Advertisement
ಆರ್ಥಿಕ ಶಿಸ್ತು ಹಾಗೂ ಲೆಕ್ಕಪರಿಶೋಧನ ವರದಿ ಇಲ್ಲದೆ ಬ್ಯಾಂಕ್ ಅಥವಾ ಸಹಕಾರಿ ಸಂಸ್ಥೆ ಕಾರ್ಯನಿರ್ವಹಿಸಲು ಸಾಧ್ಯವೇ ಇಲ್ಲ. ಮಹಾಲಕ್ಷ್ಮೀ ಕೋ-ಆಪ್ ಬ್ಯಾಂಕ್ನ ಎಲ್ಲ ಲೆಕ್ಕಾಚಾರಗಳು ಸ್ಪಷ್ಟವಾಗಿವೆ. ಸಾಲ ಪಡೆದವರು ಯಾವುದೇ ಸಮಸ್ಯೆ ಇದ್ದರೆ ಬ್ಯಾಂಕ್ನ ಮಹಾಸಭೆ ಅಥವಾ ನಿರ್ದಿಷ್ಟ ವೇದಿಕೆಯಲ್ಲಿ ಪ್ರಶ್ನೆ ಮಾಡಲು ಅವಕಾಶ ಇತ್ತು. ನ್ಯಾಯಾ ಲಯದಲ್ಲೂ ಹೋರಾಟ ಮಾಡಬಹುದಿತ್ತು ಎಂದರು.
ಸುಸ್ತಿದಾರರು ಬ್ಯಾಂಕ್ನಿಂದ ಸಾಲ ಪಡೆಯದೇ ಇದ್ದದ್ದನ್ನು ಸಾಬೀತು ಮಾಡಿದರೆ ಬ್ಯಾಂಕ್ ಅದರ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧವಿದೆ. ಒಂದೊಮ್ಮೆ ಸುಸ್ತಿದಾರರು ಸಾಲ ಪಡೆದಿರುವುದು ಖಚಿತವಾದರೆ ರಘುಪತಿ ಭಟ್ ಅವರು ಸುಸ್ತಿದಾರರ ಸಾಲ ಮರುಪಾವತಿ ಜವಾಬ್ದಾರಿ ವಹಿಸಿಕೊಳ್ಳಲಿ ಎಂದು ಸವಾಲು ಹಾಕಿದರು. ಬ್ಯಾಂಕ್ ಉಪಾಧ್ಯಕ್ಷ ವಾಸುದೇವ ಸಾಲ್ಯಾನ್, ನಿರ್ದೇಶಕ ವಿನಯ ಕರ್ಕೇರ, ಪ್ರೊಫೆಶನಲ್ ಡೈರೆಕ್ಟರ್ ಮಂಜುನಾಥ ಎಸ್.ಕೆ., ಎಂಡಿ ಶರತ್ ಕುಮಾರ್ ಶೆಟ್ಟಿ, ಎಜಿಎಂ ಶಾರಿಕಾ ಕಿರಣ್ ಉಪಸ್ಥಿತರಿದ್ದರು.
Related Articles
ಗೋಕಾಕ್ ಮಹಾಲಕ್ಷ್ಮೀ ಟೌನ್ ಕೋ ಆಪರೇಟಿವ್ ಬ್ಯಾಂಕ್ಗೆ ಆರ್ಬಿಐ ನೀಡಿರುವ ನೋಟೀಸ್ ಅನ್ನು ನಮ್ಮ ಮಹಾಲಕ್ಷ್ಮೀ ಕೋ- ಆಪ್ ಬ್ಯಾಂಕ್ ಹೆಸರಿನಲ್ಲಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ದೂರು ಸಲ್ಲಿಸಿದ್ದೇವೆ. ನಕಲಿ ದಾಖಲೆ ಸೃಷ್ಟಿಸಿದವರ ವಿರುದ್ಧ ಕ್ರಮ ಆಗಲಿದೆ ಎಂದು ಯಶ್ಪಾಲ್ ಸುವರ್ಣ ಹೇಳಿದರು.
Advertisement