Advertisement

ಶ್ರೇಷ್ಠ ಉತ್ಪನ್ನ- ಶ್ರೇಷ್ಠ ಸೇವೆ: ಪ್ರದೀಪ್‌ ಕುಮಾರ್‌ ಕರೆ

11:43 PM Apr 12, 2023 | Team Udayavani |

ಉಡುಪಿ: ಬ್ಯಾಂಕಿಂಗ್‌ ಸಂಸ್ಥೆಗಳು ಅತ್ಯುತ್ತಮ ಉತ್ಪನ್ನಗಳನ್ನು ಪರಿಚಯಿಸಿ ಅತ್ಯುತ್ತಮ ಸೇವೆಯನ್ನು ಗ್ರಾಹಕರಿಗೆ ನೀಡಬೇಕಾಗಿದೆ ಎಂದು ಕರ್ಣಾಟಕ ಬ್ಯಾಂಕ್‌ನ ಅಧ್ಯಕ್ಷ ಪಿ.ಪ್ರದೀಪ್‌ಕುಮಾರ್‌ ಕರೆ ನೀಡಿದರು.

Advertisement

ಬುಧವಾರ ಅವರು ಅಂಬಾಗಿಲಿನಲ್ಲಿ ನಿರ್ಮಿಸಿದ ಬ್ಯಾಂಕ್‌ನ ಉಡುಪಿ ಪ್ರಾದೇಶಿಕ ಕಚೇರಿಯ ನೂತನ ಕಟ್ಟಡ ಮತ್ತು ಅಂಬಾಗಿಲು ಶಾಖೆಯ ಸ್ಥಳಾಂತರ, ಮಿನಿ ಇ – ಲಾಬಿ ಉದ್ಘಾಟನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಿಂದೆ ಸ್ಪರ್ಧೆಯೂ ಉತ್ಪನ್ನಗಳೂ ಇಷ್ಟಿರಲಿಲ್ಲ. ಈಗ ಉತ್ಪನ್ನಗಳು ಹೆಚ್ಚಿಗೆ ಯಾಗಿವೆ. ಸೇವೆಯೂ ಅತ್ಯುತ್ತಮ ಮಟ್ಟದಲ್ಲಿರಬೇಕು. ತಂತ್ರಜ್ಞಾನದ ಬೆಳವಣಿಗೆಯನ್ನು ಸಮರ್ಥವಾಗಿ ಬಳಸಿ ಸಂಸ್ಥೆಯನ್ನು ಬಲಪಡಿಸಬೇಕು ಎಂದವರು ಹೇಳಿದರು.

ಭಾವನಾತ್ಮಕ ಸಂಬಂಧ: ವಿನಯ ಹೆಗ್ಡೆ 
ಇದುವರೆಗೆ ಕರ್ಣಾಟಕ ಬ್ಯಾಂಕ್‌ನಲ್ಲಿ ವ್ಯವಹಾರ ನಡೆಸದಿದ್ದರೂ ನಾನು ವ್ಯಕ್ತಿಗತವಾಗಿ ಮೆಚ್ಚಿಕೊಂಡ ಬ್ಯಾಂಕ್‌ ಆಗಿದೆ. ನನ್ನ ತಂದೆಯವರಿಗೂ, ಬ್ಯಾಂಕ್‌ನ ರೂವಾರಿ ಕೆ.ಎಸ್‌.ಎನ್‌.
ಅಡಿಗರಿಗೂ ಉತ್ತಮ ಬಾಂಧವ್ಯವಿತ್ತು. ಹೀಗಾಗಿ ನನಗೆ ಭಾವನಾತ್ಮಕ ಸಂಬಂಧ ವಿದೆ ಎಂದು ನೂತನ ಕಟ್ಟಡ ಉದ್ಘಾಟಿಸಿದ ನಿಟ್ಟೆ ಶಿಕ್ಷಣ ಟ್ರಸ್ಟ್‌ ಅಧ್ಯಕ್ಷ ರಾದ ನಿಟ್ಟೆ ವಿ.ವಿ. ಕುಲಪತಿ ಎನ್‌.ವಿನಯ ಹೆಗ್ಡೆ ಬೆಟ್ಟು ಮಾಡಿದರು.

