Advertisement

ಕನ್ನಡ ಅಭಿವೃದ್ಧಿ ಅಧಿಕಾರ ಪರಿಷತ್ತಿಗೆ ನೀಡಲಿ: ಬೈರಪ್ಪ

12:00 AM Oct 13, 2022 | Team Udayavani |

ಬೆಂಗಳೂರು: ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಹಾಗೂ ಅನುಷ್ಠಾನ ಅಧಿಕಾರವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರಿಗೆ ನೀಡಬೇಕು. ರಾಜ್ಯದಲ್ಲಿ ಬಹುತೇಕ ಕನ್ನಡೇತರರೇ ಅಧಿಕಾರಿಗಳಿಗೆ ಇರುವುದರಿಂದ ಕಾನೂನು ನಿರ್ಣಯ ಅಧಿಕಾರವನ್ನು ಅಧಿಕಾರಿಗಳಿಗೆ ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹಿರಿಯ ಸಾಹಿತಿ ಡಾ| ಎಸ್‌.ಎಲ್‌. ಭೈರಪ್ಪ ಹೇಳಿದರು.

Advertisement

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ-2022′ ಕುರಿತು ಹಮ್ಮಿ ಕೊಂಡಿದ್ದ ಚಿಂತನಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಅನುಷ್ಠಾನ ವಿಚಾರವಾಗಿ ಸಾಹಿತ್ಯ ಪರಿಷತ್ತು ಈ ವರೆಗೆ ಹಲವಾರು ಕಾನೂನುಗಳನ್ನು ಜಾರಿಗೊಳಿಸಿದೆ. ಅನುಷ್ಠಾನ ವಿಚಾರವಾಗಿ ಅಧಿಕಾರಿಗಳು ನಿರ್ಣಯ ಕೈಗೊಳ್ಳ ದಿರುವುದರಿಂದ ಪ್ರಯೋಜನ ವಾಗುತ್ತಿಲ್ಲ ಎಂದು ಹೇಳಿದರು.

ಸರಕಾರದಿಂದ ನೇಮಕವಾದವರು ಸರಕಾರದ ಪರ ಕೆಲಸ ಮಾಡು ತ್ತಾರೆಯೇ ವಿನಾ ಕನ್ನಡಪರ ಕೆಲಸ ಮಾಡುವುದಿಲ್ಲ. ಆದ್ದರಿಂದ ಜನರಿಂದ ನೇಮಕವಾದವರಿಗೆ ಕನ್ನಡ ಅನುಷ್ಠಾನ ಅಧಿಕಾರ ನೀಡಿದರೆ ಕಾನೂನುಗಳು ಫ‌ಲಕಾರಿಯಾಗಲಿವೆ ಎಂದರು.

ಪ್ರಸ್ತುತ ಸರಕಾರ ಪ್ರಕಟಿಸಿರುವ ಮಸೂದೆ ಕೂಡ ತುಂಬಾ ಗೋಜಲಿನಿಂದ ಕೂಡಿದೆ. ಸಾಹಿತ್ಯ ಪರಿಷತ್ತಿನಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುವುದು ಒಳ್ಳೆಯದು ಎಂದು ಸಲಹೆ ನೀಡಿದರು.

ಮಾಜಿ ಸಚಿವ ಎಚ್‌. ಕೆ. ಪಾಟೀಲ್‌ ಮಾತನಾಡಿ, ಸರಕಾರದ ಕೊನೇ ಅವಧಿಯಲ್ಲಿ ವಿಧೇಯಕ ಮಂಡನೆ ಮಾಡುವ ಬದಲಾಗಿ ಆರಂಭದಲ್ಲೇ ಇಂತಹ ಮಸೂದೆಗಳನ್ನು ಮಂಡಿಸ ಬೇಕು. ಇದಕ್ಕೆ ಸಂಬಂಧಿಸಿ ಸದನ ಸಮಿತಿ ರಚಿಸಿ ಕಸಾಪ ಕೇಂದ್ರ ಘಟಕ, ಜಿಲ್ಲಾ ಮತ್ತು ತಾಲೂಕು ಘಟಕಗಳು, ಸಾರ್ವಜನಿಕರೊಂದಿಗೆ ಮುಕ್ತವಾಗಿ ಚರ್ಚಿಸಿದ ಬಳಿಕ ಮಸೂದೆ ಮಂಡನೆ ಮಾಡುವುದು ಒಳ್ಳೆಯದು ಎಂದು ಸಲಹೆ ನೀಡಿದರು.

Advertisement

ಕನ್ನಡಪರ ಹೋರಾಟಗಾರ ಸಾ.ರಾ. ಗೋವಿಂದ್‌, ಕಾನೂನು ತಜ್ಞ ಅಶೋಕ್‌ ಹಾರನಹಳ್ಳಿ, ಬೇಲಿಮಠದ ಪೀಠಾಧ್ಯಕ್ಷರಾದ ಶಿವರುದ್ರ ಸ್ವಾಮೀಜಿ, ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಹಿರಿಯ ಸಾಹಿತಿಗಳಾದ ಚಂದ್ರಶೇಖರ ಕಂಬಾರ, ದೊಡ್ಡರಂಗೇಗೌಡ, ಕಸಾಪ ಅಧ್ಯಕ್ಷ ಮಹೇಶ್‌ ಜೋಷಿ, ಭಾಷಾ ತಜ್ಞರಾದ ಡಾ| ಪ್ರಧಾನ್‌ ಗುರುದತ್ತ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌. ನಾಗಾಭರಣ ಸಹಿತ ಹಲವರು ಪಾಲ್ಗೊಂಡಿದ್ದರು.

ಕನ್ನಡವನ್ನು ಸೂಕ್ತವಾಗಿ ಬಳಸುವ ನಿಟ್ಟಿನಲ್ಲಿ ಮಸೂದೆ ತರಲಾಗಿದೆ. ಅದನ್ನು ಯಾವ ರೀತಿಯಲ್ಲಿ ಬದಲಾವಣೆಗಳು ಆಗಬೇಕು ಎನ್ನುವು ದನ್ನು ತಜ್ಞರು ಚರ್ಚಿಸಿದರೆ ಸರಕಾರ ಅದನ್ನು ಸ್ವಾಗತಿಸಲಿದೆ. ಕಾನೂನು ಮಾಡುವ ವೇಳೆ ಎಲ್ಲ ಆಯಾಮಗಳಲ್ಲಿ ಗಮನಿಸಿ ಮುಂದಿನ ಕ್ರಮ ಕೈ ಗೊಳ್ಳಲಿದೆ.
– ಜೆ.ಸಿ. ಮಾಧುಸ್ವಾಮಿ, ಕಾನೂನು ಸಚಿವ

Advertisement

Udayavani is now on Telegram. Click here to join our channel and stay updated with the latest news.

Next