Advertisement
ಮಧ್ಯಮ, ಬೃಹತ್, ಮೆಗಾ, ಅಲ್ಟ್ರಾ ಮತ್ತು ಸೂಪರ್ ಮೆಗಾ ಸಹಿತ ಯಾವುದೇ ಕೈಗಾರಿಕೆ ತಾನು ಹೂಡುವ ಬಂಡವಾಳಕ್ಕೆ ಅನುಗುಣವಾಗಿ ಉದ್ಯೋಗಾವಕಾಶ ಸೃಷ್ಟಿ ಮಾಡಿ, ಎಲ್ಲ ಶ್ರೇಣಿಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುವುದನ್ನು ಕಡ್ಡಾಯಗೊಳಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
ರಾಜ್ಯದಲ್ಲಿ ಸ್ಥಳೀಯರಿಗೆ ಉದ್ಯೋಗ ನಿರೀಕ್ಷಿತ ಪ್ರಮಾಣದಲ್ಲಿ ದೊರಕುತ್ತಿಲ್ಲ. ಬಹುತೇಕ ಹೊರ ರಾಜ್ಯ ದವರಿಗೆ ಇಲ್ಲಿನ ಉದ್ಯಮ, ಕೈಗಾರಿಕೆಗಳಲ್ಲಿ ಉದ್ಯೋಗ ಆದ್ಯತೆ ಸಿಗುತ್ತಿದೆ ಎಂಬ ಮಾತಿದೆ. ಹೀಗಾಗಿ ಸ್ಪಷ್ಟ ಮತ್ತು ರಾಜ್ಯಕ್ಕೆ ಪೂರಕ ತೀರ್ಮಾನ ಕೈಗೊಳ್ಳಲಾಗಿದೆ. ಈ ನೀತಿ 2025ರ ವರೆಗೆ ಜಾರಿಯಲ್ಲಿರುತ್ತದೆ ಎಂದರು.
Related Articles
Advertisement
ಕಾರ್ಮಿಕರಿಗೆ ಹಲವು ಸೌಲಭ್ಯ-ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಉದ್ಯೋಗ ಶ್ರಮೀಕರಣ ಮತ್ತು ಸೇವಾ ಷರತ್ತುಗಳಿಗೆ ತಿದ್ದುಪಡಿ ತರಲು ನಿರ್ಧಾರ
-ಫಲಾನುಭವಿಯ ನೋಂದಣಿ ವಂತಿಗೆ ಮನ್ನಾ
-ಫಲಾನುಭವಿಗಳ ಪಿಂಚಣಿ ಸೌಲಭ್ಯ 2ರಿಂದ 3 ಸಾವಿರ ರೂ.ಗಳಿಗೆ ಏರಿಕೆ
-ಹೆರಿಗೆ ಸೌಲಭ್ಯದಡಿ 50 ಸಾವಿರ ರೂ., ಅಂತ್ಯಸಂಸ್ಕಾರ ಸಹಾಯಧನ 70 ಸಾವಿರಕ್ಕೆ ಹೆಚ್ಚಳ
-ಕೋವಿಡ್‌ನಿಂದ ಮೃತಪಟ್ಟ ಫಲಾನುಭವಿಯ ಅವಲಂಬಿತರಿಗೆ 2 ಲಕ್ಷ ರೂ. ಸಹಾಯಧನ
-ಫಲಾನುಭವಿಗೆ ಟೂಲ್ ಕಿಟ್ ವಿತರಣೆ
-ಗೃಹ ಭಾಗ್ಯ’ದಡಿ ಅರ್ಹ ಫಲಾನುಭವಿಗಳಿಗೆ ಮನೆ ಕಟ್ಟಲು ಸಾಲ/ಮುಂಗಡ ನಿಯಮ ಸರಳೀಕರಣ
-ಕೆಲಸದ ಸ್ಥಳದಲ್ಲಿ ಸಾವನ್ನಪ್ಪುವ ಕಾರ್ಮಿಕರ ಅವಲಂಬಿತರಿಗೆ 5 ಲಕ್ಷ ರೂ. ಪರಿಹಾರ
-ಮದುವೆ ಸಹಾಯಧನ 60 ಸಾವಿರ ರೂ.ಗೆ ಹೆಚ್ಚಿಸಲು ನಿಯಮಗಳಿಗೆ ತಿದ್ದುಪಡಿ
-ವೈದ್ಯಕೀಯ ಸಹಾಯಧನ 10 ಸಾವಿರದಿಂದ 20 ಸಾವಿರಕ್ಕೆ ಏರಿಕೆ
-ಸೀಮಿತ ವ್ಯಾಪ್ತಿಯಲ್ಲಿ ಕಾರ್ಮಿಕರಿಗೆ ಕೆಎಸ್ಸಾರ್ಟಿಸಿ ಉಚಿತ ಬಸ್ ಪಾಸ್ ಕಸ್ತೂರಿರಂಗನ್ ವರದಿಗೆ ಒಪ್ಪಿಗೆಯಿಲ್ಲ
ಪಶ್ಚಿಮ ಘಟ್ಟ ಪ್ರದೇಶಗಳಿಗೆ ಸಂಬಂಧಿಸಿ ಕಸ್ತೂರಿ ರಂಗನ್ ವರದಿ ಜಾರಿಗೆ ಕರ್ನಾಟಕದ ಒಪ್ಪಿಗೆ ಇಲ್ಲ ಎಂದು ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ವರದಿ ಜಾರಿಯಿಂದ ಆ ಭಾಗದ ಜನರಿಗೆ ಭಾರೀ ಸಮಸ್ಯೆಯಾಗಲಿದ್ದು, ಇದನ್ನು ಒಪ್ಪಲು ಸಾಧ್ಯವೇ ಇಲ್ಲ ಎಂಬ ನಿರ್ಣಯಕ್ಕೆ ಬರಲಾಗಿದೆ. ಸದ್ಯದಲ್ಲೇ ಈ ಕುರಿತು ಕೇಂದ್ರ ಸಚಿವರನ್ನು ಭೇಟಿ ಮಾಡಿ ಸರಕಾರದ ಅಭಿಪ್ರಾಯ ತಿಳಿಸಲಾಗುವುದು. ವರದಿ ಅನುಷ್ಠಾನ ವಿಚಾರದಲ್ಲಿ ಕೇಂದ್ರ ಸರಕಾರ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ನಾವು ಸಂಪುಟದಲ್ಲಿ ನಿರ್ಧಾರ ಕೈಗೊಂಡಿದ್ದೇವೆ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.