ಪ್ರಾದೇಶಿಕ ಕಚೇರಿಯ ಸಹಾಯಕ ಮಹಾಪ್ರಬಂಧಕ ರಾಜಗೋಪಾಲ ಬಿ. ಸ್ವಾಗತಿಸಿ, ಕಾರ್ಯನಿರ್ವಾಹಕ ನಿರ್ದೇಶಕ ಶೇಖರ ರಾವ್‌ ವಂದಿಸಿದರು. ಕುಂಜಿಬೆಟ್ಟು ಶಾಖೆಯ ಎಬಿಎಂ ಭಾಗ್ಯಶ್ರೀ ಬಿ.ಎಸ್‌. ಕಾರ್ಯಕ್ರಮ ನಿರ್ವಹಿಸಿದರು. ಅಂಬಾಗಿಲು ಶಾಖೆಯ ಹಿರಿಯ ಪ್ರಬಂಧಕ ಶಶಿಕಾಂತ್‌ ಎಂ. ಬಂಗೇರ ಸಹಕರಿಸಿದರು. ಬ್ಯಾಂಕ್‌ನ ಶತಮಾನೋತ್ಸವದ ಅಂಗವಾಗಿ 100 ಹಿರಿಯ ಗ್ರಾಹಕರನ್ನು ಅಭಿನಂದಿಸಲಾಯಿತು.

Advertisement

ಬ್ಯಾಂಕ್‌ನ ಮಾಜಿ ಅಧ್ಯಕ್ಷ ಜಯರಾಮ ಭಟ್‌, ಗಣ್ಯರಾದ ಡಾ| ಜಿ. ಶಂಕರ್‌, ಆನಂದ ಕುಂದರ್‌, ಹರಿಯಪ್ಪ ಕೋಟ್ಯಾನ್‌, ಜೆರ್ರಿ ವಿನ್ಸೆಂಟ್‌ ಡಾಯಸ್‌ ಹಾಗೂ ಬ್ಯಾಂಕ್‌ನ ನಿರ್ದೇಶಕ ಮಂಡಳಿ ಸದಸ್ಯರು ಭಾಗವಹಿಸಿದ್ದರು.

ಉಡುಪಿ ರಾಮ ರಾವ್‌ ಕನಸಿನ ಕೂಸು
ಕರ್ಣಾಟಕ ಬ್ಯಾಂಕ್‌ಗೂ ಉಡುಪಿಗೂ ಅವಿನಾಭಾವ ಸಂಬಂಧವಿದೆ. ಮದ್ರಾಸ್‌ ಪ್ರಾಂತದ ಶಾಸಕರಾಗಿದ್ದ ಉಡುಪಿ ಮೂಲದ ಡಾ|ಯು. ರಾಮ ರಾವ್‌ ಅವರ ಕನಸಿನ ಕೂಸು ಕರ್ಣಾಟಕ ಬ್ಯಾಂಕ್‌. ಬ್ಯಾಂಕ್‌ನ ಮೂರನೆಯ ಶಾಖೆ ಆರಂಭವಾದದ್ದು ಉಡುಪಿ ರಥಬೀದಿಯಲ್ಲಿ. ಶ್ರೀಕೃಷ್ಣಮಠ- ಅಷ್ಟಮಠಗಳ ಆಶೀರ್ವಾದದಿಂದ ಬ್ಯಾಂಕ್‌ ಬೆಳೆದುಬಂದಿದೆ ಎಂದು ಅಂಬಾಗಿಲು ಶಾಖೆಯ ನೂತನ ಪ್ರಾಂಗಣ ಮತ್ತು ಮಿನಿ ಇ – ಲಾಬಿಯನ್ನು ಉದ್ಘಾಟಿಸಿದ ಬ್ಯಾಂಕ್‌ನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ ಎಂ.ಎಸ್‌. ಹೇಳಿದರು.

ನಿರ್ದೇಶಕ ಮಂಡಳಿ-ಮೂರು ತಲೆಮಾರು
ಕುಂದಾಪುರ ತಾಲೂಕಿನ ಹಲ್ಸನಾಡು ರಾವ್‌ ಮತ್ತು ಕಕ್ಕುಂಜೆ ಅಡಿಗರ ಮನೆತನದವರ ಮೂರು ತಲೆಮಾರುಗಳ ಸದಸ್ಯರು ಬ್ಯಾಂಕ್‌ನ ನಿರ್ದೇಶಕ ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದಾರೆ ಎಂದು ಮಹಾಬಲೇಶ್ವರ ಉಲ್ಲೇಖೀಸಿದರು.

ಎನ್‌ಪಿಎ ದಿನವಾಗಿ ಎಂಡಿ ಜನ್ಮದಿನ
ಬ್ಯಾಂಕ್‌ನಲ್ಲಿ 5 ಲಕ್ಷ ಸಾಲದ ಖಾತೆಗಳಿವೆ. ಮಂಗಳವಾರವನ್ನು ಶೂನ್ಯ ಎನ್‌ಪಿಎ (ನಾನ್‌ಪರ್ಫಾಮಿಂಗ್‌ ಅಸೆಟ್‌) ದಿನವಾಗಿ ಸಿಬಂದಿ ಆಚರಿಸಿ ನನ್ನ ಹುಟ್ಟುಹಬ್ಬಕ್ಕೆ ಕೊಡುಗೆ ನೀಡಿದರು ಎಂದು ಮಹಾಬಲೇಶ್ವರ ಮೆಚ್ಚುಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next