Advertisement
ಫೆ. 13 ರಂದು ಸಾಂತಾಕ್ರೂಜ್ ಪೂರ್ವದ ಕಲೀನ ಕ್ಯಾಂಪಸ್‌ನ ರಾನಡೆ ಭವನದ ಕನ್ನಡ ವಿಭಾಗದಲ್ಲಿ ಮುಂಬಯಿ ವಿವಿ ಕನ್ನಡ ವಿಭಾಗ ಹಾಗೂ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಯುಕ್ತ ಆಶ್ರಯದಲ್ಲಿ ವಿಶ್ವ ರೇಡಿಯೋ ದಿನಾಚರಣೆ ಪ್ರಯುಕ್ತ “ಸಮೂಹ ಮಾಧ್ಯಮ ವರ್ತಮಾನದ ತಲ್ಲಣಗಳು’ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಅವರು, ಮುಂಬಯಿ ವಿವಿ ಕನ್ನಡ ವಿಭಾಗದಲ್ಲಿ ಕನ್ನಡಾಂಬೆಯ ವಿಶೇಷ ಕೆಲಸಗಳು ನಡೆಯುತ್ತದೆ. ಆದುದರಿಂದ ಇಲ್ಲಿನ ಈ ವೇದಿಕೆ ನನ್ನ ಪಾಲಿನ ಗೌರವವಾಗಿದೆ. ಭಾವನಾತ್ಮಕ ಸಂಬಂಧಕ್ಕೆ ಇದು ಅವಕಾಶವಾಗಿದೆ. ಇಂದು ಕನ್ನಡದ ವಿಷಯ, ಕಾರ್ಯಕ್ರಮ ಇತ್ಯಾದಿಗಳ ದಾಖಲೀಕರಣದ ಕೊರತೆ ಇದೆ. ಜೀವನದ ಅವಿಭಾಜ್ಯ ಅಂಗಗಳಾಗಿರುವ ಚಾನೆಲ್‌ಗಳಾಗಲೀ ಇತರ ಮಾಧ್ಯಮಗಳಾಗಲೀ ನೀತಿತತ್ವ ಮೀರಿ ನಡೆಯಬಾರದು. ಮಾಧ್ಯಮಗಳು ವ್ಯಕ್ತಿಕ್ಕಿಂತ ಅಭಿವ್ಯಕ್ತಿ ಪೂರಕವಾಗಬೇಕು. ಪತ್ರಕರ್ತರು ಭಾವನೆಗಳನ್ನು ತಿಳಿಸಬೇಕೇ ಹೊರತು ತಲ್ಲಣ ಗಳಾಗಬಾರದು. ಇಂದು ವಿಶ್ವದಾದ್ಯಂತ ಪ್ರಜ್ಞಾವಂತ ವೀಕ್ಷಕರಿದ್ದ ಕಾರಣ ಸತ್ಯಾಸತ್ಯತೆ, ವಸ್ತುನಿಷ್ಠೆಗೆ ಮಾಧ್ಯಮಗಳು ಪ್ರಾಧಾನ್ಯ ನೀಡುವ ಪ್ರಯತ್ನ ನಡೆಯಬೇಕಾಗಿದೆ. ಅದರ ಬದಲು ಇಲ್ಲಿನ ಮಾಧ್ಯಮಗಳು ಬರೇ ರಾಜಕೀಯಕ್ಕೆ ಒತ್ತುನೀಡಿ ಕಾಲಹರಣ ಮಾಡುವುದು ಸರಿಯಲ್ಲ. ಬದಲಾಗಿ ಪ್ರಗತಿಪರ ಚಿಂತನೆಗಳಿಗೆ ಮಾಧ್ಯಮ ಗಳು ಸ್ಪಂದಿಸಿದಾಗ ತಲ್ಲಣಗಳು ದೂರವಾಗಲಿದೆ. ಪತ್ರಕರ್ತರು ವಚನಬದ್ಧತೆ ಮೈಗೂಡಿಸಿ ಕೊಂಡಾಗ ತಲ್ಲಣಮುಕ್ತತೆ ಸಾಧ್ಯವಾಗಬಹುದು. ಇಂದಿನ ಪತ್ರಕರ್ತರಲ್ಲಿ ಅಧ್ಯಯನದ ಕೊರತೆ ಇದೆ. ಕನಿಷ್ಠ ಸಾಮಾನ್ಯ ಜ್ಞಾನದ ಅರಿವು ಪತ್ರಕರ್ತರಲ್ಲಿದ್ದಾಗ ಫಲಪ್ರದ ವರದಿಗಳ ಮುಖೇನ ಸಮಾಜವನ್ನು ಕಟ್ಟಲು ಸಾಧ್ಯ. ಪರಿಶ್ರಮ ತಾಳ್ಮೆ, ಅಧ್ಯಯನ ಇಲ್ಲದ ಪತ್ರಕರ್ತರಿಂದ ಏನೂ ಅಪೇಕ್ಷೆಪಡುವಂತಿಲ್ಲ ಮಾಧ್ಯಮ ಗಳು ಕೆರಳಿಸುವ ಅಲ್ಲ, ಅರಳಿಸುವ ಕೆಲಸ ಮಾಡಿಬಲಿಷ್ಠ ರಾಷ್ಟ್ರ ನಿರ್ಮಾಣದ ಅಡಿಪಾಯ ಗಳಾಗಬೇಕು ಎಂದು ನುಡಿದರು.
