Advertisement

ಕನ್ನಡ ಭಾಷೆ ಉದ್ಯೋಗ ಮಾಧ್ಯಮವೂ ಆಗಲಿ 

12:19 PM Nov 02, 2021 | Team Udayavani |

ಚನ್ನಗಿರಿ: ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆ ಕಣ್ಮರೆಯಾಗುತ್ತಿದೆ ಎಂಬ ಆತಂಕವಿದ್ದರೂ, ಸಾಮಾಜಿಕ ಜಾಲತಾಣದಲ್ಲಿ ಭಾಷೆಯಬೆಳವಣಿಗೆ ಆಶಾದಾಯಕವಾಗಿದೆ. ಇದರ ಜೊತೆಗೆ ಮುಚ್ಚುತ್ತಿರುವ ಸರ್ಕಾರಿ ಶಾಲೆಗಳರಕ್ಷಣೆ ಬಗ್ಗೆ ಸರ್ಕಾರ ಗಮನ ಹರಿಸಬೇಕು. ಶಿಕ್ಷಣದ ಜೊತೆಗೆ ಉದ್ಯೋಗದ ಮಾಧ್ಯಮವಾಗಿ ಕನ್ನಡವನ್ನು ರೂಪಿಸಬೇಕು ಎಂದು ಪುರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ಹೇಳಿದರು.

Advertisement

ಕನದನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಬ್ರಾಹ್ಮಿ ಲಿಪಿಯಿಂದರೂಪುಗೊಂಡ ಕನ್ನಡ ಭಾಷೆ ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿದೆ. ಸ್ವತಂತ್ರ ಭಾರತದಲ್ಲಿ ಕನ್ನಡ ಭಾಷೆ ಸಾಹಿತ್ಯ ಚಳವಳಿಯಾಗಿ ರೂಪುಗೊಂಡಿತು. ಅದಕ್ಕೆ ಸಾಹಿತಿಗಳು ಹಾಗೂ ಕನ್ನಡ ಪುರೋಹಿತರ ಕೊಡುಗೆ ಸ್ಮರಣೀಯ ಎಂದರು.

ಕನ್ನಡ ಶಕ್ತಿಯುತ ಭಾಷೆಯಾಗಿದ್ದು, ಭಾಷೆ ಬೆಳೆಯಲು ಕನ್ನಡದಲ್ಲಿ ಹೊಸ ಚಿಂತನೆಗಳನ್ನು ಹುಟ್ಟು ಹಾಕಬೇಕಿದೆ. ತತ್ವಶಾಸ್ತ್ರ, ವಿಜ್ಞಾನ, ಭೌತಶಾಸ್ತ್ರ ಸೇರಿದಂತೆ ಯಾವುದೇ ವಿಚಾರವಾಗಿ ಹೊಸ ಚಿಂತನೆಗಳನ್ನು ಕನ್ನಡದಲ್ಲಿ ಹುಟ್ಟು ಹಾಕಿದರೆ ವಿಶ್ವ ನಮ್ಮ ಭಾಷೆ ಕಲಿಯಲು ಒಲವು ತೋರುತ್ತದೆ. ಈ ನಿಟ್ಟಿನಲ್ಲಿ ಸಾಹಿತಿಗಳು, ವಿಜ್ಞಾನಿಗಳು, ಲೇಖಕರು ಚಿಂತನೆ ನಡೆಸಬೇಕೆಂದು ಸಲಹೆ ನೀಡಿದರು.

ತಹಶೀಲ್ದಾರ್‌ ಪಟ್ಟರಾಜ ಗೌಡ ಮಾತನಾಡಿ,ದ್ರಾವಿಡ ಭಾಷೆಗಳಲ್ಲಿ ಕನ್ನಡ ಭಾಷೆ ಮಹತ್ವದ ಸ್ಥಾನಹೊಂದಿದೆ. ಅಲ್ಲದೆ ಜಗತ್ತಿನ ಅತ್ಯಂತ ಶ್ರೀಮಂತ ಭಾಷೆಯಾಗಿದೆ. ಜಗತ್ತಿನ ಯಾವ ಭಾಷೆಯಲ್ಲಿಯೂಇಷ್ಟೊಂದು ವಿಪುಲವಾದ ಸಾಹಿತ್ಯಿಕ ಕೃಷಿ ಆಗಿಲ್ಲ ಎಂದರು.

ಪುರಸಭೆ ಸದಸ್ಯ ಚಿಕ್ಕಣ್ಣ, ಮುಖ್ಯಾಧಿಕಾರಿ ಬಸವರಾಜ್‌, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್‌, ತಾಪಂ ಇಒ ಎಂ.ಆರ್‌. ಪ್ರಕಾಶ್‌ ಮೊದಲಾದವರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next