ಕಾರ್ಕಳ: ರೋಟರಿ ಆ್ಯನ್ಸ್ ಕ್ಲಬ್‌ನ 2017-18 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು. 26 ರಂದು ಕಾರ್ಕಳ ರೋಟರಿ ಬಾಲಭವನದಲ್ಲಿ ಜರಗಿತು.
ಕಾರ್ಕಳ ರೋಟರಿ ಕ್ಲಬ್‌ನ ಅಧ್ಯಕ್ಷ ಡಾ| ಮಹದೇವ ಗೌಡ ಅವರು ಅಧ್ಯಕ್ಷತೆ ವಹಿಸಿದ್ದರು. ಮೂಡಬಿದಿರೆ ಇನ್ನರ್ ವ್ಹೀಲ್ ಕ್ಲಬ್‌ನ ಕೋಶಾಧ್ಯಕ್ಷೆ ಪ್ರಕಾಶಿಣಿ ಹೆಗ್ಡೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ನಿರ್ಗಮನ ಕಾರ್ಯದರ್ಶಿ ಜಯಂತಿ ನಾೖಕ್ ವರದಿ ವಾಚಿಸಿದರು. ನಿರ್ಗಮನ ಅಧ್ಯಕ್ಷೆ ರಾಜೇಶ್ವರಿ ಆಚಾರ್ ಅವರು ನೂತನ ಆ್ಯನ್ಸ್ ಅಧ್ಯಕ್ಷೆ ಸ್ವಾತಿ ಆಚಾರ್ ಅವರಿಗೆ ಹಾಗೂ ನಿರ್ಗಮನ ಕಾರ್ಯದರ್ಶಿ ಜಯಂತಿ ನಾೖಕ್ ಅವರು ನೂತನ ಕಾರ್ಯದರ್ಶಿ ರಕ್ಷಾ ಪ್ರಭಾತ್ ಅವರಿಗೆ ಅಧಿಕಾರವನ್ನು ಹಸ್ತಾಂತರಿಸಿದರು. ಕೋಶಾಧ್ಯಕ್ಷೆ ಶಶಿಕಲಾ ಗೌಡ 2016-17 ನೇ ಸಾಲಿನ ಲೆಕ್ಕಪತ್ರವನ್ನು ಮಂಡಿಸಿ, ನೂತನ ಕೋಶಾಧ್ಯಕ್ಷೆ ನವ್ಯ ಶೆಟ್ಟಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಆ್ಯನ್ಸ್ ಕ್ಲಬ್‌ನ ಸಭಾಪತಿ ಶಶಿಕಲಾ ಹೆಗ್ಡೆ , ಆ್ಯನ್ಸ್ ಕ್ಲಬ್‌ನ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ನಿರ್ಗಮನ ಅಧ್ಯಕ್ಷೆ ರಾಜೇಶ್ವರಿ ಆಚಾರ್ ಹಾಗೂ ನಿರ್ಗಮನ ಕಾರ್ಯದರ್ಶಿ ಜಯಂತಿ ನಾೖಕ್ ಹಾಗೂ ಆ್ಯನ್ಸ್ ಕ್ಲಬ್‌ನ 10 ಮಂದಿ ಪೂರ್ವಾಧ್ಯಕ್ಷರುಗಳನ್ನು ಈ ಸಂದರ್ಭದಲ್ಲಿ ಸಮ್ಮಾನಿಸಲಾಯಿತು. ರಾಜೇಶ್ವರಿ ಆಚಾರ್ ಸ್ವಾಗತಿಸಿದರು.
ಅಶ್ವಿನಿ ವೇಣುಗೋಪಾಲ್ ಮತ್ತು ಗೀತಾ ಕಾಮತ್ ಕಾರ್ಯಕ್ರಮ ನಿರೂಪಿಸಿ, ರಕ್ಷಾ ಪ್ರಭಾತ್ ವಂದಿಸಿದರು.