Advertisement

ಕನ್ನಡ ಧಾರಾವಾಹಿ ಕಟೀಲು ಶ್ರೀದೇವಿ ಚರಿತೆಗೆ ಕಟೀಲಿನಲ್ಲಿ ಮುಹೂರ್ತ

03:45 AM Jul 07, 2017 | |

ಕಾರ್ಕಳ: ಚೆಲ್ಲಡ್ಕ ಚಂದ್ರಹಾಸ್‌ ಆಳ್ವರವರ ನಿರ್ದೇಶನದ ಮಹೋನ್ನತ ಪೌರಾಣಿಕ ಕನ್ನಡ-ತುಳು ಧಾರಾವಾಹಿ ಕಟೀಲು ಶ್ರೀ ದೇವಿ ಚರಿತೆಗೆ ಜು. 5ರಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ  ಚಾಲನೆ ನೀಡಲಾಯಿತು.

Advertisement

ಚೆಲ್ಲಡ್ಕ ದಡ್ಡಂಗಡಿ ಭವಾನಿ ಕ್ರಿಯೇಶನ್ಸ್‌ ನಿರ್ಮಾಣದ ಧಾರಾವಾಹಿ ಕಟೀಲು ಶ್ರೀ ದೇವಿ ಚರಿತೆಯಲ್ಲಿ ದಡ್ಡಂಗಡಿ ಚೆಲ್ಲಡ್ಕ ರಾಧಾಕೃಷ್ಣ ಶೆಟ್ಟಿ, ದಡ್ಡಂಗಡಿ ಚೆಲ್ಲಡ್ಕ ಪ್ರಕಾಶ್‌ ಶೆಟ್ಟಿ ಮತ್ತು ಚೆಲ್ಲಡ್ಕ ಚಂದ್ರಹಾಸ ಆಳ್ವರವರ ನಿರ್ಮಾಣದಲ್ಲಿ ಸಹ ನಿರ್ಮಾಪಕ ಹಾಗೂ ಪ್ರೊಡಕ್ಷನ್‌ ಕಂಟ್ರೋಲರ್‌ ಆಗಿ ಪ್ರೇಮನಾಥ ಶೆಟ್ಟಿ ಕಾಣಿಸಿಕೊಳ್ಳಲಿದ್ದು, ಅಂತಾರಾಷ್ಟ್ರೀಯ ಕ್ರೀಡಾಪಟು ರೋಹಿತ್‌ ಕುಮಾರ್‌ ಕಟೀಲ್‌ ವಿಶೇಷ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಒಡಿಯೂರು ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನದೊಂದಿಗೆ ಕ್ಯಾಮರಾ ಚಾಲನೆ ನೀಡಿದರು. 
ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಕ್ಲಾಪ್‌ ನೆರವೇರಿಸಿದರು.
 
ಕೊಂಡೆವೂರು ಯೋಗಾನಂದ ಸರಸ್ವತಿ ಸ್ವಾಮೀಜಿ ದೀಪ ಪ್ರಜ್ವಲಿಸಿ, ಕಟೀಲು ಕ್ಷೇತ್ರದ ಆನುವಂಶಿಕ ಮೊಕ್ತೇಸರ ಮತ್ತು ಆನುವಂಶಿಕ ಅರ್ಚಕ ಕೆ. ವಾಸುದೇವ ಆಸ್ರಣ್ಣ ಶುಭಾಶಂಸನೆ ನೀಡಿದರು. 

ಈ ಸಂದರ್ಭದಲ್ಲಿ ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕರಾದ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ, ಕೆ. ವೆಂಕಟರಮಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ, ಹರಿನಾರಾಯಣ ದಾಸ ಆಸ್ರಣ್ಣ, ಕಟೀಲು ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಕೊಡೆತ್ತೂರುಗುತ್ತು ಕೆ. ಸನತ್‌ ಕುಮಾರ್‌ ಶೆಟ್ಟಿ, ಕೇಪು ಉಳ್ಳಾಲ್ತಿ ದೇವಸ್ಥಾನದ ಪ್ರಧಾನ ಅರ್ಚಕ ಸೂರ್ಯನಾರಾಯಣ ಕೇಕುಣ್ಣಾಯ ಮೊದಲಾದವರು ಉಪಸ್ಥಿತರಿದ್ದರು.

