Advertisement

Mangaluru: ವೆನ್ಲಾಕ್ ಆಸ್ಪತ್ರೆ ಹೊರರೋಗಿ ವಿಭಾಗ ವಿಸ್ತರಣೆ

03:01 PM Nov 28, 2024 | Team Udayavani |

ಮಹಾನಗರ: ಕರಾವಳಿ ಸಹಿತ ಸುತ್ತಮುತ್ತಲಿನ ಜಿಲ್ಲೆಗಳ ರೋಗಿ ಗಳಿಗೆ ಉಚಿತ ವೈದ್ಯಕೀಯ ಸೇವೆ ನೀಡುತ್ತಿರುವ ವೆನ್ಲಾಕ್ ಜಿಲ್ಲಾಸ್ಪತ್ರೆಯ ಹೊರ ರೋಗಿ ವಿಭಾಗ (ಒಪಿಡಿ) ವಿಸ್ತರಣೆಗೆ ನಿರ್ಧರಿಸಲಾಗಿದೆ.

Advertisement

ವೆನ್ಲಾಕ್ನಲ್ಲಿ ಈಗಾಗಲೇ ಇರುವ ಹೊರ ರೋಗ ವಿಭಾಗ ಇಕ್ಕಟ್ಟಾಗಿದ್ದು, ಹೆಚ್ಚಿನ ಮೂಲ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಒಂದೊಂದು ವಿಭಾಗ ಒಂದೊಂದು ಕಡೆ ಇರುವ ಕಾರಣ ರೋಗಿ ಗಳಿಗೂ ಸಮಸ್ಯೆ ಉಂಟಾಗುತ್ತಿದೆ. ಇದೇ ಕಾರಣಕ್ಕೆ  ಇಲ್ಲಿರುವ ಕೆಲವೊಂದು ಅನ್ಯ ಸೇವೆಗಳನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಈ ಮೂಲಕ ಹೊರ ರೋಗಿ ವಿಭಾಗಕ್ಕೆ ಹೆಚ್ಚಿನ ಸ್ಥಳಾವಕಾಶ ದೊರೆಯಲಿದೆ. ಒಂದೇ ಸೂರಿನಡಿ ಎಲ್ಲ ರೀತಿಯ ಸಮಸ್ಯೆ ಗಳಿಗೆ ಚಿಕಿತ್ಸೆ ಸಿಗುವಂತೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ.

ಸದ್ಯ ವಾರ್ಡ್‌, ಔಷಧ ವಿಭಾಗ, ಶಸ್ತ್ರಚಿಕಿತ್ಸಾ ಕೊಠಡಿ ಸಹಿತ ಕೆಲವೊಂದು ವಿಭಾಗ ಅಲ್ಲಲ್ಲಿ ಇದೆ. ಹಳೆ ವೆನ್ಲಾಕ್ ಆಸ್ಪತ್ರೆಯಲ್ಲಿರುವ ಔಷಧ ವಿಭಾಗ (ರೂಂ.ನಂ.16) ತೀರಾ ಇಕ್ಕಟ್ಟಾಗಿದ್ದು, ಸೀಮಿತ ಸಂಖ್ಯೆಯ ಸಾರ್ವಜನಿಕರು ನಿಲ್ಲಲು ಅವಕಾಶ ಇದೆ. ವೆನ್ಲಾಕ್ ಆಸ್ಪತ್ರೆಯ ಹೊಸ ಸರ್ಜರಿ ಬ್ಲಾಕ್‌ ಬಳಿ ಪ್ರತ್ಯೇಕ ಸ್ಥಳಾವಕಾಶವಿದ್ದು, ಅಲ್ಲಿಗೆ ಮೆಡಿಸಿನ್‌ ವಿಭಾಗವನ್ನು ಸ್ಥಳಾಂತರಿಸಲು ನಿರ್ಧಾರ ಮಾಡಲಾ ಗಿದೆ. ಆಗ ಹೊರ ರೋಗಿ ವಿಭಾಗದಲ್ಲಿ ಹೆಚ್ಚಿನ ಸ್ಥಳಾವಕಾಶ ಸಿಗಲಿದೆ. ಇದರಿಂದ ಇಲ್ಲಿನ ಚುಚ್ಚುಮದ್ದು ಕೊಠಡಿ ಸಹಿತ ಇತರ ವಿಭಾಗವನ್ನು ವಿಸ್ತರಿಸಲು ಸಾಧ್ಯವಾಗುತ್ತದೆ. ಹಳೆ ಆಸ್ಪತ್ರೆಯಲ್ಲಿರುವ ಮೂಳೆ ವಿಭಾಗ, ಜನರಲ್‌ ಸರ್ಜರಿ ವಿಭಾಗವನ್ನು ಇತ್ತೀಚೆಗೆ ಉದ್ಘಾಟನೆಗೊಂಡ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಡಿಸೆಂಬರ್‌ನಲ್ಲಿ ಸ್ಥಳಾಂತರ ಮಾಡಲಾಗುತ್ತದೆ.

