Advertisement
ಸಚಿವ ಲಮಾಣಿಗಿಂತ ಪತ್ನಿಯ ಆಸ್ತಿಯೇ ಹೆಚ್ಚುಹಾವೇರಿ: ಸಚಿವ ರುದ್ರಪ್ಪ ಲಮಾಣಿ ತಮ್ಮ ನಾಮಪತ್ರದ ಜತೆಗೆ ಆಸ್ತಿ ವಿವರ ಸಲ್ಲಿಸಿದ್ದು, ತಮ್ಮ ಬಳಿ ಒಟ್ಟು 3,51,20,769 ರೂ. ಹಾಗೂ ಪತ್ನಿ ಬಳಿ 4,33,09,555 ರೂ. ಸೇರಿ ಒಟ್ಟು 7,84,30,324 ರೂ. ಆಸ್ತಿ ಇದೆ ಎಂದು ಘೋಷಿಸಿದ್ದಾರೆ.
ಬೀಳಗಿ: ಕಾಂಗ್ರೆಸ್ ಶಾಸಕ ಜೆ.ಟಿ. ಪಾಟೀಲ ಒಟ್ಟು ಚರಾಸ್ತಿ 1,52,76,035 ರೂ., ಅವರ ಅವಲಂಬಿತರ ಒಟ್ಟು ಚರಾಸ್ತಿ 37,89,524 ರೂ. ಸೇರಿ ಒಟ್ಟು ಚರಾಸ್ತಿ ಮೌಲ್ಯ 1,90,65,559. ಇನ್ನು ಶಾಸಕರ ಸ್ಥಿರಾಸ್ತಿ 61,10,000 ರೂ. ಅವರ ಪತ್ನಿಯ ಸ್ಥಿರಾಸ್ತಿ 51,00,000 ರೂ. ಕುಟುಂಬದ ಒಟ್ಟು ಸ್ಥಿರಾಸ್ತಿ-ಚರಾಸ್ತಿ ಮೌಲ್ಯ 2,01,86,559 ರೂ. ಶಾಸಕರಲ್ಲಿರುವ ನಗದು ಹಣ 1,32,027 ರೂ., ಪತ್ನಿಯಲ್ಲಿರುವ ನಗದು 1,23,762 ರೂ. ಶಾಸಕರ ಹೆಸರಲ್ಲಿ ವಿವಿಧ ಬಾಂಕ್‌ಗಳಲ್ಲಿರುವ ಸಾಲ 47,83,483 ರೂ., ಪತ್ನಿಯ ಹೆಸರಲ್ಲಿ ಬ್ಯಾಂಕ್ ಸಾಲ 21,70,202 ರೂ. ಇದೆ.
Related Articles
ಹಳಿಯಾಳ: ಹಳಿಯಾಳ-ಜೋಯಿಡಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಸಚಿವ ಆರ್.ವಿ. ದೇಶಪಾಂಡೆ ತಮ್ಮ ಆಸ್ತಿ ವಿವರವನ್ನು ಚುನಾವಣಾಧಿಕಾರಿಗೆ ಸಲ್ಲಿಸಿದ್ದು ಅವರಿಗಿಂತ ಪತ್ನಿಯೇ ಹೆಚ್ಚು ಶ್ರೀಮಂತರಾಗಿದ್ದಾರೆ.
Advertisement
ದೇಶಪಾಂಡೆ ಹೆಸರಿನಲ್ಲಿ ಚರಾಸ್ತಿ ಒಟ್ಟು 22,69,96,666 ರೂ.ನಷ್ಟಿದ್ದು ಅವರ ಪತ್ನಿ ರಾಧಾ ಹೆಸರಿನಲ್ಲಿ 112,26,97,153 ಇದೆ. ದೇಶಪಾಂಡೆ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ 18,30,514 ರೂ.ಠೇವಣಿ ಇದ್ದು, ರಾಧಾ ಅವರ ಹೆಸರಿನಲ್ಲಿ 7,45,76,000 ರೂ. ಇದೆ. ದೇಶಪಾಂಡೆ ಬಳಿ 3.56 ಲಕ್ಷ ನಗದು ಇದ್ದರೆ, ಪತ್ನಿ ರಾಧಾ ಬಳಿ 2.69 ಲಕ್ಷ ಇದೆ. ದೇಶಪಾಂಡೆ ಹೆಸರಿನಲ್ಲಿ ಒಟ್ಟು 21 ಕೋಟಿ 74 ಲಕ್ಷ 61 ಸಾವಿರ ರೂ. ಬೆಲೆಯ ಭೂಮಿ ಇದ್ದರೆ,ರಾಧಾ ಹೆಸರಿನಲ್ಲಿ 8,40,52,506 ರೂ. ಬೆಲೆಯ ಭೂಮಿ ಇದೆ. ವಿವಿಧ ಖಾಸಗಿ ಕಂಪನಿಗಳಲ್ಲಿ ರಾಧಾ ಅವರ ಹೆಸರಿನಲ್ಲಿ 1,35,20,080 ಬೆಲೆಯ ಷೇರುಗಳಿವೆ. ಇದರ ಹೊರತಾಗಿ ಇಬ್ಬರ ಹೆಸರಿನಲ್ಲಿ ಕಟ್ಟಡಗಳು, ವಾಣಿಜ್ಯ ಮಳಿಗೆಗಳು, ಕೃಷಿ ಭೂಮಿ, ಕೃಷಿಯೇತರ ಭೂಮಿ ಕೂಡ ಇವೆ ಎಂದು ಘೋಷಿಸಲಾಗಿದೆ.
ಕಾರಜೋಳ ಸ್ವಂತ ವಾಹನ ಹೊಂದಿಲ್ಲ!ಮುಧೋಳ: ಶಾಸಕ ಗೋವಿಂದ ಕಾರಜೋಳ 52,52,533 ಮೌಲ್ಯದ ಚರಾಸ್ತಿ ಮತ್ತು 96,00,000 ಮೊತ್ತದ ಸ್ಥಿರಾಸ್ತಿ
ಹೊಂದಿದ್ದಾರೆ. ಪತ್ನಿ ಶಾಂತಾದೇವಿ 41,82,689 ಮೌಲ್ಯದ ಚರಾಸ್ತಿ, 18 ಲಕ್ಷ ಮೊತ್ತದ ಸ್ಥಿರಾಸ್ತಿ ಹೊಂದಿದ್ದಾರೆ. ಪತ್ನಿ 101 ತೊಲಿ ಬಂಗಾರದ ಆಭರಣಗಳು, 5 ಕೆಜಿ ಬೆಳ್ಳಿ ಸಾಮಾನುಗಳನ್ನು ಹೊಂದಿದ್ದಾರೆ. ಅಲ್ಲದೆ, ಸ್ವಂತ ವಾಹನಗಳಿಲ್ಲ,ಯಾವುದೇ ಸಾಲವಿಲ್ಲವೆಂದು ಘೋಷಿಸಿಕೊಂಡಿದ್ದಾರೆ.