Advertisement

ಕನ್ನಡ ನಟ, ನಟಿಯರಿಗೆ ರಾಜಕೀಯ ಹೊಸದೇನಲ್ಲ

08:05 AM Aug 13, 2017 | |

ಬೆಂಗಳೂರು: ಕನ್ನಡದ ಬಹುಮುಖೀ ಪ್ರತಿಭಾವಂತ ಕಲಾವಿದ ಉಪೇಂದ್ರ ಹೊಸ ರಾಜಕೀಯ ಪಕ್ಷ ಸ್ಥಾಪನೆಗೆ ಹೊರಟಿದ್ದಾರೆ. ಆದರೆ ರಾಜ್ಯದ ಮಟ್ಟಿಗೆ ಕನ್ನಡ ನಟ-ನಟಿಯರ ರಾಜಕೀಯ ಪ್ರವೇಶ ಹೊಸತಲ್ಲ. ಆದರೆ, ಹೊಸ ರಾಜಕೀಯ ಪಕ್ಷ ಅಥವಾ ರಾಜಕೀಯ ಸ್ವರೂಪದ ಆಂದೋಲನ ಆರಂಭಿಸಿದ ಉದಾಹರಣೆಗಳಿಲ್ಲ. ಈ ವಿಚಾರದಲ್ಲಿ ಉಪೇಂದ್ರ ಅವರದೇ ಮೊದಲ ಪ್ರಯೋಗ.

Advertisement

ಕರ್ನಾಟಕದಲ್ಲಿ ಚಿತ್ರ ನಟ-ನಟಿಯರಿಗೆ ಮೊದಲಿನಿಂದಲೂ ರಾಜಕಾರಣದ ನಂಟಿದೆ. ಶಂಕರ್‌ನಾಗ್‌, ಅನಂತ್‌ನಾಗ್‌,
ಟೈಗರ್‌ ಪ್ರಭಾಕರ್‌, ಅಂಬರೀಶ್‌, ದ್ವಾರಕೀಶ್‌, ಶಶಿಕುಮಾರ್‌, ಕುಮಾರ್‌ ಬಂಗಾರಪ್ಪ, ಮುಖ್ಯಮಂತ್ರಿ ಚಂದ್ರು, ಜಗ್ಗೇಶ್‌, ಬಿ.ಸಿ.ಪಾಟೀಲ್‌, ಪ್ರೇಮ್‌, ಸಿ.ಪಿ.ಯೋಗೇಶ್ವರ್‌, ಸಾಯಿಕುಮಾರ್‌, ಜಯಂತಿ, ಉಮಾಶ್ರೀ, ರಕ್ಷಿತಾ, ರಮ್ಯಾ,ತಾರಾ, ಮಾಳವಿಕಾ, ಶೃತಿ, ಭಾವನಾ, ಜಯಮಾಲಾ, ಪೂಜಾಗಾಂಧಿ ಮತ್ತಿತರರು ಚುನಾವಣೆ ವೇಳೆ ರಾಜಕಾರಣ ಪ್ರವೇಶಿಸಿ ಆದೃಷ್ಟ ಪರೀಕ್ಷಿಸಿ ನಂತರ ರಾಜಕೀಯ ಸಹವಾಸವೇ ಸಾಕು ಎಂದು ಕೈ ಮುಗಿದಿದ್ದೂ ಇದೆ.

ಜಯಂತಿ ಮೊದಲು ಲೋಕಶಕ್ತಿ, ನಂತರ ಜನತಾದಳದಿಂದ ಲೋಕಸಭೆ ಹಾಗೂ ವಿಧಾನಸಭೆ ಎರಡೂ ಕಡೆ ಸ್ಪರ್ಧಿಸಿದ್ದರು.
ಶಶಿಕುಮಾರ್‌ ಜನತಾದಳದಿಂದ ಚಿತ್ರದುರ್ಗದಿಂದ ಸ್ಪರ್ಧಿಸಿ ಸಂಸದರಾ ಗಿದ್ದರು. ಮುಖ್ಯಮಂತ್ರಿ ಚಂದ್ರು ಬಿಜೆಪಿಯಿಂದ ಗೌರಿಬಿದನೂರಿನಿಂದ ಶಾಸಕರಾಗಿ ನಂತರ ನೇರ ಚುನಾವಣೆ ಸಹವಾಸ ಬಿಟ್ಟು ವಿಧಾನಪರಿಷತ್‌ ಮೂಲಕ ಪ್ರವೇಶ ಪಡೆದಿದ್ದರು. ಅನಂತ್‌ನಾಗ್‌ ಜನತಾದಳದಿಂದ ಮಲ್ಲೇಶ್ವರಂ ಕ್ಷೇತ್ರದಿಂದ ಶಾಸಕರಾಗಿ ನಗರಾಭಿವೃದಿಟಛಿ ಸಚಿವರಾಗಿಯೂ
ಕೆಲಸ ಮಾಡಿದ್ದರು.