ಕಟೀಲು ಶ್ರೀದುರ್ಗಾಸರಸ್ವತಿ ಶಾಲಾ ಸಭಾಭವನದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭವಾನಿ ಶಿಪ್ಪಿಂಗ್‌ ಸರ್ವಿಸಸ್‌(ಇಂಡಿಯಾ ಪ್ರೈ.ಲಿ.)ನ ಚೆಲ್ಲಡ್ಕ ಕುಸುಮೋದರ ಡಿ. ಶೆಟ್ಟಿ ವಹಿಸಿದ್ದರು. ಶಾಸಕ ಅಭಯಚಂದ್ರ ಜೈನ್‌, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರಭಾಕರ ಎಲ್‌.ಶೆಟ್ಟಿ, ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ, ಡಾ| ಸುರೇಶ್‌ ರಾವ್‌,  ಸತೀಶ್‌ ಶೆಟ್ಟಿ ಪಟ್ಲ, ಖ್ಯಾತ ಹಿರಿಯ ಸಾಹಿತಿ ಶಿಮಂತೂರು ನಾರಾಯಣ ಶೆಟ್ಟಿ, ಧರ್ಮಪಾಲ ದೇವಾಡಿಗ, ಕೋಟಿ ಚೆನ್ನಯ ಧಾರಾವಾಹಿಯ ನಿರ್ಮಾಪಕ ಅಶೋಕ್‌ ಎಂ. ಸುವರ್ಣ, ಮುಂಡ್ಕೂರು ಸುಧಾಕರ ಶೆಟ್ಟಿ, ಮಹಾರಾಷ್ಟ್ರ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಕಾರ್ಯಾಧ್ಯಕ್ಷೆ ಗೀತಾ ಬಿ. ಶೆಟ್ಟಿ, ಅಂತರಾಷ್ಟ್ರೀಯ ಕ್ರೀಡಾಪಟು ರೋಹಿತ್‌  ಕುಮಾರ್‌ ಕಟೀಲು, ರಾಜಶೇಖರ ಶೆಟ್ಟಿ ಅಳಿಕೆ,  ಪತ್ರಕರ್ತ ಜಗನ್ನಾಥ ಶೆಟ್ಟಿ  ಬಾಳ, ಸಾಹಿತಿ ಡಾ| ರಾಘವೇಂದ್ರ ರಾವ್‌ ಉಡುಪಿ, ಡಾ| ರಾಜೇಶ್‌, ಅರುವ ಕೊರಗಪ್ಪ ಶೆಟ್ಟಿ, ಸರಪಾಡಿ ಅಶೋಕ ಶೆಟ್ಟಿ, ಜಯಶಂಕರ ಶೆಟ್ಟಿ, ಸುಲೋಚನಾ ಭಟ್‌, ಕೆ. ಸಿ. ಪಾಟೀಲ್‌, ಶೆಡ್ಡೆ ಮಂಜುನಾಥ ಭಂಡಾರಿ, ಮೊದಲಾದವರು ಉಪಸ್ಥಿತರಿದ್ದರು. 

Advertisement

ರಾಧಾಕೃಷ್ಣ ಶೆಟ್ಟಿ  ಚೆಲ್ಲಡ್ಕ ಸ್ವಾಗತಿಸಿದರು. ನಿರ್ಮಾಪಕ ಚಂದ್ರಹಾಸ ಆಳ್ವ ಪ್ರಸ್ತಾವನೆಗೈದರು. ಕಥಾ ಲೇಖಕ ಡಾ| ರಾಘವೇಂದ್ರ ರಾವ್‌ ಕಥೆಯ ಬಗ್ಗೆ  ವಿವರ ತಿಳಿಸಿದರು.  ಬಂಟರವಾಣಿ ಗೌರವ ಸಂಪಾದಕ ಅಶೋಕ ಪಕ್ಕಳ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next