Advertisement

IFFI: ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕನ್ನಡದ ಕಾಂತಾರ.. ಇಲ್ಲಿದೆ ಸಿನಿಮಾಗಳ ಪಟ್ಟಿ

01:15 PM Oct 28, 2023 | Team Udayavani |

ನವದೆಹಲಿ: 54ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ದಿನ ನಿಗದಿಯಾಗಿದೆ. ಮಣ್ಣಿನ ಸೊಗಡಿನ ಸಿನಿಮಾಗಳು ಸೇರಿದಂತೆ ಪ್ರಾದೇಶಿಕ ಭಾಷೆಯ ಸಿನಿಮಾಗಳು ಈ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿದೆ. ಅದರಂತೆ ದಕ್ಷಿಣ ಭಾರತದ ಕೆಲ ಸೂಪರ್‌ ಹಿಟ್‌ ಹಾಗೂ ಗಮನ ಸೆಳೆದ ಸಿನಿಮಾಗಳು ಕೂಡ ಪ್ರದರ್ಶನ ಕಾಣಲಿದೆ.

Advertisement

ತಮಿಳು, ಮಲಯಾಳಂ ಮತ್ತು ಕನ್ನಡ ಸಿನಿಮಾರಂಗದಲ್ಲಿ ಗಮನ ಸೆಳೆದ ಕೆಲ ಸಿನಿಮಾಗಳು ಈ ಬಾರಿಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿದೆ. ಅದರಲ್ಲಿ ಪ್ರಮುಖವಾಗಿ ಬಾಕ್ಸ್‌ ಆಫೀಸ್‌ ನಲ್ಲಿ ಭರ್ಜರಿ ಗಳಿಕೆ ಕಂಡ, ತುಳುನಾಡಿನ ಸೊಗಡಿನ ಕಥಾಹಂದರವುಳ್ಳ ರಿಷಬ್‌ ಶೆಟ್ಟಿ ಅವರ ʼಕಾಂತಾರʼ ಸಿನಿಮಾನೂ ಇರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದೆ.

ಭಾರತೀಯ ಪನೋರಮಾ, ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (IFFI) 54ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುವ ಸಿನಿಮಾಗಳ ಪಟ್ಟಿಯನ್ನು ಇತ್ತೀಚೆಗೆ ರಿವೀಲ್‌ ಮಾಡಿದೆ. ನಾನಾ ಭಾಷೆಯ ಫೀಚರ್‌ ಹಾಗೂ ನಾನ್‌ ಫೀಚರ್‌ ಸಿನಿಮಾಗಳು ಇದರಲ್ಲಿವೆ.

ಫೀಚರ್‌ ಫಿಲ್ಮ್ಸ್‌ ಪಟ್ಟಿ..  

ಆರಾರಿರಾರೋ(ಕನ್ನಡ) – ನಿರ್ದೇಶನ – ಸಂದೀಪ್‌ ಕುಮಾರ್‌ ವಿ.