ಅಂಬರೀಶ್‌ ಜನತಾದಳದಿಂದ ರಾಜಕೀಯ ಆರಂಭಿಸಿ ರಾಮನಗರದಿಂದ ಸ್ಪರ್ಧಿಸಿ ಸೋತಿದ್ದರು. ನಂತರ ಮಂಡ್ಯ
ಲೋಕಸಭೆ ಕ್ಷೇತ್ರದಿಂದ ಒಂದು ಬಾರಿ ಜನತಾದಳದಿಂದ ಎರಡು ಬಾರಿ ಕಾಂಗ್ರೆಸ್‌ನಿಂದ ಗೆದ್ದು ಕೇಂದ್ರ ಸಚಿವರೂ
ಆಗಿದ್ದರು. ನಂತರ ಮಂಡ್ಯದಿಂದ ಗೆದ್ದು ಮಂತ್ರಿಯಾಗಿದ್ದರು. ರಾಮಕೃಷ್ಣ ಹೆಗಡೆ, ದೇವೇಗೌಡ, ಪಟೇಲ್‌, ಬೊಮ್ಮಾಯಿ ಅವರಂತಹ ಘಟಾ ನುಘಟಿಗಳ ಸಂಪರ್ಕವಿದ್ದರೂ ಶಂಕರ್‌ ನಾಗ್‌ ನೇರ ಚುನಾವಣೆಗೆ ಇಳಿಯದಿದ್ದರೂ ಸ್ವತ್ಛ ರಾಜಕಾರಣದ ಕನಸು ಕಂಡವರು. ಅಂಬರೀಶ್‌, ಸಿ.ಪಿ.ಯೋಗೇಶ್ವರ್‌, ಜಗ್ಗೇಶ್‌, ಕುಮಾರ್‌ ಬಂಗಾರಪ್ಪ, ಶಶಿಕುಮಾರ್‌, ಬಿ.ಸಿ.ಪಾಟೀಲ್‌, ಉಮಾಶ್ರೀ,ತಾರಾ, ಭಾವನಾ, ರಕ್ಷಿತಾ, ರಮ್ಯಾ ಮತ್ತಿತರರು ಈಗಲೂ ಸಕ್ರಿಯರಾಗಿದ್ದಾರೆ. ತಾರಾ, ಜಯಮಾಲಾ ವಿಧಾನಪರಿಷತ್‌ ಸದಸ್ಯರಾಗಿ ವಿಧಾನಸೌಧ ಪ್ರವೇಶ ಪಡೆದು ಸಕ್ರಿಯವಾಗಿದ್ದಾರೆ.

ಹಿಂದೊಮ್ಮೆ ವರನಟ ಡಾ.ರಾಜ್‌ ಕುಮಾರ್‌, ವಿಷ್ಣುವರ್ಧನ್‌, ಆರತಿ, ಬಿ. ಸರೋಜಾದೇವಿ, ಮಂಜುಳ ಅವರನ್ನು
ರಾಜಕಾರಣಕ್ಕೆ ಸೆಳೆಯುವ ಪ್ರಯತ್ನ ಯಶಸ್ವಿಯಾಗಿರಲಿಲ್ಲ. ಗೋಕಾಕ್‌ ಚಳವಳಿ ಸಂದರ್ಭದಲ್ಲಿ ಇನ್ನೇನು ರಾಜ್‌ಕುಮಾರ್‌
ರಾಜಕೀಯಕ್ಕೆ ಬಂದೇ ಬಿಟ್ಟರು ಎಂಬ ಗುಸು ಗುಸು ಹಬ್ಬಿತ್ತು. ಆಗಿನ ಮುಖ್ಯಮಂತ್ರಿಯಾಗಿದ್ದ ಎಸ್‌.ಬಂಗಾರಪ್ಪ ಅವರ ಪುತ್ರಿ
ಗೀತಾ ಅವರನ್ನು ಶಿವರಾಜ್‌ಕುಮಾರ್‌ ವಿವಾಹವಾದಾಗ ಮತ್ತೆ ಅಂತದ್ದೊಂದು ಮಾತುಗಳು ಕೇಳಿಬಂದಿದ್ದವು.

Advertisement

ಆಂಧ್ರ-ತಮಿಳುನಾಡಲ್ಲಿ ಯಶಸ್ವಿ
ನೆರೆಯ ಆಂಧ್ರಪ್ರದೇಶ-ತಮಿಳುನಾಡಿನಲ್ಲಿ ಎನ್‌.ಟಿ.ರಾಮರಾವ್‌, ಎಂಜಿಆರ್‌ ಮುಂತಾದ ನಟರು ಹೊಸ ಪಕ್ಷ ಸ್ಥಾಪನೆ ಮಾಡಿ ಯಶಸ್ಸು ಕಂಡಿದ್ದಾರೆ.ಚಿರಂಜೀವಿ ಪ್ರಜಾರಾಜ್ಯಂ ಪಕ್ಷ ಕಟ್ಟಿ ನಂತರ ಕಾಂಗ್ರೆಸ್‌ನಲ್ಲಿ ವಿಲೀನ ಮಾಡಿದರು. ಪವನ್‌ಕಲ್ಯಾಣ್‌ ಜನಸೇನಾ ಎಂಬ ಸಂಘಟನೆ ಸ್ಥಾಪಿಸಿ ಅದನ್ನು ರಾಜಕೀಯ ಪಕ್ಷವಾಗಿಸಿದ್ದಾರೆ. ಸೂಪರ್‌ಸ್ಟಾರ್‌ ರಜನೀಕಾಂತ್‌ ಹಾಗೂ ಕಮಲ್‌ಹಾಸನ್‌
ರಾಜಕೀಯಕ್ಕೆ ಬರ್ತಾರೆ, ಹೊಸ ಪಕ್ಷ ಕಟಾ¤ರೆ ಎಂಬ ಗುಸುಗುಸು ಇವೆ.

– ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next