Advertisement

ಕಾರಟಗಿ ಬಸವೇಶ್ವರ ನಗರ ಸೀಲ್‌ಡೌನ್‌

06:47 AM Jun 10, 2020 | Suhan S |

ಕಾರಟಗಿ: ಪಟ್ಟಣದ 9ನೇ ವಾರ್ಡ್‌ ಬಸವೇಶ್ವರ ನಗರದ 45 ವರ್ಷದ ಮಹಿಳೆಗೆ ಕೋವಿಡ್‌-19 ದೃಢಪಟ್ಟಿದ್ದು, ಬಸವೇಶ್ವರ ನಗರವನ್ನು ಸೀಲ್‌ಡೌನ್‌ ಮಾಡಲಾಗಿದೆ.

Advertisement

ಕೋವಿಡ್‌ ಸೋಂಕಿತ ಮಹಿಳೆ ಜೂ. 4ರಂದು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಪಾಸಣೆಗೆ ಆಗಮಿಸಿದ್ದರು. ಆರೋಗ್ಯ ಕೇಂದ್ರದಲ್ಲಿ ಮಹಿಳೆ ತಪಾಸಣೆ ನಡೆಸಿದ ಸಿಬ್ಬಂದಿ, ಗಂಟಲು ದ್ರವ ಸಂಗ್ರಹಿಸಿ ಲ್ಯಾಬ್‌ಗ ಕಳಿಸಿದ್ದರು. ಮಹಿಳೆಯನ್ನು ಸೋಮವಾರ ರಾತ್ರಿಯೇ ಕೊಪ್ಪಳದ ಕೋವಿಡ್‌-19 ಆಸ್ಪತ್ರೆಗೆ ಕಳಿಸಲಾಗಿದೆ. ಮಂಗಳವಾರ ಸೋಂಕಿತೆ ಮಹಿಳೆ ಕುಟುಂಬದ 6 ಜನರನ್ನು ಪ್ರಾಥಮಿಕ ತಪಾಸಣೆ ನಡೆಸಿ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಮಹಿಳೆಯ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಪತ್ತೆ ಕಾರ್ಯ ನಡೆದಿದೆ. 9ನೇ ವಾರ್ಡ್‌ನಲ್ಲಿ ಪುರಸಭೆ ಸಿಬ್ಬಂದಿ ಕ್ರಿಮಿನಾಶಕ ದ್ರಾವಣ ಸಿಂಪಡಿಸಿದರು.

ಪೊಲೀಸರು ಹಾಗೂ ಪುರಸಭೆ ಸಿಬ್ಬಂದಿ ವಾರ್ಡ್‌ನಲ್ಲಿನ ಹೋಟೆಲ್‌, ಅಂಗಡಿಗಳನ್ನು ಬಂದ್‌ ಮಾಡಿಸಿ, ಕರಪತ್ರ ವಿತರಿಸಿ ಕೋವಿಡ್‌ಜಾಗೃತಿ ಮೂಡಿಸಿದರು. ನಂತರ ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆ ಸಿಬ್ಬಂದಿಯೊಂದಿಗೆ ವಾರ್ಡ್‌ನಲ್ಲಿ ಸಂಚರಿಸಿ ಆರೋಗ್ಯ ಮಾಹಿತಿ ಸಂಗ್ರಹಣೆ ಮಾಡಿದರು. ಅಲ್ಲದೇ ಅಗತ್ಯ ವಸ್ತುಗಳಿಗಾಗಿ ಮೊಬೈಲ್‌ ಮೂಲಕ ದಿನಸಿ ಅಂಗಡಿಗಳ ಮಾಲೀಕರಿಗೆ ಮಾಹಿತಿ ನೀಡಬೇಕು ಎಂದರು.

ತಹಶೀಲ್ದಾರ್‌ ಕವಿತಾ ಆರ್‌., ವೈದ್ಯಾಧಿಕಾರಿ ಶಕುಂತಲಾ ಪಾಟೀಲ, ಪಿಎಸ್‌ಐ ಅವಿನಾಶ ಕಾಂಬ್ಳೆ, ಪುರಸಭೆ ಮುಖ್ಯಾಧಿಕಾರಿ ಎನ್‌. ಶಿವಲಿಂಗಪ್ಪ ಅವರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಬಸವೇಶ್ವರ ನಗರದಲ್ಲಿ 490 ಮನೆಗಳಿದ್ದು ಎಲ್ಲೆಡೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ. ಸುರಕ್ಷಿತಾ ಕ್ರಮಕ್ಕಾಗಿ ಯಾವುದೇ ಕಾರ್ಯಕ್ರಮಗಳು ಆಯೋಜಿಸದಂತೆ ಪೊಲೀಸ್‌ ಭದ್ರತೆ ಒದಗಿಸಲಾಗಿದೆ. ನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯೆ ರಸ್ತೆಯಲ್ಲಿ (ಸಿಎಂಜಿ ರೈಸ್‌ ಮಿಲ್‌ ಬಳಿ) ಬ್ಯಾರಿಕೇಡ್‌ ಅಳವಡಿಸಲಾಗಿದೆ.  ಎನ್‌. ಶಿವಲಿಂಗಪ್ಪ ಪುರಸಭೆ ಮುಖ್ಯಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next