Advertisement
ನಗರದ ಹೃದಯ ಭಾಗದ ಬಸ್ ನಿಲ್ದಾಣ ಬಳಿ ಪೊಲೀಸ್ ಚೌಕಿಯಿದೆ. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ, ಜನ ದಟ್ಟನೆಯ ವೇಳೆ ಟ್ರಾಫಿಕ್ ಜಾಮ್ ಆಗದಂತೆ ನೋಡಿಕೊಳ್ಳುವ ಸಲುವಾಗಿ, ಹಾಗೂ ಕಾನೂನು ಸುವ್ಯವಸ್ಥೆ ಹದಗೆಡ ದಂತೆ ನೋಡಿಕೊಳ್ಳಲು ನಿಯೋಜನೆ ಗೊಂಡು ಇಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರ ಅನುಕೂಲಕ್ಕಾಗಿ ನಗರ ಪೊಲೀಸ್ ಚೌಕಿ ಇರಿಸಲಾಗಿದೆ. ಸದುದ್ದೇಶ ಕ್ಕಾಗಿ ಬಳಕೆಯಾಗಬೇಕಿದ್ದ ಈ ಪೊಲೀಸ್ ಚೌಕಿ ತ್ಯಾಜ್ಯ ತಂದು ಸುರಿಯುವ ತೊಟ್ಟಿ ಯಾಗಿ ಮಾರ್ಪಟ್ಟಿದೆ.
Related Articles
Advertisement
ದೂರ ಉಳಿದ ಪೊಲೀಸರು
ಪೊಲೀಸ್ ಚೌಕಿ ಇದ್ದರೂ ಆರಂಭ ದಲ್ಲಿ ಅದರಲ್ಲಿ ನಿಂತು ಕರ್ತವ್ಯ ನಿರ್ವಹಿಸ ಲಾಗುತ್ತಿತ್ತು. ಚೌಕಿ ಈಗ ನಿಲ್ಲುವಷ್ಟು ಯೋಗ್ಯ ಹಾಗೂ ಸುರಕ್ಷಿತವಾಗಿಲ್ಲ. ಇದೇ ಕಾರಣಕ್ಕೆ ಏನೋ ಇಲ್ಲಿ ನಿಯೋಜನೆ ಗೊಂಡ ಪೊಲೀಸರು ಯಾರೂ ಚೌಕಿ ಬಳಸದೆ ಪಕ್ಕದಲ್ಲಿ ಎಲ್ಲಾದರೂ ನಿಂತು ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಮಳೆ ಬಂದಾಗ ಚೌಕಿಯೊಳಗೆ ನಿಂತು ಕರ್ತವ್ಯ ನಿರ್ವಹಿಸುವುದು ಕೂಡ ಕಷ್ಟ.
ಮಳೆಯಿಂದ ರಕ್ಷಣೆಗೆ ಸೂಕ್ತ ವ್ಯವಸ್ಥೆಗಳು ಚೌಕಿಯಲ್ಲಿಲ್ಲ. ಬಿಸಿಲ ತಾಪದ ರಕ್ಷಣೆಗೆ ಸುತ್ತ ಪರದೆಗಳು ಇಲ್ಲ. ಎಲ್ಲ ಸುರಕ್ಷತೆ, ವ್ಯವಸ್ಥೆಗಳುಳ್ಳ ಚೌಕಿ ಒದಗಿಸಿ ಸೂಕ್ತ ಜಾಗದಲ್ಲಿ ಇರಿಸಿದಲ್ಲಿ ಪೊಲೀಸ್ ಸಿಬಂದಿಗೆ ಕರ್ತವ್ಯ ನಿರ್ವಹಿಸಲು ಸುಗಮವಾಗುತ್ತದೆ.
ಜನ, ವಾಹನ ಹೆಚ್ಚು
ಉಡುಪಿ, ಮಂಗಳೂರು, ಹೆಬ್ರಿ ಸೇರಿ ದಂತೆ ವಿವಿಧೆಡೆಗಳಿಗೆ ತೆರಳುವ ಪ್ರಯಾಣಿಕರು ಇಲ್ಲಿನ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾದಿರುತ್ತಾರೆ. ಎಲ್ಲ ದಿನಗಳಲ್ಲಿ ಈ ಜಂಕ್ಷನ್‌ನಲ್ಲಿ ಅಪಾರ ಜನ, ವಾಹನ ಸಂದಣಿಯಿರುತ್ತದೆ. ಅದಕ್ಕೆ ಸುಸಜ್ಜಿತ ಪೊಲೀಸ್ ಚೌಕಿಯ ಅವಶ್ಯಕತೆ ಇಲ್ಲಿಗಿದೆ.
ಕಸ ಸಂಗ್ರಹ ಚೌಕಿಯ ಕೆಳಗೆ ಠಾಣೆಯ ಮೊಬೈಲ್, ಪೋನ್ ನಂಬರ್
ತ್ಯಾಜ್ಯ ಎಸೆಯುವ ತೊಟ್ಟಿಯಾಗಿ ಮಾರ್ಪಾಡುಗೊಂಡ ಪೊಲೀಸ್ ಚೌಕಿ ಇರುವುದು ಪುರಸಭೆಯ ಕೂಗಳತೆ ದೂರದಲ್ಲಿ. ಪುರಸಭೆ ಅಧಿಕಾರಿಗಳು, ಪೊಲೀಸರು ಇದೇ ಚೌಕಿಯನ್ನು ಸುತ್ತವರಿದು ಹಲವು ಬಾರಿ ಓಡಾಡುತ್ತಿರುತ್ತಾರೆ. ಆದರೇ ಚೌಕಿ ಯೊಳಗೆ ಚೀಲಗಟ್ಟಲೆ ಸಂಗ್ರಹವಾದ ತ್ಯಾಜ್ಯ ಮಾತ್ರ ಇವರ್ಯಾರ ಕಣ್ಣಿಗೂ ಈ ವರೆಗೂ ಬಿದ್ದಿಲ್ಲ ಎನ್ನುವುದೇ ಅಚ್ಚರಿಯಾಗಿದೆ. ಕಸ ತುಂಬಿದ ಚೌಕಿಯ ಕೆಳಗಡೆ ನಗರ ಪೊಲೀಸ್ ಠಾಣೆಯ ಮೊಬೈಲ್ ಸಂಖ್ಯೆ ಹಾಗೂ ಸ್ಥಿರ ದೂರವಾಣಿ ಸಂಖ್ಯೆ ಬರೆದಿದೆ.
ಶೀಘ್ರ ತೆರವು
ನಗರದ ಪೊಲೀಸ್ ಚೌಕಿಯಲ್ಲಿ ಕಸ ಎಸೆಯುತ್ತಿರುವ ವಿಚಾರ ಈಗ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ನಾಳೆಯೇ ಅದನ್ನು ತೆರವುಗೊಳಿಸಿ, ಸೂಕ್ತ ಅಗತ್ಯ ಕ್ರಮ ಕೈಗೊಳ್ಳಲಾಗುವುದು. -ಪ್ರಸನ್ನ, ಎಸ್‌ಐ ನಗರ ಠಾಣೆ, ಕಾರ್ಕಳ
-ಬಾಲಕೃಷ್ಣ ಭೀಮಗುಳಿ