ಡಾ| ಸದಾನಂದ ಪೆರ್ಲ ಅವರನ್ನು ಡಾ| ಜಿ. ಎನ್. ಉಪಾಧ್ಯ ಅವರು ಶಾಲು ಹೊದೆಸಿ, ಸ್ವರ್ಣ ಪದಕವನ್ನಿತ್ತು ಕನ್ನಡಿಗರ ಪರವಾಗಿ ಗೌರವಿಸಿ ಅಭಿವಂದಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಸಂಘಟಕ ಎಚ್. ಬಿ. ಎಲ್. ರಾವ್, ಪತ್ರಕರ್ತರ ಸಂಘದ ಸಲಹಾ ಸಮಿತಿ ಸದಸ್ಯೆ ಡಾ| ಸುನೀತಾ ಎಂ. ಶೆಟ್ಟಿ, ಅನಿತಾ ಪೂಜಾರಿ ತಾಕೋಡೆ, ಜಯರಾಮ ಎಚ್. ಪೂಜಾರಿ, ಕನ್ನಡ ವಿಭಾಗದ ರಮಾ ಉಡುಪ, ಮಧುಸೂದನ ರಾವ್, ಶಿವರಾಜ್ ಕೆ. ಎಸ್., ಸುರೇಖಾ ಸುಂದರೇಶ್ ದೇವಾಡಿಗ, ಯಜ್ಞನಾರಾಯಣ, ಕುಮುದಾ ಆಳ್ವ, ಗಣಪತಿ ಕೆ. ಮೊಗವೀರ, ಶೈಲಜಾ ಹೆಗಡೆ, ಹೇಮಾ ಸದಾನಂದ್ ಅಮೀನ್, ಅನಿತಾ ಎಸ್. ಶೆಟ್ಟಿ, ಗೀತಾ ಆರ್. ಎಸ್. ಮತ್ತಿತರರು ಉಪಸ್ಥಿತರಿದ್ದು ಸಂವಾದದಲ್ಲಿ ಪಾಲ್ಗೊಂಡರು.
ಮುಂಬಯಿ ಆಕಾಶವಾಣಿ ಕನ್ನಡ ವಿಭಾಗದ ಕಾರ್ಯಕ್ರಮ ನಿರ್ವಾಹಕಿ ಸುಶೀಲಾ ಎಸ್. ದೇವಾಡಿಗ ಸ್ವಾಗತಗೀತೆ ಹಾಡಿದರು. ಪತ್ರಕರ್ತರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ಸ್ವಾಗತಿಸಿದರು. ಕನ್ನಡ ವಿಭಾಗದ ಸಹಾಯಕಿ ಡಾ| ಪೂರ್ಣಿಮಾ ಎಸ್. ಶೆಟ್ಟಿ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿ, ಕಾರ್ಯಕ್ರಮ ನಿರ್ವಹಿಸಿದರು. ಪತ್ರಕರ್ತರ ಭವನ ಸಮಿತಿಯ ಕಾರ್ಯಾಧ್ಯಕ್ಷ ಡಾ| ಶಿವ ಎಂ. ಮೂಡಿಗೆರೆ ವಂದಿಸಿದರು. ಪ್ರಚಾರದಲ್ಲಿರುವ ಜನರೇ ಬಹಳ ತಲ್ಲಣದಲ್ಲಿ ಇದ್ದಾರೆ. ಇವತ್ತಿನ ಮಾನವ ಜೀವನವೇ ತಲ್ಲಣದಾಯಕವಾಗಿದ್ದು, ತಲ್ಲಣವಿಲ್ಲದ ಜನಜೀವನ ಶೂನ್ಯವಾಗಿರುತ್ತದೆ. ಸಂಶೋಧಕರು ಹುಡುಕಾಡಿ ಕಲೆ ಹಾಕುತ್ತಾ ಶೋಧನೆ ಮಾಡಬೇಕೇ ಹೊರತು ಮತ್ತೂಬ್ಬರನ್ನು ಅನುಕರಿಸಿ ಸಂಶೋಧನೆ ಮಾಡಕೂಡದು. ಕಾಡಿನ ಮರದಂತಿದ್ದು ವಸ್ತುನಿಷ್ಠೆ, ಭಿನ್ನತೆಗಳ ಬಗ್ಗೆ ಅರಿವು ಹೊಂದುವ ಅಗತ್ಯ ಸಂಶೋಧಕರಿಗಿದೆ. ಆಳವಾದ ಶೋಧನೆಯಿಂದ ಸತ್ಯವೂ, ಸತ್ಯದಿಂದ ಸಂತೋಷವೂ, ಸಂತೋಷದಿಂದ ಸಂಶೋಧನಾ ಫಲಪ್ರದವಾದಾಗ ಆತ್ಮ ಸಂತೋಷವಾಗುವುದು. ಇಂತಹ ಸಂಶೋಧನೆಗಳೇ ಅಮೂಲ್ಯವಾಗಿರುತ್ತದೆ
– ಬಾಬು ಶಿವ ಪೂಜಾರಿ (ಸಂಪಾದಕರು: ಗುರುತು ಮಾಸಿಕ).
Related Articles
– ಡಾ| ಜಿ. ಎನ್. ಉಪಾಧ್ಯ (ಮುಖ್ಯಸœರು: ಕನ್ನಡ ವಿಭಾಗ ಮುಂಬಯಿ ವಿವಿ).
Advertisement