Advertisement
ಏಳೆಂಟು ಶತಮಾನಗಳ ಹಿನ್ನೆಲೆ ಇರುವ ಈ ದೈವಸ್ಥಾನದಲ್ಲಿ ಕೊಡಮಣಿತ್ತಾಯ, ಬ್ರಹ್ಮ ಬೈರ್ದಕಳ, ಮಾಯಿಂದಲೆ ದೇವಿ ಮುಂತಾದ ಶಕ್ತಿಗಳನ್ನು ಇಲ್ಲಿನ ಗ್ರಾಮಸ್ಥರು ಆರಾಧಿಸಿಕೊಂಡು ಬರುತ್ತಿದ್ದಾರೆ.ಹತ್ತಿರದಲ್ಲೇ ಹೊಸಂಗಡಿ ಅರಮನೆಯ (ಹಳೆಯ) ಶಿಥಿಲ ಕಟ್ಟಡವಿದ್ದು ಸುತ್ತಲೂ ಕೃಷಿ ಭೂಮಿ ಇದೆ. ಇದೀಗ ಇಲ್ಲಿ ಭೂ ಅಭಿವೃದ್ಧಿಯ ಕಾಮಗಾರಿ ನಡೆಯುತ್ತಿದ್ದು ದೆ„ವಸ್ಥಾನದ ಕಟ್ಟಡದ ಬದಿ ಜೆಸಿಬಿಯಿಂದ ಅಗೆದು ಹಾಕಲಾಗಿದೆ. ಇದರಿಂದ ಆವರಣ ಗೋಡೆಗೆ ಹಾನಿಯಾಗಿದ್ದು ಅಡುಗೆ ಕೋಣೆ ಸೇರಿ ದೈವಸ್ಥಾನದ ಕಟ್ಟಡಗಳ ಬುಡ ಕುಸಿಯುವ ಅಪಾಯವನ್ನು ಎದುರಿಸುತ್ತಿದೆ.
ಪುರಾತನವಾದ ಈ ದೈವಸ್ಥಾನವನ್ನು ಉಳಿಸುವ ನಿಟ್ಟಿನಲ್ಲಿ ಇದೇ 21ರಂದು ಬೆಳಗ್ಗೆ 10ಕ್ಕೆ ದೈವಸ್ಥಾನದಲ್ಲಿ ಗ್ರಾಮಸ್ಥರ ಸಭೆಯನ್ನು ಕರೆಯಲಾಗಿದೆ ಎಂದು ದೈವಸ್ಥಾನದ ಆಡಳಿತದಾರ ಕರಿಂಜೆಗುತ್ತು ಕೃಷ್ಣರಾಜ ಹೆಗ್ಡೆ ತಿಳಿಸಿದ್ದಾರೆ.