Advertisement

ಅಟ್ಟಂ (ಮಲಯಾಳಂ) – ನಿರ್ದೇಶನ – ಆನಂದ್ ಏಕರ್ಶಿ

ಅರ್ಧಾಂಗಿನಿ (ಬಂಗಾಳಿ) – ನಿರ್ದೇಶನ – ಕೌಶಿಕ್ ಗಂಗೂಲಿ

ಡೀಪ್ ಫ್ರಿಡ್ಜ್ (ಬಂಗಾಳಿ) – ನಿರ್ದೇಶನ –  ಅರ್ಜುನ್ ದತ್ತಾ

ಧೈ ಆಖರ್ (ಹಿಂದಿ)  – ನಿರ್ದೇಶನ –  ಅರೋರಾ

ಇರಟ್ಟ (ಮಲಯಾಳಂ)  – ನಿರ್ದೇಶನ –   ರೋಹಿತ್ ಎಂ.ಜಿ. ಕೃಷ್ಣ

ಕಾದಲ್ ಎನ್ಬತು ಪೋತು ಉಡಮೈ (ತಮಿಳು) – ನಿರ್ದೇಶಕ –  ಜಯಪ್ರಕಾಶ್ ರಾಧಾಕೃಷ್ಣನ್

ಕಾತಲ್ (ಮಲಯಾಳಂ) – ನಿರ್ದೇಶನ –  ಜಿಯೋ ಬೇಬಿ

ಕಾಂತಾರ (ಕನ್ನಡ) – ನಿರ್ದೇಶಕ –  ರಿಷಬ್ ಶೆಟ್ಟಿ

ಮಲಿಕಪ್ಪುರಂ (ಮಲಯಾಳಂ) – ನಿರ್ದೇಶನ – ವಿಷ್ಣು ಶಶಿ ಶಂಕರ್

ಮಂಡಳಿ (ಹಿಂದಿ) – ನಿರ್ದೇಶನ –  ರಾಕೇಶ್ ಚತುರ್ವೇದಿ

ಮಿರ್ಬೀನ್ (ಕರ್ಬಿ) – ನಿರ್ದೇಶಕ –   ಮೃದುಲ್ ಗುಪ್ತಾ

ನೀಲಾ ನೀರಾ ಸೂರಿಯನ್ (ತಮಿಳು) – ನಿರ್ದೇಶನ –  ಸಂಯುಕ್ತ

ಎನ್ನ ತಾನ್ ಕೇಸ್ ಕೊಡು (ಮಲಯಾಳಂ) – ನಿರ್ದೇಶನ –  ಬಾಲಕೃಷ್ಣ ಪೊದುವಾಲ್

ಪೂಕ್ಕಳಂ (ಮಲಯಾಳಂ) – ನಿರ್ದೇಶನ –  ಗಣೇಶ್‌ ರಾಜ್‌

ರವೀಂದ್ರ ಕಬ್ಯಾ ರಹಸ್ಯ (ಬಂಗಾಳಿ) – ನಿರ್ದೇಶನ –  ಸಯಂತನ್ ಘೋಸಲ್

ಸನಾ (ಹಿಂದಿ) – ನಿರ್ದೇಶನ –   ಸುಧಾಂಶು ಸರಿಯಾ

ದಿ ವ್ಯಾಕ್ಸಿನ್ ವಾರ್ (ಹಿಂದಿ) – ನಿರ್ದೇಶನ –  ವಿವೇಕ್ ರಂಜನ್ ಅಗ್ನಿಹೋತ್ರಿ

ವಧ್ (ಹಿಂದಿ) – ನಿರ್ದೇಶನ –   ಜಸ್ಪಾಲ್ ಸಿಂಗ್ ಸಂಧು

ವಿದುತಲೈ ಭಾಗ 1 (ತಮಿಳು) – ನಿರ್ದೇಶನ –  ವೆಟ್ರಿ ಮಾರನ್

2018 (ಮಲಯಾಳಂ) – ನಿರ್ದೇಶನ – ಜೂಡ್ ಆಂಥನಿ ಜೋಸೆಫ್

ಗುಲ್‌ಮೊಹರ್ (ಹಿಂದಿ) ) – ನಿರ್ದೇಶನ –  ರಾಹುಲ್ ವಿ ಚಿಟ್ಟೆಲ್ಲಾ

ಪೊನ್ನಿಯಿನ್ ಸೆಲ್ವನ್ ಭಾಗ – 2 (ತಮಿಳು) – ನಿರ್ದೇಶನ –  ಮಣಿರತ್ನಂ

ಸಿರ್ಫ್ ಏಕ್ ಬಂದಾ ಕಾಫಿ ಹೈ (ಹಿಂದಿ) – ನಿರ್ದೇಶನ –   ಅಪೂರ್ವ್ ಸಿಂಗ್ ಕರ್ಕಿ

ದಿ ಕೇರಳ ಸ್ಟೋರಿ (ಹಿಂದಿ) – ನಿರ್ದೇಶನ –   ಸುದೀಪ್ತೋ ಸೇನ್

ನಾನ್‌ ಫೀಚರ್‌ ಫಿಲ್ಮ್ಸ್‌ ಪಟ್ಟಿ..

