Advertisement

ಅಮೆರಿಕದಲ್ಲಿ ಭದ್ರತೆಗಾಗಿ ಹಿಂದುಗಳು ತಿಲಕ, ಬಿಂದಿ ಧರಿಸಬೇಕಂತೆ !

04:47 PM Feb 25, 2017 | Team Udayavani |

ಹೊಸದಿಲ್ಲಿ : ಅಮೆರಿಕದಲ್ಲಿ  ತಮ್ಮ ಭದ್ರತೆಗಾಗಿ ಹಿಂದು ಪುರುಷರು ತಿಲಕವನ್ನು  ಮತ್ತು ಹಿಂದು ಮಹಿಳೆಯರು ಬಿಂದಿಯನ್ನು  ಹಾಕಿಕೊಂಡು ತಮ್ಮ ಧಾರ್ಮಿಕ ಗುರುತನ್ನು ಬಹಿರಂಗಪಡಿಸಬೇಕು, ಹಾಗೆ ಮಾಡಿದರೆ ಅವರು ಕನ್ಸಾಸ್‌ ಗುಂಡಿನ ದಾಳಿಯಂತಹ ಪ್ರಕರಣಗಳಿಗೆ ಬಲಿಯಾಗುವುದನ್ನು ತಪ್ಪಿಸಬಹುದಾಗಿದೆ ಎಂದು ಹೇಳುವ ಮೂಲಕ ಹಿಂದು ಸಮಿತಿ ಅಧ್ಯಕ್ಷ ತಪನ್‌ ಘೋಷ್‌ ದೊಡ್ಡ ವಿವಾದವನ್ನೇ ಸೃಷ್ಟಿಸಿದ್ದಾರೆ. 

Advertisement

ಅಮೆರಿಕದ ಕನ್ಸಾನ್‌ನ ಒಲಾಥೆಯಲ್ಲಿ  ಕಳೆದ ಬುಧವಾರ ರಾತ್ರಿ ಜನಾಂಗೀಯ ದ್ವೇಷದಲ್ಲಿ ನಡೆದಿದ್ದ ಗುಂಡಿನ ದಾಳಿಗೆ ಓರ್ವ ಭಾರತೀಯ ಇಂಜಿನಿಯರ್‌ ಬಲಿಯಾಗಿ ಇನ್ನಿಬ್ಬರು ಗಾಯಗೊಂಡ ಹಿನ್ನೆಲೆಯಲ್ಲಿ ತಪನ್‌ ಘೋಷ್‌ ಈ ಹೇಳಿಕೆ ನೀಡಿದ್ದಾರೆ.

ಕನ್ಸಾಸ್‌ ಗುಂಡಿನ ದಾಳಿಯ ಹಿನ್ನೆಲೆಯಲ್ಲಿ ಅಮೆರಿಕದಲ್ಲೀಗ ಭಾರತೀಯರಿಗೆ ಪ್ರಾಣ ಭಯ ಎದುರಾಗಿರುವ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅಂತೆಯೇ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ವಿವಾದಾತ್ಮಕ ವಲಸೆ ನೀತಿ, ಹಾಗೂ ಅಮೆರಿಕವೇ ಮೊದಲು ಎಂಬ ನಿಲುವು ಕೂಡ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಅಮೆರಿಕದಲ್ಲಿ ಭಾರತೀಯರು, ವಿಶೇಷವಾಗಿ ಹಿಂದುಗಳು ತಮ್ಮ ಧಾರ್ಮಿಕ ಅಸ್ಮಿತೆ, ಗುರುತನ್ನು ಇತರರಿಗೆ ಕಾಣುವಂತೆ, ಬಿಂದಿ-ತಿಲಕ ಧರಿಸಿಕೊಂಡರೆ ಅಪಾಯವಿಲ್ಲ ಎಂದು ತಪನ್‌ ಘೋಷ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next