Advertisement

Kaup: ಅ.11ರಂದು ಕಾಪು ಪಿಲಿ ಪರ್ಬ- ಸೀಸನ್ 2 ಹುಲಿವೇಷ ಕುಣಿತ ಸ್ಪರ್ಧೆ

12:52 PM Oct 07, 2024 | Team Udayavani |

ಕಾಪು: ರಕ್ಷಣಾಪುರ ಜವನೆರ್ ಕಾಪು ಸಾರಥ್ಯದಲ್ಲಿ ಕಾಪು ಪಿಲಿ ಪರ್ಬ ಹುಲಿ ವೇಷ ಕುಣಿತ ಸ್ಪರ್ಧೆಯು ಅ. 11 ರಂದು ಮಧ್ಯಾಹ್ನ 3.30 ಗಂಟೆಗೆ ಕಾಪು ಬಂಟರ ಸಂಘದ ಆವರಣದಲ್ಲಿ ಆಯೋಜಿಲಾಗಿದೆ ಎಂದು ರಕ್ಷಣಾಪುರ ಜನವನೆರ್ ಅಧ್ಯಕ್ಷ ನವೀನ್ ಎನ್‌. ಶೆಟ್ಟಿ ತಿಳಿಸಿದರು.

Advertisement

ಸೋಮವಾರ (ಅ.07) ಕಾಪು ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.

ಶ್ರೀ ಶರನ್ಮವರಾತ್ರಿ ಮಹೋತ್ಸವ ಮತ್ತು ದಸರಾ ಪ್ರಯುಕ್ತ ʼಕಾಪು ಪಿಲಿ ಪರ್ಬ – 2ʼ ನಡೆಯಲಿದ್ದು ಊರ ಪರವೂರಿನ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದರು.

ಕಾಪುವಿನ ಇತಿಹಾಸದಲ್ಲಿ ರಕ್ಷಣಾಪುರ ಜವನೆರ್ ಕೂಟ ವತಿಯಿಂದ ಎರಡನೇ ಬಾರಿ ಆಯೋಜಿಸುತ್ತಿರುವ ಸ್ಪರ್ಧೆಯಾಗಿದ್ದು ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ ತಲಾ 1 ಲಕ್ಷ ರೂ., 75 ಸಾವಿರ ರೂ., 30 ಸಾವಿರ ರೂ. ನಗದು ಬಹುಮಾನ ನೀಡಿ ಗೌರವಿಸಲಾಗುವುದು. ವಿಶೇಷ ಕರಿಹುಲಿ, ಅಕ್ಕಿಮುಡಿ ಹಾರಿಸುವುದು, ಅತ್ಯುತ್ತಮ ಹುಲಿ, ವೈಯಕ್ತಿಕ ವೇಷ ಕುಣಿತದಾರ ಮತ್ತು ಭಾಗವಹಿಸಿದ ಎಲ್ಲಾ ತಂಡಗಳಿಗೆ ಪ್ರೋತ್ಸಾಹ ಬಹುಮಾನ ನೀಡಲಾಗುವುದು ಎಂದರು.

ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳಿಗೆ ಉಚಿತ ಪ್ರವೇಶ ನೀಡಿದ್ದು ಸುಮಾರು ಹತ್ತಕ್ಕೂ ಅಧಿಕ ಹುಲಿ ವೇಷ ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ ಸಾರ್ವಜನಿಕರಿಗೆ ಮನರಂಜನೆಯ ದೃಷ್ಟಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

Advertisement

ಝೀ ಕನ್ನಡ ಡ್ರಾಮ ಜೂನಿಯರ್ಸ್ ಸೀಜನ್ 4 ವಿಜೇತೆ ಸಮೃದ್ಧಿ ಮೊಗವೀರ ತಂಡದವರಿಂದ ಯಕ್ಷ ನೃತ್ಯ ರೂಪಕ, ಕಿನ್ನಿಗೊಳಿ ಕ್ರೀವ್ಸ್ ಇನ್ ಕ್ರಿವ್ ಸ್ಟುಡಿಯೋ ಡ್ಯಾನ್ಸ್ ತಂಡದಿಂದ ನೃತ್ಯ ವೈಭವ, ಕುಣಿತ ಭಜನೆ ನಡೆಯಲಿದೆ. ವಿಶೇಷ ಆಕರ್ಷಣೆಯಾಗಿ ಕೋಸ್ಟಲ್‌ವುಡ್‌ನ ಸಿನಿ ತಾರೆಯರು, ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.

ಸಂಘಟಕರಾದ ಗಣೇಶ್ ಕೋಟ್ಯಾನ್, ಕಾರ್ತಿಕ್ ಅಮೀನ್, ರಮೀಜ್ ಹುಸೇನ್, ದೀಪಕ್ ಕುಮಾರ್ ಎರ್ಮಾಳು, ಶಾಂತಲತಾ ಶೆಟ್ಟಿ, ಆಶಾ‌ ಅಂಚನ್, ಅಶ್ವಿನಿ ನವೀನ್, ಅಖಿಲೇಶ್ ಕೋಟ್ಯಾನ್, ದೇವರಾಜ್ ಕೋಟ್ಯಾನ್, ಸುಧೀರ್ ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next