1947: ಬ್ರೆಕ್ಸಿಟ್ ಇಂಡಿಯಾ (ಇಂಗ್ಲಿಷ್) – ನಿರ್ದೇಶನ –  ಸಂಜೀವನ್ ಲಾಲ್

ಆಂಡ್ರೊ ಡ್ರೀಮ್ಸ್ (ಮಣಿಪುರಿ) – ನಿರ್ದೇಶನ – ಲಾಂಗ್ಜಮ್ ಮೀನಾ ದೇವಿ

ಬಾಸನ್ (ಹಿಂದಿ) – ನಿರ್ದೇಶನ –  ಜಿತಾಂಕ್ ಸಿಂಗ್ ಗುರ್ಜಾರ್

ಬ್ಯಾಕ್ ಟು ದಿ ಫ್ಯೂಚರ್ (ಇಂಗ್ಲಿಷ್) – ನಿರ್ದೇಶನ –  ಎಂ.ಎಸ್. ಬಿಷ್ಟ್

ಬರುವಾರ್ ಕ್ಸಾಂಗ್‌ಸರ್ (ಅಸ್ಸಾಮಿ)  – ನಿರ್ದೇಶನ –  ಉತ್ಪಲ್ ಬೋರ್ಪುಜಾರಿ

ಬೆಹ್ರುಪಿಯಾ – ದಿ ಇಂಪರ್ಸನೇಟರ್ (ಹಿಂದಿ) – ನಿರ್ದೇಶನ – ಭಾಸ್ಕರ್ ವಿಶ್ವನಾಥನ್

ಭಂಗಾರ್ (ಮರಾಠಿ) – ನಿರ್ದೇಶನ – ಸುಮಿರಾ ರಾಯ್

ನಂಸೆ ನಿಲಂ ( Changing Landscape) (ತಮಿಳು) – ನಿರ್ದೇಶನ –  ಪ್ರವೀಣ್ ಸೆಲ್ವಂ

ಚುಪಿ ರೋಹ್ (ಡೋಗ್ರಿ) – ನಿರ್ದೇಶನ –  ದಿಶಾ ಭಾರದ್ವಾಜ್

ಗಿದ್ಧ್ (ದಿ ಸ್ಕ್ಯಾವೆಂಜರ್) (ಹಿಂದಿ) – ನಿರ್ದೇಶನ –  ಮನೀಶ್ ಸೈನಿ

ಕಥಾಬೋರ್ (ಅಸ್ಸಾಮಿ) – ನಿರ್ದೇಶನ –  ಕೇಶರ್ ಜ್ಯೋತಿ ದಾಸ್

ಲಚಿತ್ (ದಿ ವಾರಿಯರ್) (ಅಸ್ಸಾಮಿ) – ನಿರ್ದೇಶನ –  ಪಾರ್ಥಸಾರಥಿ ಮಹಂತ

ಲಾಸ್ಟ್‌ ಮೀಟ್ (ಮಣಿಪುರಿ) – ನಿರ್ದೇಶನ –   ವಾರಿಬಮ್ ದೋರೇಂದ್ರ ಸಿಂಗ್ ‌

ಲೈಫ್ ಇನ್ ಲೂಮ್ (ಹಿಂದಿ, ತಮಿಳು, ಅಸ್ಸಾಮಿ, ಬೆಂಗಾಲಿ, ಇಂಗ್ಲಿಷ್) – ನಿರ್ದೇಶನ –  ಎಡ್ಮಂಡ್ ರಾನ್ಸನ್

ಮೌ: ದಿ ಸ್ಪಿರಿಟ್ ಡ್ರೀಮ್ಸ್ ಆಫ್ ಚೆರಾವ್ (ಮಿಜೋ) – ನಿರ್ದೇಶನ –  ಶಿಲ್ಪಿಕಾ ಬೊರ್ಡೊಲೊಯ್

ಪ್ರದಕ್ಷಿಣ (ಮರಾಠಿ) – ನಿರ್ದೇಶನ –  ಪ್ರಥಮೇಶ್ ಮಹಾಲೆ

ಸದಾಬಹರ್ (ಕೊಂಕಣಿ) – ನಿರ್ದೇಶನ –  ಸುಯಶ್ ಕಾಮತ್

ಶ್ರೀ ರುದ್ರಂ (ಮಲಯಾಳಂ) – ನಿರ್ದೇಶನ –  ಆನಂದ ಜ್ಯೋತಿ

ದಿ ಸೀ & ಸೆವೆನ್ ವಿಲೇಜಸ್ (ಒರಿಯಾ) – ನಿರ್ದೇಶನ –  ಹಿಮಾನ್ಸು ಶೇಖರ್ ಖತುವಾ

ಉತ್ಸವಮೂರ್ತಿ (ಮರಾಠಿ) – ನಿರ್ದೇಶನ – ಅಭಿಜೀತ್ ಅರವಿಂದ್ ದಳವಿ

ಫೀಚರ್‌ ಫಿಲ್ಮ್ಸ್ ವಿಭಾಗದಲ್ಲಿ‌ ಆನಂದ್ ಏಕರ್ಶಿ ನಿರ್ದೇಶನದ “ಆಟ್ಟಂ” (ಮಲಯಾಳಂ) ಸಿನಿಮಾ ಮೊದಲು ಪ್ರದರ್ಶನ ಆಗಲಿದೆ. ಇನ್ನು ನಾನ್‌ ಫೀಚರ್‌ ವಿಭಾಗದಲ್ಲಿ ಲಾಂಗ್ಜಮ್ ಮೀನಾ ದೇವಿ ನಿರ್ದೇಶನದ “ಆಂಡ್ರೋ ಡ್ರೀಮ್ಸ್” (ಮಣಿಪುರಿ) ಪ್ರದರ್ಶನ ಕಾಣಲಿದೆ.

4ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ನವೆಂಬರ್‌ 20 ರಿಂದ 28 ರವರೆಗೆ ಗೋವಾದಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next