Advertisement

Development Flatform: 340 ಯೋಜನೆಗೆ “ಪ್ರಗತಿ’ ಸಾಥ್‌: ಆಕ್ಸ್‌ಫ‌ರ್ಡ್‌ ವಿವಿ

04:26 AM Dec 04, 2024 | Team Udayavani |

ಹೊಸದಿಲ್ಲಿ: ಕಳೆದ 20 ವರ್ಷಗಳಿಂದ ವಿಳಂಬವಾಗುತ್ತಿದ್ದ ಯೋಜನೆಗಳೂ ಸೇರಿ 2023ರ ವೇಳೆಗೆ ಭಾರತದಾದ್ಯಂತ 17 ಲಕ್ಷ ಕೋಟಿ ರೂ. ಮೌಲ್ಯದ 340 ಯೋಜನೆಗಳನ್ನು ಕೇಂದ್ರದ ಮಹತ್ವಾ­ಕಾಂಕ್ಷೆಯ “ಪ್ರಗತಿ’ ಪ್ಲಾಟ್‌ಫಾರ್ಮ್ ವೇಗಗೊಳಿಸಿದೆ. ಹೀಗೆಂದು ಆಕ್ಸ್‌ ಫ‌ರ್ಡ್‌ ವಿವಿಯ “ಗ್ರಿಡ್‌ಲಾಕ್‌ ಟು ಗ್ರೋಥ್‌’ ಎಂಬ ವರದಿ ಉಲ್ಲೇಖಿಸಿದೆ.

Advertisement

ಬೆಂಗಳೂರಿನಲ್ಲಿ ಐಐಎಂನಲ್ಲಿ ಈ ವರದಿಯನ್ನು ಬಿಡುಗಡೆಗೊಳಿಸಲಾ ಗಿದೆ. ಅಧ್ಯಯನವು 340 ಪ್ರಗತಿ ಮೂಲ ಸೌಕರ್ಯ ಯೋಜನೆಗಳ ಪೈಕಿ 8 ಯೋಜನೆ­ಗಳನ್ನು ಪರಿಶೀಲಿಸಿದೆ. ಈ ಯೋಜನೆಗಳ ಪೈಕಿ ಬೆಂಗ ಳೂರು ಮೆಟ್ರೋ, ಜಮ್ಮು- ಉಧಂಪುರ, ಶ್ರೀನಗರ, ಬಾರಾಮುಲ್ಲಾ ಲಿಂಕ್‌, ವಾರಾಣಸಿ-ಔರಂಗ­ಬಾದ್‌ ರಾಷ್ಟ್ರೀಯ ಹೆದ್ದಾರಿ -2, ನವಿ ಮುಂಬ ಯಿ ವಿಮಾನ ನಿಲ್ದಾಣವೂ ಸೇರಿದೆ ಎಂದು ಆಕ್ಸ್‌ಫ‌ರ್ಡ್‌ನ ಸೈದ್‌ ಬಿಸಿನೆಸ್‌ ಸ್ಕೂಲ್‌ನ ಡೀನ್‌ ಸೌಮಿತ್ರಾ ದತ್ತಾ ತಿಳಿಸಿದ್ದಾರೆ.

ಭಾರತದ ಮೂಲಸೌಕರ್ಯ ಯೋಜನೆ ಕ್ಷಿಪ್ರಗೊಳಿಸಲು ಕೇಂದ್ರ ಮತ್ತು ರಾಜ್ಯದ ಅಧಿಕಾರಿಗಳನ್ನು ಒಟ್ಟುಗೂಡಿಸಿ ಸಹ­ಯೋ­ಗವನ್ನು ಸಕ್ರಿಯಗೊ­ಳಿ­ಸಲೆಂದು “ಪ್ರಗತಿ’ (ಕ್ಷಿಪ್ರ ಯೋಜನೆ ನಿರೂಪಣೆ ಹಾಗೂ ಸಕಾಲಿಕ ಅನು­ಷ್ಠಾನ) ಪ್ಲಾಟ್‌ಫಾರ್ಮ್ ಅನ್ನು 2015ರಲ್ಲಿ ಪ್ರಧಾನಿ ಮೋದಿ ಉದ್ಘಾಟಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next