತ್ತರ ವಿಭಾಗದ 23000 ಇ ಪಠ್ಯ ಪುಸ್ತಕ ಹಾಗೂ ವಿಡಿಯೋಗಳನ್ನು ಅಳವಡಿಸಲಾಗಿದೆ. ಟಾಪ್ ಟೆನ್ ಪುಸ್ತಕಗಳು
– ಎಫ್ಡಿಎ ಮತ್ತು ಎಸ್‌ಡಿಎ
– ಇತಿಹಾಸ
– ಕರ್ನಾಟಕ ಪ್ರಾದೇಶಿಕ
– ಭೂಗೋಳ ಶಾಸ್ತ್ರ
– ಚಿದಂಬರ ರಹಸ್ಯ
– ಕೆ ಎ ಎಸ್.
– ಪ್ರಾಕೃತಿಕ ವಸ್ತುನಿಷ್ಠ ಭೂಗೋಳ- ವಸ್ತುನಿಷ್ಠ ಮಾದರಿ ಪ್ರಶ್ನೋತ್ತರಗಳು
– ಕನ್ನಡ ಕೈಪಿಡಿ
– ತೇಜಸ್ವಿ ನನಗೆ ನಿಮಿತ್ತ
– ಅಪರಾಧ ಶಾಸ್ತ್ರ
– ಸಮಗ್ರ ಇತಿಹಾಸ ನಮ್ಮ ಸಾರ್ವಜನಿಕ ಗ್ರಂಥಾಲಯದ ಡಿಜಿಟಲ್ ಲೈಬ್ರರಿ ವಿಶ್ವದಲ್ಲಿ ಅತಿ ಹೆಚ್ಚು ಜನರಿಂದ ಹುಡುಕಾಟ ಆಗಿರುವುದು ನಮ್ಮ ಶ್ರಮಕ್ಕೆ ದೊರೆತ ಫಲ. ಕೊರೊನಾ ಸಂದರ್ಭದಲ್ಲಿ ಜನರಿಗೆ ಹತ್ತಿರವಾಗಲು ಮಾಡಿರುವ ಇ ಲೈಬ್ರರಿ ಅತ್ಯಂತ ವೇಗವಾಗಿ ಜನರನ್ನು ತಲುಪುತ್ತಿದ್ದು, 10 ಲಕ್ಷ ವಿಷಯಗಳನ್ನು ಅಳವಡಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
– ಡಾ. ಸತೀಶ್‌ಕುಮಾರ್ ಹೊಸಮನಿ, ಸಾರ್ವಜನಿಕ ಗ್ರಂಥಾಲಯ ನಿರ್ದೇಶಕರು – ಶಂಕರ ಪಾಗೋಜಿ