Advertisement

ಬಿಸ್ಲೇರಿ ನೀರಿನ ಬಾಟಲ್‌ಗ‌ಳ ಮೇಲೆ ಕನ್ನಡ ಲೇಬಲ್‌

03:01 PM Dec 02, 2017 | |

ಬೆಂಗಳೂರು: ಪ್ರದೇಶವಾರು ಗ್ರಾಹಕರನ್ನು ಗಮನದಲ್ಲಿರಿಸಿಕೊಂಡು ಬಿಸ್ಲೇರಿ ಮಿನರಲ್‌ ವಾಟರ್‌ಗಳ ಬಾಟಲಿಗಳ ಮೇಲೆ ಕನ್ನಡ ಲೇಬಲ್‌ಗ‌ಳನ್ನು ಅಳವಡಿಸಲು ನಿರ್ಧರಿಸಿರುವುದಾಗಿ ಬಿಸ್ಲೇರಿ ಇಂಟರ್‌ನ್ಯಾಷನಲ್‌ ಪ್ರೈ, ಲಿನ ಮಾರುಕಟ್ಟೆ ವಿಭಾಗದ ನಿರ್ದೇಶಕರಾಗಿರುವ ಅಂಜನಾ ಘೋಷ್‌ ತಿಳಿಸಿದ್ದಾರೆ. 

Advertisement

ಸ್ಥಳೀಯ ಗ್ರಾಹಕರೊಂದಿಗೆ ನಿಕಟ ಸಂಪರ್ಕ ಹೊಂದುವುದು ಈ ಬದಲಾವಣೆಯ ಉದ್ದೇಶವಾಗಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಕನ್ನಡ ಹಾಗೂ ಇಂಗ್ಲಿಷ್‌ ಎರಡೂ ಭಾಷೆಗಳಲ್ಲಿ “ಬಿಸ್ಲೇರಿ’ ಎಂದು ಬರೆದಿರುವ ಲೇಬಲ್‌ಗ‌ಳು ನೀರಿನ ಬಾಟಲಿಗಳ ಮೇಲೆ ಇರಲಿವೆ. ಈ ಮೂಲಕ ಗ್ರಾಹಕರು ನಿಜವಾದ ಬಿಸ್ಲೇರಿ ಬ್ರಾಂಡ್‌ನ‌ ನೀರಿನ ಬಾಟಲ್‌ಗ‌ಳನ್ನು ಸುಲಭವಾಗಿ ಗುರುತಿಸಲು ಮತ್ತು ನಕಲಿ ಬ್ರಾಂಡ್‌ಗಳಿಂದ ದೂರ ಉಳಿಯಲು ಕನ್ನಡ ಲೇಬಲ್‌ಗ‌ಳು ನೆರವಾಗಲಿದೆ ಎಂದರು.

ಇದೇ ಮೊದಲ ಬಾರಿ ಬಿಸ್ಲೇರಿ ಭಾರತದಾದ್ಯಂತ ಆಯಾ ರಾಜ್ಯಗಳಲ್ಲಿ ಮಾತನಾಡುವ ಭಾಷೆಯಲ್ಲೇ ಲೇಬಲ್‌ ಮುದ್ರಿಸಲು ಮುಂದಾಗಿದೆ. ಅದರಂತೆ ಕರ್ನಾಟಕದಲ್ಲಿ ಕನ್ನಡ, ಕೇರಳದಲ್ಲಿ ಮಲಯಾಳಂ, ತುಳುನಾಡಿನಲ್ಲಿ ತಮಿಳು, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ತೆಲುಗು ಭಾಷೆಯ ಲೇಬಲ್‌ಗ‌ಳು ಇರಲಿವೆ.

Advertisement

Udayavani is now on Telegram. Click here to join our channel and stay updated with the latest news.

Next