Advertisement

Punjalkatte: ಗುಂಡಿಗಳು ಸಾರ್‌ ಗುಂಡಿಗಳು

12:51 PM Nov 06, 2024 | Team Udayavani |

ಪುಂಜಾಲಕಟ್ಟೆ: ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ದೊಡ್ಡಮಟ್ಟದ ಆಗ್ರಹವಿದ್ದಂತೆ ಈಗ ಜಿಲ್ಲಾ ರಸ್ತೆ, ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೂ ಗಮನ ಕೊಡಿ ಎಂಬ ಒಕ್ಕೊರಲ ಆಗ್ರಹ ಬಂಟ್ವಾಳ ಗ್ರಾಮಂತರದಲ್ಲಿ ವ್ಯಕ್ತವಾಗಲಾರಂಭಿಸಿದೆ.

Advertisement

ಲೋಕೋಪಯೋಗಿ ಇಲಾಖೆಗೆ ಸಂಬಂಧ ಪಟ್ಟ ಗ್ರಾಮೀಣ ಮತ್ತು ಜಿಲ್ಲಾ ರಸ್ತೆಗಳನ್ನು ಸಂಪೂರ್ಣ ಅಭಿವೃದ್ಧಿಗೊಳಿಸಬೇಕಾಗಿರುವುದು ಅಧಿಕಾರಿಗಳ ಮತ್ತು ಜನ ಪ್ರತಿನಿಧಿಗಳ ಕರ್ತವ್ಯವಾಗಿದೆ. ಗ್ರಾಮೀಣ ಪ್ರದೇಶಗಳ ಮೂಲ ಸೌಕರ್ಯ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಂಪರ್ಕ ರಸ್ತೆಗಳಿಗೆ ಅಭಿವೃದ್ಧಿ ಆದ್ಯತೆ ನೀಡಬೇಕಾಗಿದೆ. ಬಂಟ್ವಾಳ-ಬೆಳ್ತಂಗಡಿ ತಾಲೂಕಿನ ಗಡಿಭಾಗದ, ಮಾಲಾಡಿ ಮತ್ತು ಕುಕ್ಕಳ ಗ್ರಾಮಗಳಲ್ಲಿ ಹಾದು ಹೋಗುವ ಪುಂಜಾಲಕಟ್ಟೆ- ವೇಣೂರನ್ನು ಸಂಪರ್ಕಿಸುವ ಪುರಿಯ-ಬುಳೆಕ್ಕರ (ಕುಕ್ಕೇಡಿ)ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸಂಚಾರ ದುಸ್ತರವಾಗಿದೆ. ಹೊಂಡಗುಂಡಿಗಳಿಂದ ತುಂಬಿ ರುವ ರಸ್ತೆ ಸಂಪೂರ್ಣ ಡಾಮರು ಕಾಣದೆ ಹಲವಾರು ವರ್ಷಗಳೇ ಕಳೆದಿದ್ದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಬಂಟ್ವಾಳ-ಮೂಡುಬಿದಿರೆ ರಸ್ತೆಯಲ್ಲಿ ಸೊರ್ನಾಡು ಸೇತುವೆ ಬಳಿಯಿಂದ ಅಣ್ಣಳಿಕೆ, ಕೊಯಿಲ, ರಾಯಿ, ಮಾಡಮೆ ವರೆಗೆ ರಸ್ತೆ ಹದಗೆಟ್ಟಿದೆ. ಅಲ್ಲಿಪಾದೆಯಿಂದ ಕಕ್ಯಪದವು ಸಂಪರ್ಕದ ಕುಂಟಾಲಪಲ್ಕೆ ರಸ್ತೆಯಲ್ಲಿ ಅಲ್ಲಲ್ಲಿ ಹೊಂಡ ಗುಂಡಿಗಳು ಉಂಟಾಗಿದೆ. ಹೊಂಡಗುಂಡಿಗಳು ಕೂಡಿರುವ ಈ ರಸ್ತೆಯನ್ನು ಸುಗಮ ಸಂಚಾರಕ್ಕಾಗಿ ಅಭಿವೃದ್ದಿಗೊಳಿಸಬೇಕೆಂಬಉದು ಸಾರ್ವಜನಿಕರ ಆಗ್ರಹವಾಗಿದೆ.

-ರತ್ನದೇವ್‌ ಪುಂಜಾಲಕಟ್ಟೆ

Advertisement
Advertisement

Udayavani is now on Telegram. Click here to join our channel and stay updated with the latest news.

Next