ಮೂಲ ವ್ಯವಸ್ಥೆ ಕಲ್ಪಿಸಲು ನಿರ್ಧಾರ
ವೆನ್ಲಾಕ್ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಇನ್ನಷ್ಟು ಮೂಲ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಲಾಗಿದೆ. ಆಸ್ಪತ್ರೆಯಲ್ಲಿ ಈಗಿರುವ ಹೊರ ರೋಗಿ ವಿಭಾಗ ತೀರಾ ಇಕ್ಕಟ್ಟಾಗಿದೆ. ಇದೇ ಕಾರಣಕ್ಕೆ ಔಷಧ ವಿಭಾಗ ಸಹಿತ ಕೆಲವೊಂದು ವಿಭಾಗವನ್ನು ಸ್ಥಳಾಂತರಿಸಿ, ಹೊರ ರೋಗಿಗಳಿಗೆ ಒಂದೇ ಸೂರಿನಡಿ ಹೆಚ್ಚಿನ ಸೌಲಭ್ಯ ಸಿಗುವಂತೆ ಮಾಡುತ್ತೇವೆ.
-ಡಾ| ಶಿವಕುಮಾರ್‌, ವೆನ್ಲಾಕ್ ಆಸ್ಪತ್ರೆ ಅಧೀಕ್ಷಕ

ಹಲವು ಜಿಲ್ಲೆಗೆ ‘ವೆನ್ಲಾಕ್’ ಆಸರೆ
ವೆನ್ಲಾಕ್ ಆಸ್ಪತ್ರೆಗೆ ಹತ್ತಿರದ ಸುಮಾರು ಎಂಟು ಜಿಲ್ಲೆಗಳಿಂದ ರೋಗಿಗಳು ಚಿಕಿತ್ಸೆಗೆಂದು ಬರುತ್ತದೆ. ಪ್ರಮುಖವಾಗಿ ದ. ಕ., ಉಡುಪಿ, ಚಿಕ್ಕಮಗಳೂರು, ಕಾರವಾರ, ಕಾಸರಗೋಡು, ಕೊಡಗು, ಹಾಸನ, ಶಿವಮೊಗ್ಗ ಜಿಲ್ಲೆಯ ಮಂದಿಯೂ ಚಿಕಿತ್ಸೆಗೆ ಇದೇ ಆಸ್ಪತ್ರೆಗೆ ಬರುತ್ತಾರೆ. ಕ್ಲಿಷ್ಪ ಖಾಯಿಲೆ ಕಾರಣಕ್ಕೆ ತಾಲೂಕು ಆಸ್ಪತ್ರೆಗಳಿಂದ ಬಹುತೇಕ ಪ್ರಕರಣಗಳು ಇಲ್ಲಿಗೆ ಶಿಫಾರಸ್ಸು ಮಾಡಲಾಗುತ್ತದೆ. ದಿನದ 24 ಗಂಟೆಯೂ ಆಸ್ಪತ್ರೆಯನ್ನು ಚಿಕಿತ್ಸೆ ನೀಡಲಾಗುತ್ತಿದೆ.

Advertisement

ಹೊಸ ಒಪಿಡಿ ವಿಭಾಗಕ್ಕೆ  ಬೇಡಿಕೆ
ವೆನ್ಲಾಕ್ ಆಸ್ಪತ್ರೆಯಲ್ಲಿ ಸರ್ಜಿಕಲ್‌ ಬ್ಲಾಕ್‌, ಮೆಡಿಸಿನ್‌ ಬ್ಲಾಕ್‌, ಮಕ್ಕಳ ಆಸ್ಪತ್ರೆ, ಆಡಳಿತ ವಿಭಾಗ ಪ್ರತ್ಯೇಕ ವಾಗಿದ್ದು, ಆದೇ ರೀತಿ, ಕೇವಲ ಹೊರ ರೋಗಿ ವಿಭಾಗಕ್ಕೆ ಪ್ರತ್ಯೇಕ ಕಟ್ಟಡದ ಬೇಡಿಕೆಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಕೆ ಮಾಡಲಾಗಿದೆ. ಕೆಲವು ದಿನಗಳ ಹಿಂದೆ ಆರೋಗ್ಯ ಸಚಿವ ದಿನೇಶ್‌ ಗುಂಡೂ ರಾವ್‌ ಅವರ ಅಧ್ಯಕ್ಷತೆಯಲ್ಲಿ ನಡೆದ

ಸಭೆಯಲ್ಲಿ ಈ ಬೇಡಿಕೆ ಇಡಲಾಗಿದೆ. ಈ ನಿಟ್ಟಿನಲ್ಲಿ ಕೆಎಂಸಿ ಆಸ್ಪತ್ರೆಯ ಆಡಳಿತ ವಿಭಾಗದ ಜತೆ ಮಾತುಕತೆ ನಡೆಸಲಾಗಿದೆ. ಸದ್ಯದಲ್ಲೇ ಮುಖ್ಯಮಂತ್ರಿಗಳ ಜತೆ ವಿಚಾರ ಪ್ರಸ್ತಾವಿಸಲು ನಿರ್ಧಾರ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next